ರಾಜ್ಯವನ್ನು ಬೆಚ್ಚಿ ಬೀಳಿಸಲಿದೆ ಆಪರೇಶನ್ ಹಸ್ತ: ಕಾಂಗ್ರೆಸ್ ಸೇರೋ ಜೆಡಿಎಸ್-ಬಿಜೆಪಿ ಶಾಸಕರ್ಯಾರು ಗೊತ್ತಾ?!

ಬೆಂಗಳೂರು : ರಾಜ್ಯದಲ್ಲಿ 2023 ರ ಚುನಾವಣೆಯನ್ನು ಶತಾಯ ಗತಾಯ ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ಆಫರೇಶನ್ ಹಸ್ತಕ್ಕೆ ಸಿದ್ಧವಾಗಿದ್ದುಇದಕ್ಕಾಗಿ ಕಾಂಗ್ರೆಸ್ ಪಟ್ಟಿ ಸಿದ್ಧಪಡಿಸಿದೆ. ಕೈ ಪಾಳಯ ಲಿಸ್ಟ್ ನಲ್ಲಿರೋ ಎಂಎಮ್ ಎ ಗಳ ಲಿಸ್ಟ್ ಇಲ್ಲಿದೆ.

ಕಳೆದ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಕಾಂಗ್ರೆಸ್ ಈ ವರ್ಷ ಗೆಲ್ಲಲೇ ಬೇಕೆಂಬ ಹಟದಿಂದ ಈಗಲೇ ಚುನಾವಣಾ ರಣತಂತ್ರ ಆರಂಭಿಸಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಲು ಪ್ಲ್ಯಾನ್ ಮಾಡಿರುವ ಕೈ ಪಾಳಯ ಅದಕ್ಕಾಗಿ ಅಲ್ಲಿ ಗೆಲ್ಲುವ ಜೆಡಿಎಸ್ ಹಾಗೂ ಬಿಜೆಪಿ ಕುದುರೆಗಳನ್ನು ಆಯ್ಕೆ ಮಾಡಿಕೊಂಡಿದೆಯಂತೆ.

ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲೇ ಈ ಆಫರೇಶನ್ ಹಸ್ತ ನಡೆಯಲಿದೆಯಂತೆ. ಇದಕ್ಕಾಗಿ ಹಲವು ಹಾಲಿ ಎಂಎಲ್ ಎ ಗಳನ್ನು ಕಾಂಗ್ರೆಸ್ ಪಟ್ಟಿ ಮಾಡಿದೆ.

1. ಸೊರಬ ಶಾಸಕ ಕುಮಾರ ಬಂಗಾರಪ್ಪ- ಈಗಾಗಲೇ ಬಂಗಾರಪ್ಪ ಪುತ್ರ ಮಧುವನ್ನು ಕೈಪಾಳಯಕ್ಕೆ ಸೇರಿಸಿಕೊಂಡಿರೋ ಡಿಕೆಶಿ ಈಗ ಕುಮಾರ್ ಬಂಗಾರಪ್ಪನವರಿಗೂ ಬಲೆಬೀಸಿದೆಯಂತೆ.

2. ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್- ಬಿಎಸ್ವೈ ಸಚಿವ ಸಂಪುಟ ಹಾಗೂ ಸರ್ಕಾರದ ವಿರುದ್ಧ ಅಸಮಧಾನಗೊಂಡಿರುವ ಶಾಸಕ ಗೂಳಿಹಟ್ಟಿ ಶೇಖರ್ ನ್ನು ಡಿಕೆಶಿ ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ಸರ್ಕಸ್ ನಡೆಸಿದ್ದಾರಂತೆ.

3. ಹಿರಿಯೂರು ಶಾಸಕಿ ಪೂರ್ಣಿಮಾ: ಬೊಮ್ಮಾಯಿ ಸಚಿವ ಸಂಪುಟ ಸೇರಬೇಕಿದ್ದ ಹಿರಿಯೂರು ಶಾಸಕಿ ಪೂರ್ಣಿಮಾ ಕೊನೆ ಕ್ಷಣದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿದ್ದರು. ಹೀಗಾಗಿ ಈ ಅಸಮಧಾನದ ಲಾಭ ಪಡೆಯಲು ಹಾಗೂ ಕಾಂಗ್ರೆಸ್ ಹಿರಿಯ ನಾಯಕ ದಿ.ಕೃಷ್ಣಪ್ಪನವರ ಪುತ್ರಿಯಾಗಿರುವ ಪೂರ್ಣಿಮಾರನ್ನು ಪಕ್ಷಕ್ಕೆ ಸೆಳೆಯೋದು ಕೈನಾಯಕರ ಪ್ಲ್ಯಾನ್.

ಇದಲ್ಲದೇ ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ, ತುಮಕೂರು ಗುಬ್ಬಿ ಶಾಸಕ ವಾಸು, ಗ್ರಾಮಾಂತರ ಶಾಸಕ ಗೌರಿ ಶಂಕರ್ ರನ್ನು ಪಕ್ಷಕ್ಕೆ ಸೇರಿಸುವ ಪ್ರಯತ್ನ ಆರಂಭವಾಗಿದೆ.

ಜೆಡಿಎಸ್ ಶಾಸಕರಿಗೆ ತಾವು ಮೂಲೆಗುಂಪಾಗಿರುವ ಅಸಮಧಾನವಿದ್ದರೇ, ಬಿಜೆಪಿಯ ಬಹುತೇಕ ಶಾಸಕರಿಗೆ ಸಚಿವ ಸ್ಥಾನ ಸಿಗದ ಅಸಮಾಧಾನವಿದೆ. ಇದನ್ನೇ ದಾಳವಾಗಿ ಬಳಸಿಕೊಳ್ಳಲಿರೋ ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಲಾರಂಭಿಸಿದೆ.

ಇದನ್ನೂ ಓದಿ : ಕರ್ನಾಟಕದಲ್ಲಿ ಮತ್ತೆ ಆಫರೇಶನ್ ಗಲಾಟೆ: ಬಿಜೆಪಿ ನಾಯಕರನ್ನು ಕಾಂಗ್ರೆಸ್ ಸೆಳೆಯುತ್ತಿದೆ ಎಂದ ಬಿಎಸ್ವೈ

ಇದನ್ನೂ ಓದಿ : ವೈರಲ್‌ ವಿಡಿಯೋದಲ್ಲಿರುವುದು ನಾನಲ್ಲ : ಸ್ಪಷ್ಟನೆ ಕೊಟ್ಟ ಡಿ.ವಿ.ಸದಾನಂದ ಗೌಡ

(karnataka congress plan for next election is operation hasta)

Comments are closed.