ಈ ಬಾರಿ ಅದ್ದೂರಿ ಗಣೇಶೋತ್ಸವ, ಸಡಿಲವಾಗುತ್ತಾ ಕೋವಿಡ್‌ ನಿಯಮ : ಸಚಿವ ಸುನಿಲ್‌ ಕುಮಾರ್‌ ಕೊಟ್ರು ಸುಳಿವು

ಉಡುಪಿ : ಕಳೆದ ಎರಡು ವರ್ಷಗಳಿಂದಲೂ ಕೊರೊನಾ ವೈರಸ್‌ ಸೋಂಕು ಗಣೇಶ ಹಬ್ಬಕ್ಕೆ ತೊಡಕಾಗಿತ್ತು. ಆದ್ರೆ ಈ ಬಾರಿ ಧಾರ್ಮಿಕ ವೈಭವೀಕರಣಕ್ಕೆ ಕೊರತೆಯಾಗದೆ, ಆರೋಗ್ಯ ದ ಕಡೆಗೂ ಗಮನಕೊಟ್ಟು ಗಣೇಶೋತ್ಸವವನ್ನು ಆಚರಿಸಲಾಗುವುದು ಎಂದು ಇಂಧನ ಸಚಿವ ಸುನಿಲ್‌ ಕುಮಾರ್‌ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಾಗೂ ಗಡಿ ಭಾಗದ ಜಿಲ್ಲೆಗಳಲ್ಲಿ ಬೇರೆ ಬೇರೆಯಾಗಿರುವ ಮಾರ್ಗಸೂಚಿಯನ್ನು ಜಾರಿಗೆ ತರಲಾಗಿದೆ. ಕೊರೊನಾ ವೈರಸ್‌ ಸೋಂಕಿನ ನಡುವಲ್ಲೇ ಗಣೇಶೋತ್ಸವ ಆಚರಣೆಯ ಕುರಿತು ಕ್ಯಾಬಿನೆಟ್‌ ಸಭೆಯಲ್ಲಿ ಚರ್ಚೆಯನ್ನು ನಡೆಸಲಾಗಿದ್ದು, ಮುಂದಿನ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಧಾರ್ಮಿಕ ಆಚರಣೆ, ಆರೋಗ್ಯ ಎರಡೂ ಮುಖ್ಯ. ಕೊರೊನಾ ಮೂರನೇ ಅಲೆಯ ಭೀತಿಯಿದೆ. ಜೊತೆಗೆ ಧಾರ್ಮಿಕ ಆಚರಣೆ ನಡೆಯಬೇಕಾಗಿದೆ. ಧಾರ್ಮಿಕ ವೈಭವೀಕರಣಕ್ಕೆ ಕೊರತೆ ಯಾಗದಂತೆ, ಧಾರ್ಮಿಕ ಅಂತಃಕರಣವನ್ನು ಅರ್ಥೈಯಿಸಿಕೊಂಡು ಸೂತ್ರವನ್ನು ಸರಕಾರ ನಿರ್ಧಾರ ಮಾಡಲಿದೆ ಎಂದಿದ್ದಾರೆ.‌

ಇದನ್ನೂ ಓದಿ : Minister Sunil Kumar : ಜನ ಮೆಚ್ಚುಗೆಗೆ ಪಾತ್ರವಾಯ್ತು ಸಚಿವ ಸುನಿಲ್‌ ಕುಮಾರ್‌ ಕಾರ್ಯ

ಕಳೆದ ಬಾರಿ ಸರಳವಾಗಿ ಗಣೇಶೋತ್ಸವ ಆಚರಣೆ ಮಾಡಲಾಗಿತ್ತು. ಆದರೆ ಹಿಂದೂಪರ ಸಂಘಟನೆಗಳು ಈಗಾಗಲೇ ಈ ಬಾರಿ ಅದ್ದೂರಿಯಾಗಿ ಗಣೇಶೋತ್ಸವ ಆಚರಣೆಗೆ ಅವಕಾಶವನ್ನು ಕಲ್ಪಿಸಬೇಕೆಂದು ಸರಕಾರದ ಮೇಲೆ ಒತ್ತಡವನ್ನು ಹೇರಿವೆ. ಈ ನಿಟ್ಟಿನಲ್ಲಿ ಸರಕಾರ ಕೋವಿಡ್‌ ನಿಯಮವನ್ನು ಸಡಿಲಿಸಿ ಅದ್ದೂರಿ ಗಣೇಶೋತ್ಸವಕ್ಕೆ ಅವಕಾಶ ನೀಡುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : ಕರಾವಳಿಯಲ್ಲಿ ತಗ್ಗದ ಕೊರೊನಾ ಅಬ್ಬರ : ಸದ್ಯಕ್ಕಿಲ್ಲ ಶಾಲಾರಂಭ

Comments are closed.