ಬುಧವಾರ, ಏಪ್ರಿಲ್ 30, 2025
HomeNationalGoogle meet marriage : ಕೇರಳದಲ್ಲಿ ವಧು, ಉಕ್ರೇನ್ ನಲ್ಲಿ ವರ, ಗೂಗಲ್ ಮೀಟ್ ನಲ್ಲಿ...

Google meet marriage : ಕೇರಳದಲ್ಲಿ ವಧು, ಉಕ್ರೇನ್ ನಲ್ಲಿ ವರ, ಗೂಗಲ್ ಮೀಟ್ ನಲ್ಲಿ ನಡೆಯಿತು ಮದುವೆ

- Advertisement -

ಪುನಲೂರ್​: ಇತ್ತೀಚಿನ ದಿನಗಳಲ್ಲಿ ಏನೇ ಬೇಕು ಅಂದ್ರೂ ಅನ್ಲೈನ್ ಮೊರೆ ಹೋಗುತ್ತಿದ್ದಾರೆ. ಅಂತೆಯೇ ಉಕ್ರೇನ್​ನಲ್ಲಿರುವ ವರ ಜೀವನ್​ ಕುಮಾರ್​ ಜತೆ ಕೇರಳದ ವಧು ಧನ್ಯಾ ಮಾರ್ಟಿನ್ ಕೇರಳದ ಪುನಲೂರ್​ನಲ್ಲಿ ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಕಾನೂನುಬದ್ಧವಾಗಿ ಆನ್​ಲೈನ್​ ಮೂಲಕವೇ ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಮದುವೆ ನೋಂದಣಿಯನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ. ಆದರೆ ಡಿಜಿಟಲ್​ ಸೌಲಭ್ಯದೊಂದಿಗೆ ನೆರವೇರಿದ ಕೇರಳದ ಮೊದಲನೇ ಮದುವೆ ಇದಾಗಿದೆ.

ಇದನ್ನೂ ಓದಿ: ಮನುಷ್ಯನ ದೇಹಕ್ಕೆ ಹಂದಿ ಕಿಡ್ನಿ ಯಶಸ್ವಿ ಕಸಿ : ವೈದ್ಯಲೋಕದ ಸಾಹಸಕ್ಕೆ ನಿಬ್ಬೆರಗಾಯ್ತು ಜಗತ್ತು

ಕೇರಳದ ಪುನಲೂರ್ ನಿವಾಸಿಯಾಗಿರುವ ಜೀವನ್​ ಕುಮಾರ್​‌ಗೆ ತಿರುವಂತಪುರಂನ ಕಝಕ್ಕೂಟಂ ಮೂಲದ ನಿವಾಸಿ ಧನ್ಯಾ ಜೊತೆ ವಿವಾಹ ನಿಶ್ವಯವಾಗಿತ್ತು. ಕೋವಿಡ್​ ಹಿನ್ನೆಲೆಯಲ್ಲಿ ಜೀವನ್ ಕುಮಾರ್ ಗೆ ಉಕ್ರೇನ್​ನಿಂದ ಕೇರಳಕ್ಕೆ ಬರಲು ಸಾಧ್ಯವಾಗಲಿಲ್ಲ.  ವಿಶೇಷ ಮದುವೆ ಕಾಯ್ದೆ ಪ್ರಕಾರ ತಮ್ಮ ಮದುವೆಯನ್ನು ನೋಂದಣಿ ಮಾಡಲು ಕಳೆದ ಮಾರ್ಚ್​ನಲ್ಲೇ ಧನ್ಯಾ ಮತ್ತು ಜೀವನ್​ ಕುಮಾರ್​ ಅರ್ಜಿ ಸಲ್ಲಿಸಿದ್ದರು. ಆದರೆ, ನಿಗದಿತ ಸಮಯಕ್ಕೆ ಜೀವನ್​ ಕುಮಾರ್​ ಕೇರಳಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್​ ಮೆಟ್ಟಿಲೇರಿದ್ದರು.

ಅರ್ಜಿಯ ಸಿಂಧುತ್ವವನ್ನು ವಿಸ್ತರಿಸಬೇಕು ಮತ್ತು ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಎರಡೂ ಕುಟುಂಬಗಳ ಉಪಸ್ಥಿತಿಯ ನಿಯಮದಲ್ಲಿ ಸಡಿಲಿಕೆ ನೀಡಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಮದುವೆ ನೆರವೇರಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ನ್ಯಾಯಾಲಯ ವಿದೇಶಾಂಗ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಇಲಾಖೆ ಅಭಿಪ್ರಾಯಗಳನ್ನು ಪರಿಗಣಿಸಿ, ಕೋರ್ಟ್​ ಅನ್ಲೈನ್ ಮದುವೆ ನೆರವೇರಿಸಲು ಅನುಮತಿಯನ್ನು ನೀಡಿತ್ತು.

ಇದನ್ನೂ ಓದಿ:volcano Ganesh : ಜ್ವಾಲಾಮುಖಿಯ ತುದಿಯಲ್ಲಿ ನೆಲೆಸಿದ್ದಾನೆ ಗಣಪ

ಈ ಹಿನ್ನೆಲೆಯಲ್ಲಿ ಆನ್​ಲೈನ್​ ಸೌಲಭ್ಯ ಮೂಲಕ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಸಬ್​ ರಿಜಿಸ್ಟ್ರಾರ್​ ಟಿ.ಎಂ. ಫಿರೋಜ್​ ನೇತೃತ್ವದಲ್ಲಿ ಈ ವಿವಾಹ ಕಾರ್ಯಕ್ರಮ ಗೂಗಲ್ ಮೀಟ್ ಮೂಲಕ ಅಚ್ಚುಕಟ್ಟಾಗಿ ನೆರವೇರಿದೆ. ವರನ ತಂದೆ ದೇವರಾಜನ್​ ತಂದೆಯ ಪರವಾಗಿ ಸಹಿ ಹಾಕಿದರು. ಮದುವೆಯ ನಂತರ ವಧು ಧನ್ಯಾಗೆ ಮದುವೆಯ ಪ್ರಮಾಣ ಪತ್ರವನ್ನು ತಕ್ಷಣ ವಧುವಿಗೆ ಹಸ್ತಾಂತರಿಸಲಾಯಿತು ರಾಜ್ಯದಲ್ಲೇ ಮೊದಲ ಆನ್​ಲೈನ್​ ಮದುವೆಗೆ ಧನ್ಯಾ ಮತ್ತು ಜೀವನ್​ ಕುಮಾರ್​ ಸಾಕ್ಷಿಯಾಗಿದ್ದಾರೆ.

(Bride in Kerala, groom in Ukraine, wedding held at Google Meet)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular