ಭಾನುವಾರ, ಏಪ್ರಿಲ್ 27, 2025
HomekarnatakaViral Audio : ಯಕ್ಷಗಾನ ಕಲಾವಿದ ಕೋಡಿ ವಿಶ್ವನಾಥ್‌ರನ್ನ ಅವಮಾನಿಸಿದ್ರಾ ಶಾಸಕ ಸುಕುಮಾರ್‌ ಶೆಟ್ಟಿ ?

Viral Audio : ಯಕ್ಷಗಾನ ಕಲಾವಿದ ಕೋಡಿ ವಿಶ್ವನಾಥ್‌ರನ್ನ ಅವಮಾನಿಸಿದ್ರಾ ಶಾಸಕ ಸುಕುಮಾರ್‌ ಶೆಟ್ಟಿ ?

- Advertisement -

ಉಡುಪಿ : ಖ್ಯಾತ ಯಕ್ಷಗಾನ ಕಲಾವಿದ ಕೋಡಿ ವಿಶ್ವನಾಥ್‌ ಗಾಣಿಗ ಅವರನ್ನು ಬೈಂದೂರು ಶಾಸಕ ಸುಕುಮಾರ್‌ ಶೆಟ್ಟಿ ಅವಮಾನಿಸಿದ್ರಾ. ಹೀಗೊಂದು ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆಡಿಯೋ ಕೇಳಿದ ಯಕ್ಷ ಪ್ರಿಯರು ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ ?

ಕೋಡಿ ವಿಶ್ವನಾಥ ಗಾಣಿಗ ಅವರು ಗಂಡುಕಲೆ ಯಕ್ಷಗಾನವನ್ನೇ ತನ್ನ ಬದುಕನ್ನಾಗಿಸಿಕೊಂಡವರು. ಅಮೃತೇಶ್ವರಿ, ಸೌಕೂರು ಸೇರಿದಂತೆ ಹಲವು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸುಮಾರು ಮೂವತ್ತೈದು ವರ್ಷಗಳಿಂದಲೂ ಸೌಕೂರು ಮೇಳದಲ್ಲಿ ಪ್ರಧಾನ ವೇಷಧಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಕೋಡಿ ವಿಶ್ವನಾಥ ಗಾಣಿಗ ಅವರು ಅರ್ಜಿ ಸಲ್ಲಿಸಲು ಒತ್ತಡ ಬಂದಿತ್ತು. ಇದೇ ಕಾರಣಕ್ಕೆ ಅವರು ಬೈಂದೂರು ಶಾಸಕ ಸುಕುಮಾರ್‌ ಶೆಟ್ಟಿ ಅವರ ಬಳಿಯಲ್ಲಿ ಶಿಫಾರಸ್ಸು ಪತ್ರವೊಂದನ್ನು ಕೇಳಿದ್ದಾರೆ. ಈ ವೇಳೆಯಲ್ಲಿ ಅವರು ಮನೆಯಿಂದ ಹೊರ ನಡೆ ಎಂದು ಹೇಳಿದ್ದಾರೆ ಅನ್ನುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಓರ್ವ ಶಾಸಕರಾಗಿರುವ ಕಾರಣಕ್ಕೆ ನಾನು ಅವರ ಬಳಿಯಲ್ಲಿ ಶಿಫಾರಸ್ಸು ಪತ್ರವನ್ನು ಕೇಳಿದ್ದೇನೆ. ಆದರೆ ಅವರು ನನಗೆ ಶಿಫಾರಸ್ಸು ಪತ್ರವನ್ನು ನೀಡಿಲ್ಲ ಎಂದು ತಮ್ಮ ನೋವನ್ನು ಕೋಡಿ ಹಂಚಿಕೊಂಡಿದ್ದು, ಈ ಆಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗಿದೆ. ಅಷ್ಟಕ್ಕೂ ಕೋಡಿ ಅವರು ಆಡಿಯೋದಲ್ಲಿ ಹೇಳಿರೋದು ಏನು ಅನ್ನೋದನ್ನು ನೀವೇ ಕೇಳಿ.

https://www.youtube.com/watch?v=TKD943_fyVw&t=170s

ಕೋಡಿ ವಿಶ್ವನಾಥ ಗಾಣಿಗರು ಹೇಳೋದೇನು ?

ನನ್ನ ಯಕ್ಷಪಯಣ 45 ವರುಷ. P.ಕಿಶನ್ ಹೆಗ್ಡೆಯವರ ಸಂಚಾಲಕತ್ವದ ಸೌಕೂರು ಮೇಳ ಒಂದರಲ್ಲಿ 33ವರುಷ ಸೇವೆ. ಈ ನನ್ನ ಕಲಾಸೇವೆ ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 2012ರಲ್ಲಿ ಸಂದಿದೆ. ಈಗ ನನಗೆ 60 ರ ಹರೆಯ,ಈ ವಯಸ್ಸಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಯನ್ನು ಪಡೆಯಲು ಕಳೆದ ವರುಷವೇ ಶಿಫಾರಸು ಪತ್ರಕ್ಕಾಗಿ ಸ್ಥಳೀಯ ಶಾಸಕರಾದ ಸುಕುಮಾರ ಶೆಟ್ಟಿಯವರಲ್ಲಿ ಕೇಳಿದಾಗ ಕೊಡುವುದಕ್ಕೆ ಒಮ್ಮೆಲೇ ನಿರಾಕರಿಸಿದರು. ಆಮೇಲೆ KM ಶೇಖರ್ ಬೆಂಗಳೂರು (ಯಕ್ಷಗಾನ ಅಕಾಡೆಮಿ ಸದಸ್ಯರು) ಮತ್ತು ಮಲ್ಲಾರಿ ರವಿಗಾಣಿಗರು ಇವರ ಒತ್ತಾಯದ ಮೂಲಕ ಐದನೇ ಬಾರಿ ನಾನು ಶಾಸಕರ ಮನೆಗೆ ಹೋದಾಗ ಶಿಫಾರಸು ಪತ್ರವನ್ನು ಕೊಟ್ಟರು.

ಅದು ಫಲಕಾರಿಯಾಗಲಿಲ್ಲ, ಈ ಬಾರಿ ನಮ್ಮ ಗಾಣಿಗ ಸಂಘದ ದುರಿಣ BS ಮಂಜುನಾಥ್ ರವರು ( ವೈಭವ ಹೋಟೆಲ್ ಬೆಂಗಳೂರು) ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಬಗ್ಗೆ ನಾವುಗಳು ಪ್ರಯತ್ನಿಸುತ್ತೇವೆ, ನಿಮ್ಮ ಸಕಲ ಬಯೋಡೇಟಾವನ್ನು ಕಳುಹಿಸಿ ಎಂದ ಕಾರಣ ನಾನು ಸ್ಥಳೀಯ ಶಾಸಕರ ಶಿಫಾರಸು ಪತ್ರಕ್ಕೆ ಮುಂದಾದೆ. ಹಾಲಾಡಿ ಶ್ರೀನಿವಾಸ ಶೆಟ್ಟರು, ಶ್ರೀನಿವಾಸ ಪೂಜಾರಿಯವರು, ಮಾಜಿ ಶಾಸಕ ಗೋಪಾಲ ಪೂಜಾರಿ ಯವರು ಶಿಫಾರಸು ಪತ್ರವನ್ನು ಕೊಟ್ಟಿದ್ದಾರೆ.ಜಯಪ್ರಕಾಶ್ ಹೆಗ್ಡೆ, ಸಂಸದರು BY ರಾಘವೇಂದ್ರ ಕೊಡುವ ಭರವಸೆ ಯನ್ನು ಕೊಟ್ಟಿದ್ದಾರೆ. ಬೈಂದೂರು- ಕೊಡ್ಲಾಡಿ ಗ್ರಾಮದಲ್ಲಿ ನಾನು ವಾಸವಿರುವ ಕಾರಣ ನನ್ನ ಆಧಾರ್ ಕಾರ್ಡ್ , ಓಟಿನ ಕಾರ್ಡ್ ಎಲ್ಲವೂ ಕೊಡ್ಲಾಡಿಯಲ್ಲಿವೆ. ಹಾಗಾಗಿ ಈ ಬಾರಿ ನಾನು 3/9/2021 ರಂದು ಶ್ರೀಯುತ ಶಾಸಕರ ಮನೆಗೆ ಹೋಗಿ ಶಿಫಾರಸು ಪತ್ರ ಕೇಳಿದಾಗ ಅದನ್ನು ಕೊಡಲು ಆಗುವುದಿಲ್ಲ ಎಂದು ಹೇಳಿದರು.

ನಾಡ ನಾಗೇಶ್ ಗಾಣಿಗರಿಗೆ ಭರವಸೆ ಕೊಟ್ಟಿದ್ದೇನೆ ಎಂಬ ವಿಷಯವನ್ನು ಸೌಕೂರು ದೇವಿಯ ಸಾಕ್ಷಿಯಾಗಿಯೂ ಅವರು ಹೇಳಿರಲಿಲ್ಲ. ಒಂದು ವೇಳೆ ಹೇಳಿದ್ದರೆ ನಾನು ಹಿಂದೆ ಸರಿಯುತ್ತಿದ್ದೆ.ಅವರು ನನಗಿಂತಲೂ ಹಿರಿಯರು ಹಾಗಾಗಿ ‌ನಾನು ಸಂತೋಷ ಪಡುತ್ತಿದ್ದೆ. ಹೇಳದೆ ಇರುವುದರಿಂದ ಹೀಗಾಯಿತು. ನನ್ನ ಕಲಾರಾಧನೆಗೆ ಸಿಗುವ ಕಾಲ ಬಂದೀತು. ಹರಸಿ ಕ್ಷಮಿಸಿ ಇಂತಿ ಕೋಡಿ ವಿಶ್ವನಾಥ ಗಾಣಿಗ ಎಂದು ಅವರು ನೀಡಿರುವ ಸ್ಪಷ್ಟೀಕರಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ : ಆರಾಧ್ಯ ಗಾನದೇವತೆಯೇ ಮತ್ತೊಮ್ಮೆ ನಮಗಾಗಿ ಹುಟ್ಟಿ ಬರುವಿರಾ…

ಇದನ್ನೂ ಓದಿ : ಪಿಂಚಣಿದಾರರಿಗೆ ಗುಡ್‌ನ್ಯೂಸ್‌ : ಎಸ್‌ಬಿಐ ಆರಂಭಿಸಿಗೆ ವಿಶೇಷ ವೆಬ್‌ಸೈಟ್‌

( Byndoor BJP MLA Sukumar Shetty, insulted by Yakshagana Senior artist Kodi Viswanath Ganiga )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular