ಎನ್​ಡಿಎ ಪರೀಕ್ಷೆಗೆ ಮಹಿಳೆಯರಿಗೆ ಅವಕಾಶ ನೀಡಲು ಖಡಕ್​ ವಾರ್ನಿಂಗ್ ನೀಡಿದ ʼಸುಪ್ರೀಂʼ !

ನವೆದೆಹಲಿ : ನವೆಂಬರ್​ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ( National Defence Academy ) ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೂ ಅವಕಾಶ ನೀಡಲೇಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಮುಂದಿನ ವರ್ಷದ ಮೇ ತಿಂಗಳಲ್ಲಿ ಮಹಿಳೆಯರಿಗೆ ಎನ್​ಡಿಎ (NDA) ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವಾಲಯ ಸುಪ್ರೀಂ ಕೋರ್ಟ್​ಗೆ ಮಾಹಿತಿ ನೀಡಿತ್ತು. ಇದೀಗ ಒಂದು ದಿನದ ಬಳಿಕವೇ ಸುಪ್ರೀಂ ಕೋರ್ಟ್ ಈ ಸೂಚನೆ ನೀಡಿದೆ.

ಇದನ್ನೂ ಓದಿ: PM Modi to US : ಸೆ.23ಕ್ಕೆ ಮೋದಿ ಅಮೇರಿಕಾ ಭೇಟಿ : ಜೋ ಬೈಡನ್‌ ಜೊತೆ ಮಹತ್ವದ ಮಾತುಕತೆ

ಮಹಿಳೆಯರಿಗೆ ಈ ವರ್ಷದಿಂದಲೇ ಎನ್​ಡಿಎ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕು. ಇದನ್ನು ಒಂದು ವರ್ಷಗಳ ಕಾಲ ಮುಂದುವರಿಸಲು ಸಾಧ್ಯವೇ ಇಲ್ಲ. ನವೆಂಬರ್​ನಲ್ಲಿ ನಡೆಯಲಿರುವ ಪರೀಕ್ಷೆಗೆ ಪರಿಷ್ಕೃತ ಅಧಿಸೂಚನೆ ಹೊರಡಿಸಬೇಕು ಎಂದು ಸುಪ್ರೀಂ ಕೋರ್ಟ್​ ಖಡಕ್​ ಸೂಚನೆ ನೀಡಿದೆ.

ಇದನ್ನೂ ಓದಿ: ಕೋಲಿನಲ್ಲಿ ಹೊಡೆದು ಮಗಳ ಹತ್ಯೆ ಮಾಡಿದ ತಂದೆ ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ

(The Supreme Court issued by Warning to allow women to take NDA exams)

Comments are closed.