Filmcity: ಕರ್ನಾಟಕದಲ್ಲೇ ತಲೆಎತ್ತಲಿದೆ 175 ಕೋಟಿ ವೆಚ್ಚದ ವೈಭವೋಪೇತ ಫಿಲ್ಮಂಸಿಟಿ….! ನಿರ್ಮಾಣಕ್ಕೆ ಮುನ್ನುಡಿ ಬರೆದ ಉಮಾಪತಿ…!!

25 ಕೋಟಿ ವಿವಾದದಿಂದ ಸುದ್ದಿಯಾದ ರಾಬರ್ಟ್ ನಿರ್ಮಾಪಕ ಉಮಾಪತಿ ತಮ್ಮ ಕನಸೊಂದನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದು, ಕಾರ್ಯಾರಂಭ ಮಾಡಿದ್ದಾರೆ. ಕರ್ನಾಟಕಕ್ಕೊಂದು ಫಿಲ್ಮಂ ಸಿಟಿ ನಿರ್ಮಿಸುವ ಉದ್ದೇಶದಿಂದ ಭೂಮಿಪೂಜೆ ನೆರವೇರಿಸಿದ್ದಾರೆ.

ಕನಕಪುರ ರಸ್ತೆಯಲ್ಲಿನ ತಮ್ಮ ಸ್ವಂತ ಭೂಮಿಯಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ವೈಭವೋಪೇತ ಫಿಲ್ಮಂ ಸಿಟಿ ನಿರ್ಮಾಣಕ್ಕೆ ಉಮಾಪತಿ ಸಂಕಲ್ಪ ಮಾಡಿದ್ದು, ನಾಗರಪಂಚಮಿಯ ಶುಭದಿನದಂದು ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಭೂಮಿ ಪೂಜೆ ನೆರವೇರಿಸಿದ್ದಾರೆ.

25 ಎಕರೆ ಜಾಗದಲ್ಲಿ ಒಟ್ಟು 175 ಕೋಟಿ ಬಂಡವಾಳದಲ್ಲಿ ಫಿಲ್ಮಂ ಸಿಟಿ ನಿರ್ಮಾಣವಾಗಲಿದ್ದು, ಮುಂದಿನ ವರ್ಷದ ವೇಳೆಗೆ ಶೂಟಿಂಗ್ ಗೆ ಲಭ್ಯವಾಗಲಿದೆ ಎಂದು ಉಮಾಪತಿ ವಿವರಣೆ ನೀಡಿದ್ದಾರೆ.ಫಿಲ್ಮಂ ಸಿಟಿಯನ್ನು ಅದ್ದೂರಿಯಾಗಿ ನಿರ್ಮಿಸುವ ನಿಟ್ಟಿನಲ್ಲಿ ಉಮಾಪತಿ ವಿದೇಶದಿಂದ ತಂತ್ರಜ್ಞರನ್ನು ಕರೆಸಲು ನಿರ್ಧರಿಸಿದ್ದು, ಕರ್ನಾಟಕದ ಮೊದಲ ಫಿಲ್ಮಂ ಸಿಟಿಯನ್ನು ಸಜ್ಜುಗೊಳಿಸಲು ಕೋಟ್ಯಾಧೀಶ್ವರ ಉಮಾಪತಿ ಸಿದ್ಧವಾಗಿದ್ದಾರೆ.

ಮೂಲತಃ ಶ್ರೀಮಂತ ಮನೆತನದಿಂದ ಬಂದ ಉಮಾಪತಿ, ತಂದೆ ಹಾಗೂ ತಾತ ಶ್ರೀಮಂತರು. ಹೆಬ್ಬುಲಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ನಿರ್ಮಾಪಕರಾಗಿ ಎಂಟ್ರಿಕೊಟ್ಟ ಉಮಾಪತಿ ದರ್ಶನ್ ಗಾಗಿ ರಾಬರ್ಟ್ ಸಿನಿಮಾ ನಿರ್ಮಿಸಿ ಗೆದ್ದಿದ್ದರು.

ಸದ್ಯ ಶ್ರೀಮುರುಳಿಗಾಗಿ ಮದಗಜ ಸಿನಿಮಾ ನಿರ್ಮಿಸುತ್ತಿರುವ ಉಮಾಪತಿ 25 ಸಾಲ ಪ್ರಕರಣದಲ್ಲಿ ದರ್ಶನ್ ಜೊತೆ ಮುನಿಸಿಕೊಂಡಿದ್ದಾರೆ. ಆದರೆ ಹಿಂದೊಮ್ಮೆ ಕನ್ನಡಕ್ಕೊಂದು ಫಿಲ್ಮಂ ನಿರ್ಮಿಸುವ ಕನಸಿದೆ ಎಂದಿದ್ದ ಉಮಾಪತಿ ತಮ್ಮ ಕನಸು ಈಡೇರಿಸಿಕೊಳ್ಳಲು ಬದ್ಧತೆ ತೋರಿದ್ದಾರೆ.

Comments are closed.