ಬಿಗ್ ಬಾಸ್ ಕಿರುತೆರೆಯ ಫೆವರಿಟ್ ಶೋಗಳ ಸ್ಥಾನದಲ್ಲಿದೆ. ಆದರೆ ಒಟಿಟಿಯಲ್ಲಿ ಪ್ರಸಾರವಾಗ್ತಿರೋ ಹಿಂದಿ ಬಿಗ್ ಬಾಸ್ ಮಾತ್ರ ನೈತಿಕತೆ ಎಲ್ಲೇ ಮೀರಿದ್ದು ಈ ಶೋ ಬಗ್ಗೆ ಎಲಿಮಿನೇಶನ್ ಮೂಲಕ ಹೊರಬಂದ ಸ್ಪರ್ಧಿಯೊಬ್ಬರು ಶಾಕಿಂಗ್ ಸತ್ಯ ಬಿಚ್ಚಿಟ್ಟಿದ್ದಾರೆ.

ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಮನೆಯ ಸ್ಪರ್ಧಿ ಊರ್ಫಿ ಜಾವೇದ್ ಇಂತಹದೊಂದು ಶಾಕಿಂಗ್ ವಿಚಾರವನ್ನು ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೇ ಬಹಿರಂಗವಾಗಿ ಹೇಳೋ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿರೋ ಇನ್ನೊರ್ವ ಸ್ಪರ್ಧಿ ಪ್ರತೀಜ್ ಸೆಹೆಜ್ ಪಾಲ್ ಮುಂದೆಯೇ ಕ್ಯಾಮರ ಎದುರು ನೇರವಾಗಿ ಮಾತನಾಡಿದ ಊರ್ಫಿ ಬಿಗ್ ಬಾಸ್ ಮನೆಯಲ್ಲಿ ನನ್ನ ಮುಂದೆಯೇ ನಗ್ನವಾಗಿ ಲೈಂಗಿಕ ಕ್ರಿಯೆ ನಡೆಸಲಾಗಿದೆ. ಆದರೆ ಅದನ್ನು ನಿಮಗೆ ತೋರಿಸಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ಇನ್ಮುಂದೆ ಬೆತ್ತಲಾಗ್ತಾರೆ ಬಿಗ್‌ಬಾಸ್ ಸ್ಪರ್ಧಿಗಳು ..! ಬಿಗ್‌ಬಾಸ್ ವೀಕ್ಷಿಸೋ ಪೋಷಕರೇ ಹುಷಾರ್
ಇದನ್ನು ಕೇಳಿದ ಪ್ರತೀಜ್ ಸೆಹೆಜ್ ಪಾಲ್ ಏನು ಹೇಳ್ತಿದ್ಯಾ? ಯಾರ ಬಗ್ಗೆ ಎಂದು ಗಾಬರಿಯಿಂದ ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿದ ಊರ್ಫಿ ಬಿಗ್ ಬಾಸ್ ಮನೆಯಲ್ಲೇ ನಡೆದಿದೆ. ನೀನು ನೋಡಿಲ್ವಾ ಎಂದು ಪ್ರಶ್ನಿಸಿದ್ದು ಲೈವ್ ನಲ್ಲೇ ನಡೆದ ಈ ಸಂಭಾಷಣೆ ಪ್ರೇಕ್ಷಕರ ಅಚ್ಚರಿಗೆ ಕಾರಣವಾಗಿದೆ.
ಇದನ್ನೂ ಓದಿ : ಬಿಗ್‌ಬಾಸ್ ಟ್ರೋಫಿ ಗೆದ್ದ ಪಾವಗಡದ ಮಂಜು : ಎರಡನೇ ಸ್ಥಾನಕ್ಕೆ ಜಾರಿದ ಅರವಿಂದ್
ಇನ್ನೊಂದೆಡೆ ಊರ್ಫಿ ಪ್ರೇಕ್ಷಕರ ಗಮನ ಸೆಳೆಯಲು ಈ ರೀತಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.ಆದರೆ ಸದ್ಯ ಊರ್ಫಿ ಶೋನಿಂದ ಹೊರಬಂದಿದ್ದಾರೆ. ಬೇರೆ ಬಿಗ್ ಬಾಸ್ ಶೋಗಳಿಗೆ ನಿಯಮವಿದೆ. ಆದರೆ ಒಟಿಟಿ ಬಿಗ್ ಬಾಸ್ ಯಾವುದೇ ನಿಯಮಗಳಿಲ್ಲದೇ ಮುಕ್ತವಾಗಿದ್ದು ಅತಿರೇಕಗಳಿಂದಲೇ ಸುದ್ದಿಯಾಗುತ್ತಿದೆ.