ಹೊದಿಕೆಯಲ್ಲಿ ಅಡಗಿಸಿ ಚಿನ್ನ ಸಾಗಾಟ : 13.88 ಲಕ್ಷ ಮೌಲ್ಯದ ಚಿನ್ನ ವಶ

ಮಂಗಳೂರು : ವಿದೇಶಗಳಿಂದ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಚಿನ್ನ ಸಾಗಣಿಕೆದಾರರು ನಾನಾ ಮಾರ್ಗದ ಮೂಲಕ ಚಿನ್ನ ಕಳವು ಮಾಡುತ್ತಿದ್ದಾರೆ. ಇದೀಗ ಹೊದಿಕೆಯಲ್ಲಿ ಚಿನ್ನವನ್ನು ಅಡಗಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾತನನ್ನು ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ.

ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಹೊದಿಕೆಯಲ್ಲಿ ಸುತ್ತಿದ್ದ ಸುಮಾರು 13,88,823 ಮೌಲ್ಯದ 293.620 ಗ್ರಾಂ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕೇರಳದ ನಿವಾಸಿಯೋರ್ವರು ದುಬೈನಿಂದ ಮಂಗಳೂರಿಗೆ ಬಂದಿಳಿದಿದ್ದಾರೆ. ಈ ವೇಳೆಯಲ್ಲಿ ವ್ಯಕ್ತಿಯನ್ನು ಕಸ್ಟಮ್ಸ್‌ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದಾರೆ. ಈ ವೇಳೆಯಲ್ಲಿ ವ್ಯಕ್ತಿಯ ಬ್ಯಾಗಿನಲ್ಲಿದ್ದ ಹೊದಿಕೆಯಲ್ಲಿ 293.620 ಗ್ರಾಂ ಚಿನ್ನ ಪತ್ತೆಯಾಗಿದೆ. ಇದೀಗ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಇನ್ಮುಂದೆ ಕಟ್ಟಡ ನಿರ್ಮಾಣಕ್ಕಿಲ್ಲ ಮರಳಿನ ಸಮಸ್ಯೆ : ಗ್ರಾಮೀಣ ಜನರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಇದನ್ನೂ ಓದಿ : ಹೈಟೆಕ್‌ ವೇಶ್ಯಾವಾಟಿಕೆ ಜಾಲ ಬಯಲು : ಸುರಂಗದಲ್ಲಿ ಅವಿತಿದ್ದರು ಸುಂದರಿಯರು

( Gold Wrapped in clothes, Customs officials seize gold worth Rs 13.88 lakh in Mangalore )

Comments are closed.