ಬುಧವಾರ, ಏಪ್ರಿಲ್ 30, 2025
HomebusinessPaytm : ಸ್ವಾತಂತ್ರ್ಯೋತ್ಸವಕ್ಕೆ ಭರ್ಜರಿ ಆಫರ್​ ಕೊಟ್ಟ ಪೇಟಿಯಂ

Paytm : ಸ್ವಾತಂತ್ರ್ಯೋತ್ಸವಕ್ಕೆ ಭರ್ಜರಿ ಆಫರ್​ ಕೊಟ್ಟ ಪೇಟಿಯಂ

- Advertisement -

ನವದೆಹಲಿ : ದೇಶದಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮ. ಈ ನಡುವಲ್ಲೇ ಪ್ರತಿಷ್ಠಿತ ಕಂಪೆನಿಗಳು ವಿಶೇಷ ಆಫರ್‌ ಘೋಷಣೆ ಮಾಡುತ್ತಿವೆ. ಇದೀಗ ಪೇಟಿಯಂ ಮಾಲ್‌ ತನ್ನ ಗ್ರಾಹಕರಿಗೆ ಭರ್ಜರಿ ಆಫರ್‌ ಕೊಟ್ಟಿದೆ. ಆನ್‌ಲೈನ್‌ ಖರೀದಿಯ ಮೇಲೆ ಶೇ. 70 ರಷ್ಟು ರಿಯಾಯಿತಿ ಘೋಷಿಸಿದೆ.

ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಒಂದೇ ದಿನ ಬಾಕಿ ಉಳಿದಿದೆ. ಈಗಾಗಲೇ ಆನ್​ಲೈನ್​ ಇ-ಕಾಮರ್ಸ್​ ಮಳಿಗೆಗಳು ಆಫರ್​ಗಳನ್ನು ಹೊತ್ತುತಂದಿದೆ. ಕಡಿಮೆ ಬೆಲೆಗೆ ಆಕರ್ಷಕ ವಸ್ತುಗಳನ್ನು ಖರೀದಿಸುವ ಅವಕಾಶ ನೀಡುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ ಅಮೆಜಾನ್​, ಫ್ಲಿಪ್​ಕಾರ್ಟ್​ನಂತೆಯೇ ಪೇಟಿಯಂ ಮಾಲ್​ ಕೂಡ ಆಫರ್​ ಘೋಷಿಸಿದ್ದು, ರಿಯಾಯಿತಿ ದರದ ಕೊಡುಗೆ ನೀಡುತ್ತಿದೆ.

ಆಗಸ್ಟ್​ 15ರವರೆಗೆ ಪೇಟಿಯಂ ಸೇಲ್​ ನಡೆಸುತ್ತಿದೆ. ಸ್ಮಾರ್ಟ್​ಫೋನ್​, ಸ್ಮಾರ್ಟ್​ವಾಚ್​, ಟ್ಯಾಬ್ಲೆಟ್​ ಸೇರಿದಂತೆ ಇತರೆ ಗ್ಯಾಜೆಟ್ಸ್​ಗಳನ್ನು ಕಡಿಮೆ ಹಾಗೂ ಆಫರ್​ ಬೆಲೆ ಮಾರಾಟ ಮಾಡುತ್ತಿದೆ. ಆ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.

ಆ್ಯಂಡ್ರಾಯ್ಡ್​, ಐಫೋನ್​​ಗಳನ್ನ ಪೇಟಿಯಂ ಆಯೋಜಿಸಿರುವ ವಿಶೇಷ ಸೇಲ್​ನಲ್ಲಿ ಖರೀದಿಸಬಹುಸಾಗಿದೆ. ಗ್ರಾಹಕರಿಗಾಗಿ ಸ್ಮಾರ್ಟ್​ಫೋನ್​​ಗಳ ಮೇಲೆ ಶೇ.40 ರಷ್ಟು ರಿಯಾಯಿತಿ ನೀಡಿದೆ. ಅದರ ಜತೆಗೆ ಫೀಚರ್​ ಫೋನ್​ಗಳ ಮೇಲೂ ಆಫರ್​ ಒದಗಿಸಿದೆ. ಶೇ 50ರಷ್ಟು ರಿಯಾಯಿತಿಯಲ್ಲಿ ಫೀಚರ್​ ಫೋನ್​ ಕೊಂಡುಕೊಳ್ಳಬಹುದಾಗಿದೆ.

ಇನ್ನು ಟ್ಯಾಬ್ಲೆಟ್​ ಸಾಧನವನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಖರೀದಿಸಬೇಕೆಂದುಕೊಂಡಿದ್ದವರು ಶೇ.50 ರಷ್ಟು ರಿಯಾಯಿತಿಯಲ್ಲಿ ಕೊಂಡುಕೊಳ್ಳಬಹುದುದಾಗಿದೆ. ಇಷ್ಟು ಮಾತ್ರವಲ್ಲದೆ, ಬಳಸಿದ ಸ್ಮಾರ್ಟ್​ಫೋನ್​ಗಳನ್ನು ಖರೀದಿಸಲು ಅವಕಾಶವಿದೆ. ಅವುಗಳ ಮೇಲೆ ಶೇ. 70 ರಷ್ಟು ರಿಯಾಯಿತಿ ಘೋಷಿಸಿದೆ.

RELATED ARTICLES

Most Popular