ಮಂಗಳವಾರ, ಜೂನ್ 17, 2025
HomeCinemaSahil khan: ಮಾಜಿ ಮಿಸ್ಟರ್ ಇಂಡಿಯಾ ಆತ್ಮಹತ್ಯೆ ಯತ್ನ ಪ್ರಕರಣ: ಮೌನ ಮುರಿದ ನಟ ಸಾಹಿಲ್...

Sahil khan: ಮಾಜಿ ಮಿಸ್ಟರ್ ಇಂಡಿಯಾ ಆತ್ಮಹತ್ಯೆ ಯತ್ನ ಪ್ರಕರಣ: ಮೌನ ಮುರಿದ ನಟ ಸಾಹಿಲ್ ಖಾನ್

- Advertisement -

ಮುಂಬೈ: ಮಾಜಿ ಮಿಸ್ಟರ್ ಇಂಡಿಯಾ ಮನೋಜ್ ಪಾಟೀಲ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆಗೂ ನಟ ಸಾಹಿಲ್ ಖಾನ್ ವಿರುದ್ಧ ಮನೋಜ್ ಪಾಟೀಲ್ ಕಿರುಕುಳದ ಆರೋಪ ಹೊರಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ನಟ ಸಾಹಿಲ್ ಖಾನ್ ನನಗೂ ಪ್ರಕರಣಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.

Manoj Sahil1.jpg2

ಮುಂಬೈನ ಓಶಿವರ್ ನಿವಾಸದಲ್ಲಿ ಮನೋಜ್ ಪಾಟೀಲ್ ನಿದ್ದೆ ಮಾತ್ರೆ ಸೇವಿಸಿ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದು ಬಳಿಕ ಅವರನ್ನು ಕೂಪರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಮನೋಜ್ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.

Manoj Sahil1.jpg23

ಈ ಮಧ್ಯೆ ಬಾಲಿವುಡ್ ನಟ ಸಾಹಿಲ್ ಖಾನ್ ತಮಗೆ ಕಿರುಕುಳ ನೀಡುತ್ತಿದ್ದರು ಎಂದು ಮನೋಜ್ ಆರೋಪಿಸಿದ್ದು, ಇದಕ್ಕೆ ಸುದ್ದಿಗೋಷ್ಠಿ ನಡೆಸಿ ಸಾಹಿಲ್ ಖಾನ್ ತಿರುಗೇಟು ನೀಡಿದ್ದಾರೆ. ಈ ವಿಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇದು ಕೇವಲ ಮನೋಜ್ ಪಾಟೀಲ್ ಹಾಗೂ ರಾಜು ಫೌಜದಾರ್ ಎಂಬ ಇನ್ನೊಬ್ಬ ವ್ಯಕ್ತಿಯ ನಡುವಿನ ವಿಚಾರ ಎಂದಿದ್ದಾರೆ.

ಅವಧಿ  ಮುಗಿದ ಸ್ಟಿರಾಯ್ಡ್ ಗಳನ್ನು ಮನೋಜ್ ಪಾಟೀಲ್ ಮಾರಾಟ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಿದ್ದ ಸಾಹಿಲ್ ಖಾನ್ ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸತ್ಯ ಹೊರಗೆ ಬಂದ ಭಯಕ್ಕೆ ಮನೋಜ್ ಆತ್ಮಹತ್ಯೆ ನಾಟಕವಾಡಿದ್ದಾರೆ ಎಂಬುದು ಸಾಹಿಲ್ ಖಾನ್ ಆರೋಪ.

ಭಾರತದಲ್ಲಿ ಆತ್ಮಹತ್ಯೆ ಶಿಕ್ಷಾರ್ಹ ಅಪರಾಧ ಎಂಬುದನ್ನು ಮನೋಜ್ ಪಾಟೀಲ್ ಅರ್ಥ ಮಾಡಿಕೊಳ್ಳಬೇಕು ಎಂದಿರುವ ಸಾಹಿಲ್ ಖಾನ್, ನಾನು ಕೇವಲ ಸತ್ಯವನ್ನು ಮಾತನಾಡಿದ್ದೇನೆ ಮತ್ತು ನನಗೆ ಗೊತ್ತಿರುವ ಸತ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೇನೆ ಎಂದರು.

ರಾಜು ಬಳಿ ಮನೋಜ್ ಪಾಟೀಲ್ ಗೆ 2 ಲಕ್ಷ ರೂಪಾಯಿ ಪಾವತಿಸಿದ ರಿಸೀಟ್ ಇದೆ. ಅವರು ಹೇಳಿದ ಸತ್ಯವನ್ನೇ ನಾನು ಸೋಷಿಯಲ್ ಮೀಡಿಯಾಕ್ಕೆ ಹಾಕಿದ್ದೇನೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.

ಅಲ್ಲದೇ ನಾನು ನಿಮ್ಮ ಮನೆಯ ಮುಂದೇ ಬಂದು ಡ್ರಗ್ಸ್ ಮಾರಾಟ ಮಾಡುತ್ತೇನೆ. ಆ ವಿಚಾರವನ್ನು ನೀವು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ್ರೇ.ಅದು ನೀವು ನನಗೆ ಮಾಡುವ ಕಿರುಕುಳ ಎಂದು ಭಾವಿಸಲು ಸಾಧ್ಯವೇ ಎನ್ನುವ ಮೂಲಕ ಮನೋಜ್ ವಿರುದ್ಧ ಡ್ರಗ್ಸ್ ಮಾರಾಟದ ಆರೋಪ ಹೊರಿಸಿದ್ದಾರೆ ಸಾಹಿಲ್. ಒಟ್ಟಿನಲ್ಲಿ ಬಾಡಿ ಬಿಲ್ಡರ್ ಮತ್ತು ಆಕ್ಟರ್ ನಡುವಿನ ಸಮರ ತಾರಕಕ್ಕೇರಿದೆ.

( Sahil Khan holds press conference for Manoj Patil suicide case )

RELATED ARTICLES

Most Popular