ಸ್ಯಾಂಡಲ್ ವುಡ್ ಗೆ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದ ಮೂಲಕ ಎಂಟ್ರಿಕೊಟ್ಟ ಸುಂದರಿ ಸಪ್ತಮಿ ಗೌಡ ಮತ್ತೊಂದು ಬಿಗ್ ಸ್ಟಾರ್ ಮೂವಿಗೆ ಅವಕಾಶ ಪಡೆದಿದ್ದಾರೆ. ರಿಶಬ್ ಶೆಟ್ಟಿ ನಿರ್ದೇಶನದ ಶಿವಣ್ಣ ನಾಯಕನಾಗಿರೋ ಕಾಂತಾರಕ್ಕೆ ಸಪ್ತಮಿ ನಾಯಕಿಯಾಗಿದ್ದಾರೆ.

ಕರಾವಳಿಯ ಜಾನಪದ ಕ್ರೀಡೆ ಕಂಬಳವನ್ನು ಆಧರಿಸಿ ಸಿದ್ಧವಾಗುತ್ತಿರುವ ಕಾಂತಾರ ಸಿನಿಮಾವನ್ನು ನಿರ್ದೇಶಕ ರಿಶಬ್ ಶೆಟ್ಟಿ ನಿರ್ದೇಶಿಸುತ್ತಿದ್ದು, ಅವರು ನಟಿಸಲಿದ್ದಾರೆ. ಇದೇ ಮೊದಲ ಬಾರಿಗೆ ಇಂತಹದೊಂದು ವಿಭಿನ್ನ ಪಾತ್ರದಲ್ಲಿ ನಟ ಶಿವರಾಜ್ ಕುಮಾರ್ ಕೂಡ ನಟಿಸುತ್ತಿದ್ದಾರೆ.

ಈ ಸಿನಿಮಾಗೆ ನಾಯಕಿಯಾಗಿ ಸಪ್ತಮಿ ಗೌಡ ಆಯ್ಕೆಯಾಗಿದ್ದು, ಪಾಪ್ ಕಾರ್ನ್ ಮಂಕಿ ಟೈಗರ್ ನಂತಹ ದೊಡ್ಡ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದ ನನಗೆ ಈಗ ಮತ್ತೊಂದು ದೊಡ್ಡ ಸಿನಿಮಾ ಸಿಕ್ಕಿದೆ. ಖುಷಿಯಾಗುತ್ತಿದೆ. ಈ ಸಿನಿಮಾಗಾಗಿ ನಾನು ಕರಾವಳಿ ಸಂಸ್ಕೃತಿ ಹಾಗೂ ಭಾಷೆ ಕಲಿಯುತ್ತಿದ್ದೇನೆ ಎಂದು ಸಪ್ತಮಿ ಗೌಡ ಹೇಳಿದ್ದಾರೆ.
ಮಂಕಿಟೈಗರ್ ಸಿನಿಮಾದ ಗಿರಿಜಾ ಪಾತ್ರದಂತಹ ಆಫರ್ ಗಳೇ ಮತ್ತಷ್ಟು ಬಂದಿದ್ದರಿಂದ ಸಿನಿಮಾಗಳನ್ನು ಒಪ್ಪಿಕೊಳ್ಳದೇ ದೂರ ಉಳಿದಿದ್ದ ಸಪ್ತಮಿಗೌಡ ಈಗ ಕಾಂತಾರ ಸಿನಿಮಾಗೆ ಜೈ ಎಂದಿದ್ದು, ನವೆಂಬರ್ ನಿಂದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಿದ್ದಾರಂತೆ.

ನಟಿಯಾಗಿ ತುಂಬ ಸ್ಕೋಪ್ ಇರುವ ಮತ್ತು ಎಮೋಷನ್ಸ್ ಗೆ ಪ್ರಾಧಾನ್ಯತೆ ಇರುವ ಈ ಸಿನಿಮಾಗಾಗಿ ಸಪ್ತಮಿ ಸಾಕಷ್ಟು ಎಕ್ಸೈಟ್ ಆಗಿದ್ದು, ರಿಶಬ್ ಶೆಟ್ಟಿ ಮಾರ್ಗದರ್ಶನದಲ್ಲಿ ನಟನೆಯ ಸಿದ್ಧತೆ ನಡೆಸಿದ್ದಾರಂತೆ.
Kantara is the best thing to me happen after PMT