ಗದಂಗರಕ್ಕಮ್ಮನ್ನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಶ್ರೀಲಂಕಾ ಸುಂದರಿ ಜಾಕ್ವಲಿನ್ ಫರ್ನಾಂಡಿಸ್, ಸಖತ್ ಮಿಂಚುತ್ತಿದ್ದಾರೆ. ವಿಕ್ರಾಂತ್ ರೋಣ ಸೆಟ್ ನಲ್ಲಿ ಜಾಕ್ವಲಿನ್ ಫರ್ನಾಂಡಿಸ್ ಸ್ಪೆಶಲ್ ಪೋಟೋಶೂಟ್ ನಡೆಸಿದ್ದು, ಪೋಟೋಗಳು ಪಡ್ಡೆಗಳ ಹೃದಯ ಬಡಿತ ಹೆಚ್ಚಿಸಿದೆ.

ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬರ್ತಿರೋ ವಿಕ್ರಾಂತ ರೋಣ ಸಿನಿಮಾದ ಐಟಂ ಸಾಂಗ್ ವೊಂದಕ್ಕಾಗಿ ಜಾಕ್ವಲಿನ್ ಚಂದನವನಕ್ಕೆ ಕಾಲಿಟ್ಟಿದ್ದಾರೆ.

ಐಟಂಸಾಂಗ್ ಗೆ ಬಂದ ಬೆಡಗಿ ವಿಕ್ರಾಂತ ರೋಣ ಮೇಕಿಂಗ್ ನೋಡಿ ಖುಷಿಯಾಗಿದ್ದು, ಸ್ಪೆಶಲ್ ಪಾತ್ರವೊಂದರಲ್ಲೂ ನಟಿಸಿದ್ದಾರೆ.

ಹೀಗೆ ಐಟಂ ಸಾಂಗ್ ಗೆ ಹೆಜ್ಜೆ ಹಾಕೋ ವೇಳೆ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರೋ ಜಾಕ್ವಲಿನ್ ಅದೇ ಬಟ್ಟೆಯಲ್ಲಿ ಸ್ಪೆಶಲ್ ಪೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ.

ಏಳನೀರು ತೋಟದಲ್ಲಿ ಜಾಕ್ವಲಿನ್ ಕೊಟ್ಟ ಹಾಟ್ ಪೋಸ್ ನೋಡಿ ಪಡ್ಡೆ ಹೈಕಳು ನಿದ್ದೆಗೆಡುತ್ತಿದ್ದು, ಪೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಐಟಂ ಸಾಂಗ್ ಗೆ ಬಂದವರು ಸಿನಿಮಾಗೆ ಕೊಟ್ರು ಸ್ಪೆಷಲ್ ಎಂಟ್ರಿ…! ಜಾಕ್ವಲಿನ್ ಬಗ್ಗೆ ಅನೂಪ್ ಭಂಡಾರಿ ಹೇಳಿದ್ದೇನು ಗೊತ್ತಾ..?!

ಬಾಲಿವುಡ್ ಸಿನಿಮಾಗಳ ಮೂಲಕ ಗುರುತಿಸಿಕೊಂಡ ಜಾಕ್ವಲಿನ್ ವಿಕ್ರಾಂತ್ ರೋಣದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದು, ಈ ಐಟಂ ಸಾಂಗ್ ಗಾಗಿ ಜಾಕ್ವಲಿನ್ ಬರೋಬ್ಬರಿ 1 ಕೋಟಿ ರೂಪಾಯಿ ಪಡೆದಿದ್ದಾರಂತೆ.
ಇದನ್ನೂ ಓದಿ : ಗದಂಗ್ ರಕ್ಕಮ್ಮನಾಗಿ ಸ್ಯಾಂಡಲ್ ವುಡ್ ಗೆ ಶ್ರೀಲಂಕಾಚೆಲುವೆ…! ಜಾಕ್ವಲಿನ್ ಹಾಟ್ ಲುಕ್ ಗೆ ಅಭಿಮಾನಿಗಳು ಖುಷ್…!!
ಇದನ್ನೂ ಓದಿ : ಜಾಕ್ವೆಲಿನ್ ದರ್ಶನಕ್ಕೆ ಮುಹೂರ್ತ ಫಿಕ್ಸ್. …! ಅಭಿಮಾನಿಗಳಿಗೆ ಸಪ್ರೈಸ್ ಕೊಟ್ಟ ವಿಕ್ರಾಂತ್ ರೋಣ ಟೀಂ…!!