ಮಂಗಳವಾರ, ಏಪ್ರಿಲ್ 29, 2025
HomeNationalKuwait : ಕುವೈತ್‌ನಲ್ಲಿ ವಿದೇಶಿಗರಿಗೆ ಸಿಗುತ್ತೆ ಷರತ್ತು ಬದ್ಧ ಕುಟುಂಬ ವೀಸಾ

Kuwait : ಕುವೈತ್‌ನಲ್ಲಿ ವಿದೇಶಿಗರಿಗೆ ಸಿಗುತ್ತೆ ಷರತ್ತು ಬದ್ಧ ಕುಟುಂಬ ವೀಸಾ

- Advertisement -

ಕುವೈತ್ : ವಿದೇಶಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕುವೈತ್‌ ಇದೀಗ ಷರತ್ತುಬದ್ಧ ಕುಟುಂಬ, ವಾಣಿಜ್ಯ ಮತ್ತು ಪ್ರವಾಸಿ ವೀಸಾಗಳನ್ನು ನೀಡುವ ಕುರಿತು ಮಹತ್ದದ ನಿರ್ಧಾರ ವನ್ನು ತೆಗೆದುಕೊಂಡಿದೆ. ಈ ಕುರಿತು ವಲಸೆ ಇಲಾಖೆಯಿಂದ ನೋಟಿಸ್ ನೀಡಲಾಗಿದ್ದು, ಕುವೈತ್ ರೆಸಿಡೆನ್ಸ್ ಅಫೇರ್ಸ್ ವಿಭಾಗವು ವಿದೇಶಿಗರ ವಿಶೇಷ ವರ್ಗಗಳಿಗೆ ವಾಣಿಜ್ಯ ವೀಸಾಗಳ ಜೊತೆಗೆ ಭೇಟಿ ಮತ್ತು ಅವಲಂಬಿತ ವೀಸಾಗಳನ್ನು ನೀಡಲು ಆರಂಭಿಸಿದೆ.

ಕಲಂ 22 ರ ಅಡಿಯಲ್ಲಿ ಕುಟುಂಬ ಭೇಟಿ ವೀಸಾ ಮತ್ತು ಕಲಂ 14 ರ ಅಡಿಯಲ್ಲಿ ಪ್ರವಾಸಿ ಮತ್ತು ವಾಣಿಜ್ಯ ವೀಸಾಗಳನ್ನು ನೀಡಲಾಗುತ್ತದೆ. ಕ್ಯಾಬಿನೆಟ್ ಸಮಿತಿಯ ನಿರ್ದೇಶನದಂತೆ ಕೆಲವು ವರ್ಗಗಳ ಉನ್ನತ ಶಿಕ್ಷಣ ಪಡೆದ ವಿದೇಶಿಯರಿಗೆ ವೀಸಾ ನೀಡಲಾಗುವುದು ಎಂದು ವರದಿಯಾಗಿದೆ.

ಇದನ್ನೂ ಓದಿ : Abu dubai : ಉಚಿತವಾಗಿ ಕುಟುಂಬ ಸ್ನೇಹಿತರ ಜೊತೆಗೆ ಅಬುದಾಬಿಗೆ ತೆರಳಲು ಇಲ್ಲಿದೆ ಸುವರ್ಣಾವಕಾಶ

ಆರೋಗ್ಯ ಮತ್ತು ರಕ್ಷಣಾ ಸಚಿವಾಲಯಗಳು, ಹಾಗೂ ರಾಷ್ಟ್ರೀಯ ಸೇನೆ ಮತ್ತು ರಾಷ್ಟ್ರೀಯ ಪೆಟ್ರೋಲಿಯಂ ಕಾರ್ಪೋರೇಶನ್‌ನಲ್ಲಿ ಕೆಲಸ ಮಾಡುವವರು, ಮಹಿಳಾ ವೈದ್ಯರು ಮತ್ತು ದಾದಿಯರು ತಮ್ಮ ಮಕ್ಕಳನ್ನು 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ತರಲು ಅವಲಂಬಿತ ವೀಸಾಗಳನ್ನು ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಯುಎಇನಲ್ಲಿ ತಗ್ಗಿದ ಕೊರೊನಾ ಅಬ್ಬರ : 500ಕ್ಕಿಂತಲೂ ಕಡಿಮೆ ಪ್ರಕರಣ ದಾಖಲು

(Foreigners in Kuwait get a conditional family visa)

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular