ಅಶ್ಲೀಲ ಚಿತ್ರಗಳ ನಿರ್ಮಾಣ ಹಾಗೂ ಪ್ರಸಾರದ ಆರೋಪದ ಮೇಲೆ ಜೈಲು ಸೇರಿದ್ದ ರಾಜ್ ಕುಂದ್ರಾಗೆ ಕೊನೆಗೂ ಜಾಮೀನು ಸಿಕ್ಕಿದೆ. ಈ ಜಾಮೀನಿನೊಂದಿಗೆ ನಟಿ ಶಿಲ್ಪಾ ಶೆಟ್ಟಿ ಕೌಟುಂಬಿಕ ಕಲಹದ ಗಾಸಿಪ್ ಗಳಿಗೆ ತೆರೆ ಬಿದ್ದಿದೆ.

ಎರಡು ತಿಂಗಳ ಜೈಲುವಾಸದ ಬಳಿಕ ಮನೆಗೆ ವಾಪಸ್ಸಾದ ಉದ್ಯಮಿ ರಾಜ್ ಕುಂದ್ರಾರನ್ನು ನಟಿ ಶಿಲ್ಪಾ ಶೆಟ್ಟಿ, ಅತ್ತೆ ಸುನಂದಾ ಶೆಟ್ಟಿ, ಪುತ್ರ ವಿಯಾನ್ ಶೆಟ್ಟಿ ಸೇರಿದಂತೆ ಕುಟುಂಬಸ್ಥರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ ಎನ್ನಲಾಗಿದೆ.

ಅಲ್ಲದೇ ಪತಿಯ ಜಾಮೀನಿನ ಸುದ್ದಿ ತಿಳಿಯುತ್ತಿದ್ದಂತೆ ನಟಿ ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಪಾಸಿಟಿವ್ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಮೂಲಕ ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾರಿಂದ ದೂರವಾಗಲಿದ್ದಾರೆ ಎಂಬ ವದಂತಿಗಳು ಕೊನೆಗೊಂಡಂತಾಗಿದೆ.

ಅಶ್ಲೀಲ ಚಿತ್ರ ತಯಾರಿಕೆ ಆರೋಪದ ಮೇಲೆ ರಾಜ್ ಕುಂದ್ರಾ ಜೈಲು ಸೇರುತ್ತಿದ್ದಂತೆ ಶಿಲ್ಪಾ ಶೆಟ್ಟಿ ಪತಿ ವಿರುದ್ಧ ಗರಂ ಆಗಿದ್ದಾರೆ. ಬೇಸರದಿಂದ ರಾಜ್ ಕುಂದ್ರಾರಿಂದಲೇ ದೂರವಾಗಲು ನಿರ್ಧರಿಸಿ ಮಕ್ಕಳೊಂದಿಗೆ ಪತಿಗೆ ಡಿವೋರ್ಸ್ ನೀಡಲು ಚಿಂತನೆ ನಡೆಸಿದ್ದಾರೆ ಎಂದು ಸುದ್ದಿ ಹಬ್ಬಿತ್ತು.
ಕೆಲ ದಿನಗಳ ಕಾಲ ಸೋಷಿಯಲ್ ಮೀಡಿಯಾ, ಸಾಮಾಜಿಕ ಬದುಕಿನಿಂದ ದೂರವಿದ್ದ ಶಿಲ್ಪಾ ಶೆಟ್ಟಿ ಪತಿಯ ಹಗರಣದಿಂದ ಮುಜುಗರಕ್ಕಿಡಾಗಿದ್ದರು ಎನ್ನಲಾಗಿತ್ತು. ಜಡ್ಜ್ ಆಗಿದ್ದ ಡ್ಯಾನ್ಸ್ ಶೋದಿಂದಲೂ ಶಿಲ್ಪಾ ದೂರವಾಗಿದ್ದರು. ಆದರೆ ಬಳಿಕ ಶಿಲ್ಪಾ ಮತ್ತೆ ತಮ್ಮ ಸೋಷಿಯಲ್ ಲೈಫ್ ಗೆ ಮರಳಿದ್ದರು.
ಈಗ ಪತಿಯೊಂದಿಗೆ ಶಿಲ್ಪಾ ಶೆಟ್ಟಿ ಪತಿ ಸೇರಿಕೊಂಡಿದ್ದು, ಆ ಮೂಲಕ ಬಾಲಿವುಡ್ ನಟಿಯ ಲೈಫ್ ಗಾಸಿಗ್ ಗಳು ಸುಖಾಂತ್ಯಕಂಡಂತಾಗಿದೆ.
(shilpa shetty and raj kundra put full stop for divorce rumours)