Duniya vijay: ಸಲಗ ಬಳಗಕ್ಕೆ ಮತ್ತೆ ಶಾಕ್…..! ದುನಿಯಾ ವಿಜಯ್ ಅಭಿಮಾನಿಗಳಿಗೆ ಕಹಿಸುದ್ದಿ…!!

ಕೆಲದಿನಗಳ ಹಿಂದೆಯಷ್ಟೇ ತಾಯಿಯನ್ನು ಕಳೆದುಕೊಂಡಿದ್ದ ದುಃಖದಲ್ಲಿದ್ದ ನಟ ದುನಿಯಾ ವಿಜಯ್ ಗೆ ಮತ್ತೊಂದು ಶಾಕ್ ಎದುರಾಗಿದೆ. ವಿಜಯ್ ನಿರ್ದೇಶನದ ಚಿತ್ರ ಸಲಗ ಮತ್ತೆ ತೆರೆಗೆ ಬರೋದು ವಿಳಂಬವಾಗಲಿದೆ.

ಕೊರೋನಾ ಎರಡನೇ ಅಲೆ ತಗ್ಗಿರೋದರಿಂದ ರಾಜ್ಯದಲ್ಲಿ ಥಿಯೇಟರ್ ಗಳಿಗೆ ಇನ್ನು ಕೆಲವೇ ದಿನದಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಪ್ರವೇಶಾವಕಾಶ ಸಿಗಲಿದೆ ಎನ್ನಲಾಗುತ್ತಿತ್ತು. ಇದನ್ನು ನಂಬಿಕೊಂಡು ನಟ ದುನಿಯಾ ವಿಜಯ್ ಹಾಗೂ ಸಲಗ ತಂಡ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿನಿಮಾ ತೆರೆಗೆ ತರೋ ಸಿದ್ಧತೆಯಲ್ಲಿದ್ದರು.

ಸಲಗ ಚಿತ್ರ ಅಗಸ್ಟ್ 20 ರಂದು ತೆರೆಗೆ ಬರಲಿದೆ ಅಂತ ಅನೌನ್ಸ್ ಮಾಡಿತ್ತು ಚಿತ್ರತಂಡ. ಆದರೆ ಈಗ ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕು ಉಲ್ಬಣಿಸಿದ್ದು, ಕೆಲ ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡುವ ಅನಿವಾರ್ಯತೆ ಎದುರಾಗಿದೆ.

ಹೀಗಾಗಿ ಚಿತ್ರಮಂದಿರದಲ್ಲಿ ನೂರಕ್ಕೆ ನೂರು ಪ್ರವೇಶಾವಕಾಶ ಕೇಳಿದ್ದ ವಾಣಿಜ್ಯ ಮಂಡಳಿಗೆ ಸಿಎಂ ಸಪ್ಟೆಂಬರ್ 2 ರವರೆಗೆ ಕಾಯ್ದುನೋಡುವಂತೆ. ಆ ಬಳಿಕ ತಜ್ಞರ ಸಲಹೆ ಪಡೆದು ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದಾರೆ.

ಹೀಗಾಗಿ ಸಲಗ ತಂಡ ಸಪ್ಟೆಂಬರ್ 2 ರವರೆಗೆ ಕಾಯ್ದುನೋಡುವ ತಂತ್ರಕ್ಕೆ ತಲೆಬಾಗಿದ್ದು, ಅಗಸ್ಟ್ 20 ರಂದು ರಿಲೀಸ್ ಆಗಬೇಕಿದ್ದ ಸಿನಿಮಾ ಬಿಡುಗಡೆಯನ್ನು ಮುಂದೂಡಿದ್ದು, ಸಪ್ಟೆಂಬರ್ 2 ರ ನಂತರ ಚಿತ್ರ ತೆರೆಗೆ ತರಲು ಯೋಚಿಸಿದೆ.ಹೀಗಾಗಿ ಶೂಟಿಂಗ್, ಮೇಕಿಂಗ್,ಟ್ರೇಲರ್ ವೇಳೆಯೇ ಸಾಕಷ್ಟು ಸದ್ದು ಮಾಡಿದ ಸಲಗ ಸಿನಿಮಾ ನೋಡೋಕೆ ಕಾದಿದ್ದ ದುನಿಯಾ ವಿಜಯ್ ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ.

Comments are closed.