Virat Kohli : T20 ನಾಯಕತ್ವಕ್ಕೆ ರಾಜೀನಾಮೆ : ವಿರಾಟ್‌ ಕೊಯ್ಲಿ ಅಧಿಕೃತ ಘೋಷಣೆ

ಮುಂಬೈ : ಟೀಂ ಇಂಡಿಯಾ ನಾಯಕ ವಿರಾಟ ಕೊಯ್ಲಿ ಕೊನೆಗೂ ನಾಯಕತ್ವದಿಂದ ಕೆಳಗಿಯುವುದು ಖಚಿತವಾಗಿದೆ. ಕಳೆದೊಂದು ವಾರದಿಂದಲೂ ಕೊಯ್ಲಿ ರಾಜೀನಾಮೆಯ ಮಾತು ಕೇಳಿಬಂದಿತ್ತು. ಇದೀಗ ಕೊಯ್ಲಿ ಅಧಿಕೃತವಾಗಿ T20 ತಂಡದ ನಾಯಕತ್ವದಿಂದ ಕೆಳಗಿಳಿಯಲು ನಿರ್ಧಿರಿಸಿರುವುದಾಗಿ ಘೋಷಣೆ ಮಾಡಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕೊಯ್ಲಿ ಅಧಿಕೃತವಾಗಿ ನಾಯಕತ್ವಕ್ಕೆ ರಾಜೀನಾಮೆಯ ಕುರಿತು ಬರೆದುಕೊಂಡಿದ್ದಾರೆ. ಭಾರತ ತಂಡವನ್ನು ಪ್ರತಿನಿಧಿಸುವುದು ಮಾತ್ರವಲ್ಲ, ಭಾರತ ತಂಡವನ್ನು ಮುನ್ನಡೆಸುವ ಅದೃಷ್ಟ ನನ್ನದಾಗಿದೆ. ಟೀಂ ಇಂಡಿಯಾದ ನಾಯಕನಾಗಿ ನನ್ನ ಪ್ರಯಾಣದುದ್ದಕ್ಕೂ ರಾಜೀನಾಮೆ ನೀಡಿದ ಪ್ರತಿಯೊಬ್ಬರಿಗೂ ಕೊಯ್ಲಿ ಧನ್ಯವಾದ ಸಮರ್ಪಿಸಿದ್ದಾರೆ. ಅಲ್ಲದೇ ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿ, ಆಯ್ಕೆ ಸಮಿತಿ, ನನ್ನ ತರಬೇತುದಾರರು ಹಾಗೂ ಟೀಂ ಇಡಿಯಾದ ಗೆಲುವಿಗಾಗಿ ಪ್ರಾರ್ಥಿಸಿದ ಭಾರತೀಯರಿಗೆ ನನ್ನ ಧನ್ಯವಾದಗಳು ಎಂದಿದ್ದಾರೆ.

ಕಳೆದ 8-9 ವರ್ಷಗಳಲ್ಲಿ T20, ಏಕದಿನ ಹಾಗೂ ಟೆಸ್ಟ್‌ ಸರಣಿಯನ್ನು ಆಡುತ್ತಿದ್ದೇನೆ. ಅಲ್ಲದೇ 5 ರಿಂದ 6 ವರ್ಷಗಳಿಂದ ನಾಯಕನಾಘಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ಮುಂದಿನ ದಿನಗಳಲ್ಲಿ T20 ತಂಡ ಆಟಗಾರನಾಗಿ ಮಾತ್ರವೇ ಮುಂದುವರಿಯಲಿದ್ದೇನೆ. ನಾನು ಈ ನಿರ್ಧಾರಕ್ಕೆ ಬರಲು ಸಾಕಷ್ಟು ಸಮಯ ಹಿಡಿಯಿತು. ನಾನು ಟೀಂ ಇಂಡಿಯಾದ ಕೋಚ್‌ ರವಿಬಾಯ್‌ ಹಾಗೂ ರೋಹಿತ್‌ ಶರ್ಮಾ ಅವರೊಂದಿಗೆ ಸಾಕಷ್ಟು ಚಿಂತನೆ ಮತ್ತು ಚರ್ಚೆಯ ನಂತರ ಈ ನಿರ್ಧಾರಕ್ಕೆ ಬಂದಿದ್ದೇನೆ. ಅಕ್ಟೋಬರ್ ನಲ್ಲಿ ದುಬೈನಲ್ಲಿ ನಡೆದ ಈ ಟಿ20 ವಿಶ್ವಕಪ್ ನಂತರ ನಾನು ಟಿ20 ನಾಯಕ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

ನಾಯಕತ್ವದಿಂದ ಕೆಳಗಿಳಿಯುವ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ್ಯದರ್ಶಿ ಜೇ ಶಾ ಹಾಗೂ ಆಯ್ಕೆದಾರರ ಜೊತೆಗೆ ಮಾತನಾಡಿದ್ದೇಣೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಭಾರತೀಯ ಕ್ರಿಕೆಟ್‌ಗೆ ಹಾಗೂ ಕ್ರಿಕೆಟ್‌ ತಂಡಕ್ಕೆ ನನ್ನ ಸೇವೆಯನ್ನು ಮುಂದುವರಿಸುತ್ತೇನೆ ಎಂದು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಐಪಿಎಲ್‌ ಅಭ್ಯಾಸ ಪಂದ್ಯದಲ್ಲಿ ಎಬಿಡಿ ಅಬ್ಬರ : ಮೈದಾನದ ಹೊರಗೆ ಸಿಡಿದ ಸಿಕ್ಸರ್‌

ಇದನ್ನೂ ಓದಿ : ಯುಎಇ ಅಂಗಳದಲ್ಲಿ ಕನ್ನಡ ಕಂಪು : ಕುಂಬ್ಳೆ ಕನ್ನಡ ಹಾಡಿಗೆ ಮನಸೋತ ಪಂಜಾಬ್‌

Comments are closed.