ಬಾಲಿವುಡ್ ನಟ-ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಗುರಿಯಾಗೋದು ಇದೇ ಮೊದಲಲ್ಲ. ನಟಿ ಮಲೈಕಾ ಅರೋರಾ ಕೂಡ ಈಗ ನೆಟಿಜನ್ ಗಳ ಟ್ರೋಲ್ ಗೆ ಗುರಿಯಾಗಿದ್ದು, ಅಡ್ಡಾ ದಿಡ್ಡಿ ಹೆಜ್ಜೆ ಹಾಕಿದ ಮಾಡೆಲ್ ಗೆ ನೆಟ್ಟಿಗರು ಕಮೆಂಟ್ ಪಾಸ್ ಮಾಡಿದ್ದಾರೆ.

47 ವರ್ಷದಲ್ಲೂ ಟಿನೇಜ್ ಫಿಟನೆಸ್ ಮೆಂಟೆನ್ ಮಾಡಿರೋ ನಟಿ ಮಲೈಕಾ ಅರೋರಾ ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ನಟಿ. ಸೋಷಿಯಲ್ ಮೀಡಿಯಾ ಪೋಸ್ಟ್, ಹಾಟ್ ಪೋಟೋಸ್, ಜಿಮ್ ವರ್ಕೌಟ್ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಮಲೈಕಾ ಸುದ್ದಿಯಾಗುತ್ತಾರೆ.

ಆದರೆ ಈ ಭಾರಿ ಮಾತ್ರ ಮಲೈಕಾ ವಿಯರ್ಡ್ ವಾಕಿಂಗ್ ಸ್ಟೈಲ್ ನಿಂದ ಸುದ್ದಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ. ತನ್ನ ಯೋಗ ಕ್ಲಾಸ್ ಗಾಗಿ ಕಾರಿನಲ್ಲಿ ಯೋಗ ಸೆಂಟರ್ ಬಳಿ ಬಂದಿಳಿದ ಮಲೈಕಾ, ಸೆಂಟರ್ ಒಳಕ್ಕೆ ಕಾಲಿಡುತ್ತಿದ್ದಂತೆ ಅಡ್ಡಾದಿಡ್ಡಿ ಹೆಜ್ಜೆ ಹಾಕಿದ್ದಾರೆ.
ಕಪ್ಪ ಟೀ ಶರ್ಟ್ಸ್, ಕಪ್ಪು ಕ್ರಾಪ್ ಟಾಪ್ ಧರಿಸಿ ಸ್ಲಿಪರ್ ಜೊತೆ ರಸ್ತೆಗಿಳಿದ ಮಲೈಕಾ ಹೆಜ್ಜೆ ಹಾಕಿದ ರೀತಿಗೆ ಅಭಿಮಾನಿಗಳು ಸಖತ್ ಕಮೆಂಟ್ ಮಾಡಿದ್ದು, ಇದ್ಯಾವ ಹೊಸ ರೀತಿಯ ವಾಕ್? ಡಕ್ ವಾಕ್ ಇರಬಹುದೇ? ಎಂದು ಪ್ರಶ್ನೆ ಮಾಡಿದ್ದಾರೆ. ಮಾತ್ರವಲ್ಲ ಕೆಲವರು ಮುಂದಿನ ವರ್ಷ ಈ ವಾಕಿಂಗ್ ಸ್ಟೈಲ್ ಕೂಡ ಫೇಮಸ್ ಆಗಬಹುದು ಎಂದು ಕಿಚಾಯಿಸಿದ್ದಾರೆ.
(Malaika Arora brutally trolled for her weird walk)