GOLD PRICE TODAY : 5 ತಿಂಗಳ ಬಳಿಕ ಭಾರೀ ಇಳಿಕೆ ಕಂಡ ಚಿನ್ನದ ದರ

ನವದೆಹಲಿ : ಚಿನ್ನಾಭರಣ ಪ್ರಿಯರಿಗೆ ಶುಭಸುದ್ದಿಯೊಂದು ಹೊರಬಿದ್ದಿದೆ. ಕಳೆದ ಐದು ತಿಂಗಳಲ್ಲಿಯೇ ಇದೇ ಮೊದಲ ಬಾರಿ ಚಿನ್ನದ ದರದಲ್ಲಿ ಭಾರೀ ಇಳಿಕೆಕಂಡಿದೆ. ಚಿನ್ನ ಮಾತ್ರವಲ್ಲದೇ ಬೆಳ್ಳಿಯ ದರದಲ್ಲಿ ಇಳಿಕೆಯಾಗಿದ್ದು, ಚಿನ್ನಾಭರಣ ಪ್ರಿಯರಿಗೆ ಸಖತ್‌ ಖುಷಿಯಾಗಿದೆ.

ಕಳೆದ ಹಲವು ತಿಂಗಳಿನಿಂದಲೂ ಚಿನ್ನದ ದರ ಮಾರುಕಟ್ಟೆಯಲ್ಲಿ ಏರಿಕೆಯನ್ನು ಕಾಣುತ್ತಲೇ ಇತ್ತು. ಇದೀಗ ನಿನ್ನೆ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದ್ರೆ, ಇಂದು ದಾಖಲೆಯ ಪ್ರಮಾಣದಲ್ಲಿ ಇಳಿಕೆಯನ್ನು ಕಂಡಿದೆ. ಬೆಂಗಳೂರಲ್ಲಿ 22 ಕ್ಯಾರೆಟ್‌ ಚಿನ್ನದ ದರ10 ಗ್ರಾಂ ಗೆ 44,000 ರೂಪಾಯಿ ಇದ್ರೆ, ದೈನಂದಿನ ದರದಲ್ಲಿ 3 ಸಾವಿರ ರೂಪಾಯಿ ಇಳಿಕೆ ಕಂಡಿದೆ. ಕೇವಲ 22 ಕ್ಯಾರೆಟ್‌ ಮಾತ್ರವಲ್ಲದೇ 24 ಕ್ಯಾರೆಟ್‌ ಚಿನ್ನದ ದರದಲ್ಲಿಯೂ ಇಳಿಕೆ ಕಂಡಿದೆ. 24 ಕ್ಯಾರೆಟ್‌ ಚಿನ್ನದ ದರ 10 ಗ್ರಾಂ ಗೆ 48 ಸಾವಿರ ರೂಪಾಯಿಗೆ ಇಳಿಕೆಯಾಗಿದೆ.

ಬೆಂಗಳೂರು ಮಾತ್ರವಲ್ಲದೇ ಚೆನ್ನೈನಲ್ಲಿಯೂ ಚಿನ್ನದ ದರ ಇಳಿಕೆ ಕಂಡಿದೆ. ಚೆನ್ನೈನಲ್ಲಿ 22 ಕ್ಯಾರೆಟ್‌ 10 ಗ್ರಾಂ ಚಿನ್ನಕ್ಕೆ, 44,300 ರೂಪಾಯಿ ಇದ್ರೆ, ೨೪ ಕ್ಯಾರೆಟ್‌ 10 ಗ್ರಾಂ ಚಿನ್ನಕ್ಕೆ 48,300 ರೂಪಾಯಿ ಇದೆ. ಹೈದ್ರಾಬಾದ್‌ನಲ್ಲಿ 22 ಕ್ಯಾರೆಟ್‌ 10 ಗ್ರಾಂ ಚಿನ್ನದ ದರ 44 ಸಾವಿರ ಇದ್ರೆ, 24 ಕ್ಯಾರೆಟ್‌ ಚಿನ್ನದ ದರ 48 ಸಾವಿರ ರೂಪಾಯಿಗೆ ಇಳಿಕೆಯಾಗಿದೆ.

ಇನ್ನು ಬೆಳ್ಳಿಯ ದರದಲ್ಲಿಯೂ ಇಳಿಕೆ ಕಂಡಿದೆ. ಬೆಂಗಳೂರಲ್ಲಿ ಬೆಳ್ಳಿಯ ದರ ಕೆ.ಜಿಗೆ 62,800 ರೂಪಾಯಿ ಇದ್ದು, ಇಂದು 600 ರೂಪಾಯಿ ಇಳಿಕೆ ಕಂಡಿದೆ. ಚೆನ್ನೈನಲ್ಲಿ ಬೆಳ್ಳಿಯ ದರ 67,800ಕ್ಕೆ ಇಳಿಕೆ ಕಂಡಿದೆ.

( Gold prices today drop: Sees lowest in 5 months after big fall )

Comments are closed.