ಟಾಟಾ ಪರಿಚಯಿಸುತ್ತಿದೆ ಹೊಸ SUV : ಪೀಚರ್ಸ್ ಕೇಳಿದ್ರೆ ಅಚ್ಚರಿ ಪಡ್ತೀರಿ

ಟಾಟಾ ಕಂಪೆನಿ ಪ್ರಖ್ಯಾತಿಗಳಿಸಿರುವುದು ವಿಶೇಷ ಕಾರುಗಳ ತಯಾರಿಕೆಯಿಂದ. ಇದೀಗ ಟಾಟಾ ಮೋಟಾರ್ಸ್‌ HBX ಪರಿಕಲ್ಪನೆಯ ಹೊಸ ಎಸ್‌ಯುವಿ ಅನ್ನು ಬಿಡುಗಡೆಗೊಳಿಸಿದ್ದು, ಇದನ್ನು ಟಾಟಾ ಪಂಚ್ ಎಂದು ಕರೆಯಲಾಗುತ್ತದೆ. ಟಾಟಾ ಪಂಚ್ ಕಂಪನಿಯ ಎಂಟ್ರಿ ಲೆವೆಲ್ ಕಾರ್ ಇದಾಗಿದೆ.

ಆಟೋ ಎಕ್ಸ್‌ಪೋ 2020 ರಲ್ಲಿ ಪರಿಕಲ್ಪನೆಯ ಮಾದರಿಯನ್ನು ಅನಾವರಣಗೊಳಿಸಿದ ಸಣ್ಣ ಎಸ್‌ಯುವಿ ಇದಾಗಿದೆ. ಟಾಟಾ ಮೋಟಾರ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿರುವ ಪ್ರಕಾರ ಬಹುನಿರೀಕ್ಷಿತ ಎಸ್‌ಯುವಿಯನ್ನು ಎಲ್ಲಾ ವರ್ಗದ ಜನರಿಗೂ ಸಿಗುವಂತೆ ಸಿದ್ಧಪಡಿಸಲಾಗಿದೆ.

ಟಾಟಾ ಪಂಚ್ ಅನ್ನು ಎರಡು ಬಣ್ಣದ ಆಯ್ಕೆಗಳಲ್ಲಿ ನೀಡಲಾಗಿದ್ದು, ತುಂಬಾ ಆಕರ್ಷಕವಾಗಿದೆ. ಅದರೆ ಕಾರಿನ ಇಂಟೀರಿಯರ್ ಹೇಗಿದೆ ಅನ್ನೋದನ್ನ ಟಾಟಾ ಕಂಪನಿ ಬಹಿರಂಗಪಡಿಸಿಲ್ಲ. ಆದರೆ ಹೊರಗಿನಿಂದ ಅತ್ಯಾಕರ್ಷಕ ಲುಕ್ ಇದ್ದು, ಇಂಟಿರಿಯರ್ ಕೂಡ ಗ್ರಾಹಕ ಸ್ನೇಹಿಯಾಗಿರಲಿದೆ.

7.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಎಸಿ ವೆಂಟ್‌ಗಳನ್ನು ಟಾಟಾ ಪಂಚ್‌ನಲ್ಲಿ ಇರಿಸಬಹುದು. ಇದನ್ನು ಮೂರು ಸ್ಪೋಕ್ ಸ್ಟೀರಿಂಗ್ ವೀಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇತ್ಯಾದಿಗಳೊಂದಿಗೆ ನೋಡಬಹುದು.

ಟಾಟಾ ಪಂಚ್‌ನ ಕೆಳಗಿನ ರೂಪಾಂತರವು 1.2 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 86 bhp ಪವರ್ ಮತ್ತು 114 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅದೇ ಸಮಯದಲ್ಲಿ, ಅದರ ಟರ್ಬೊ ಚಾರ್ಜ್ಡ್ ಆವೃತ್ತಿಯನ್ನು ಅದರ ಹೆಚ್ಚಿನ ರೂಪಾಂತರದಲ್ಲಿ ನೀಡಬಹುದು, ಇದನ್ನು ಇನ್ನೂ ದೃಢೀಕರಿಸಲಾಗಿಲ್ಲ.

ಇದನ್ನೂ ಓದಿ: Mahindra : ಸವಾರರ ಗಮನ ಸೆಳೆದ ಮಹೀಂದ್ರಾ XUV700 : 11.99 ಲಕ್ಷಕ್ಕೆ ಸಿಗುತ್ತೆ ಲಕ್ಸುರಿ ಕಾರು

ಟಾಟಾ ಪಂಚ್ ಬಿಡುಗಡೆಗಾಗಿ ಗ್ರಾಹಕರು ಕಾತರದಿಂದ ಕಾಯುತ್ತಿದ್ದು, ಈ ಸಣ್ಣ ಎಸ್‌ಯುವಿಯ ಬೆಲೆಯು 5 ಲಕ್ಷದಿಂದ ರೂಪಾಯಿಯಿಂದ ಆರಂಭವಾಗಬಹುದು ಅಂದಾಜಿಸಲಾಗಿದೆ. ಜೊತೆಗೆ ಈ ವರ್ಷದ ಅಂತ್ಯದೊಳಗೆ ಬಿಡುಗಡೆಗೆ ಸಿದ್ಧಗೊಂಡಿದೆ.

Comments are closed.