ತಾಲಿಬಾನ್ ವಶದಲ್ಲಿರುವ ಅಪ್ಘಾನಿಸ್ತಾನ್ ದಿಂದ ಭಾರತೀಯರನ್ನು ಕರೆತರುವ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಆಫರೇಶನ್ ದೇವಿಶಕ್ತಿ ಎಂದು ನಾಮಕರಣ ಮಾಡಿದೆ. ಕಳೆದ ಸೋಮವಾರದಿಂದಲೂ ನಡೆಯುತ್ತಿರುವ ಈ ಕಾರ್ಯಾಚರಣೆಯಿಂದ ಇದುವರೆಗೂ 78 ಜನರನ್ನು ಸುರಕ್ಷಿತವಾಗಿ ಕರೆತರಲಾಗಿದೆ.

ಕಾರ್ಯಾಚರಣೆ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ವಿದೇಶಾಂಗ ಖಾತೆ ಸಚಿವ ಎಸ್. ಜೈಶಂಕರ್, ಅಪ್ಘಾನ್ ನಿಂದ ಭಾರತೀಯರನ್ನು ಕರೆತರುವ ಕಾರ್ಯಾಚರಣೆದೆ ಇನ್ಮುಂದೆ ಆಫರೇಶನ್ ದೇವಿಶಕ್ತಿ ಎಂದು ಕರೆಲಾಗುತ್ತದೆ ಎಂದಿದ್ದಾರೆ.
ಈಗಾಗಲೇ ವಿವಿಧ ಸಮುದಾಯಕ್ಕೆ ಸೇರಿದ 78 ಜನರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದ್ದು, ಇನ್ನಷ್ಟು ಭಾರತೀಯರು ಅಪ್ಘಾನಿಸ್ತಾನ್ ಸೇನಾನೆಲೆಯಲ್ಲಿ ಆಶ್ರಯ ಪಡೆದುಕೊಂಡು ಭಾರತಕ್ಕೆ ಮರಳಲು ಕಾಯುತ್ತಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಸದ್ಯ ಅಪ್ಘಾನಿಸ್ತಾನ್ ದ ಎಕೈಕ ವಾಯುನೆಲೆ ಕಾಬೂಲ್ ಏರ್ ಪೋರ್ಟ್ ನಿಂದ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ನಿರ್ಬಂಧಿಸಲಾಗಿದೆ. ಆದರೂ ಅಲ್ಲಿರುವ ಭಾರತೀಯರನ್ನು ಕರೆತರುವ ಪ್ರಯತ್ನ ನಡೆಯಲಿದೆ ಎಂದು ವಿದೇಶಾಂಗ ಇಲಾಖೆ ಭರವಸೆ ನೀಡಿದೆ.