ಖ್ಯಾತ ಕ್ರಿಕೆಟ್‌ ತರಬೇತುದಾರ ವಾಸು ಪರಾಂಜಪೆ ನಿಧನ : ಗಾವಾಸ್ಕರ್‌ ರಿಂದ ರೋಹಿತ್‌ ಶರ್ಮಾವರೆಗೂ ತರಬೇತಿ

ಮುಂಬೈ : ಖ್ಯಾತ ಕ್ರಿಕೆಟಿಗ ಸುನಿನ್‌ ಗವಾಸ್ಕರ್‌, ಸಚಿನ್‌ ತೆಂಡೂಲ್ಕರ್‌, ರೋಹಿತ್‌ ಶರ್ಮಾ ಸೇರಿದಂತೆ ನೂರಾರು ಕ್ರಿಕೆಟಿಗರಿಗೆ ತರಬೇತಿಯನ್ನು ನೀಡುತ್ತಿದ್ದ ಖ್ಯಾತ ತರಬೇತುದಾರ ವಾಸು ಪರಾಂಜಪೆ ನಿಧನರಾಗಿದ್ದಾರೆ.

ವಾಸು ಪರಾಂಜಪೆ ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರು ಮಾಟುಂಗಾದಲ್ಲಿನ ನಿವಾಸದಲ್ಲಿ ಮೃತಪಟ್ಟಿದ್ದು, ಪತ್ನಿ ಮತ್ತು ಮಗ ಜತಿನ್ ಅವರನ್ನು ಅಗಲಿದ್ದಾರೆ. ಇನ್ನು ವಾಸುದೇವ ಪರಾಂಜಪೆ ಅವರ ನಿಧನಕ್ಕೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​ಸಂತಾಪ ಸೂಚಿಸಿದೆ.

ವಾಸು ಪರಾಂಜಪೆ ಮುಂಬೈ ಹಾಗೂ ಬರೋಡಾ ತಂಡದ ಪರವಾಗಿ 1956 ಮತ್ತು 1970 ರ ನಡುವೆ ಪರಾಂಜಪೆ 29 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದರು. 12 ಬಾರಿ ರಣಜಿ ಟ್ರೋಫಿ ಗೆದ್ದ ಮುಂಬೈ ತಂಡದ ಭಾಗವಾಗಿದ್ದರು. 1964 ರಣಜಿ ಟ್ರೋಫಿಯಲ್ಲಿ ಬರೋಡಾ ವಿರುದ್ಧ ಅತ್ಯುತ್ತಮ ಸ್ಕೋರ್ 127 ರೊಂದಿಗೆ 785 ರನ್ ಗಳೊಂದಿಗೆ ತಮ್ಮ ಪ್ರಥಮ ದರ್ಜೆ ವೃತ್ತಿ ಜೀವನವನ್ನು ಕೊನೆಗೊಳಿಸಿದರು.

ಕ್ರಿಕೆಟ್ ನಿಂದ ನಿವೃತ್ತಿಯಾದ ನಂತರ, ಮಾರ್ಗದರ್ಶರಾಗಿ, ತರಬೇತುದಾರಾಗಿ ಸೇವೆ ಸಲ್ಲಿಸಿದ್ದಾರೆ. ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್‌ಸರ್ಕರ್, ಸಂಜಯ್ ಮಂಜ್ರೇಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಯುವರಾಜ್ ಸಿಂಗ್ ಮತ್ತು ರೋಹಿತ್ ಶರ್ಮಾ ಸೇರಿದಂತೆ ಹಲವು ಖ್ಯಾತನಾಮ ಕ್ರಿಕೆಟಿಗರಿಗೆ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದರು. ಅವರ ಮಗ ಜತಿನ್ ಅವರು ಕ್ರಿಕೆಟ್ ದ್ರೋಣ ಎಂಬ ಪುಸ್ತಕವನ್ನು ಬರೆದಿದ್ದಾರೆ, ಇದು ವಾಸುದೇವ ಪರಾಂಜಪೆ ಅವರ ಜೀವನ ಕಥೆಯನ್ನು ಆಧರಿಸಿದೆ.

ಇದನ್ನೂ ಓದಿ : ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಹೇಳಿದ್ದೇನು ಗೊತ್ತಾ ?

ಇದನ್ನೂ ಓದಿ : Avani Lekhara : ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಅವನಿ ಲೇಖರ

( Indian cricketer trainer Vasoo Paranjpe passes away )

Comments are closed.