ಸೋಮವಾರ, ಏಪ್ರಿಲ್ 28, 2025
HomehoroscopeHoroscope : ದಿನಭವಿಷ್ಯ : ಹೊಸ ಹೂಡಿಕೆ ಲಾಭವನ್ನು ತರಲಿದೆ

Horoscope : ದಿನಭವಿಷ್ಯ : ಹೊಸ ಹೂಡಿಕೆ ಲಾಭವನ್ನು ತರಲಿದೆ

- Advertisement -

ಮೇಷರಾಶಿ
ನಿಮ್ಮ ಭರವಸೆಯು ಈಡೇರಿಕೆಯಾಗಲಿದೆ. ಅನಿರೀಕ್ಷಿತ ಬಿಲ್‌ಗಳು ಹಣಕಾಸಿನ ಹೊರೆಯನ್ನು ಹೆಚ್ಚಿಸುತ್ತವೆ. ಸಂಬಂಧಿಕರ ಭೇಟಿ ಎಣಿಕೆಗಿಂತಲೂ ಹೆಚ್ಚಿನ ಲಾಭವನ್ನು ತಂದುಕೊಡಲಿದೆ, ಉಚಿತ ಸಮಯವನ್ನು ಮನರಂಜನೆಯಲ್ಲಿ ಕಳೆಯುವಿರಿ, ವೈವಾಹಿಕ ಜೀವನವು ಉತ್ತಮವಾಗಿರಲಿದೆ, ಉತ್ತಮ ಭೋಜನ ದೊರೆಯಲಿದೆ.

ವೃಷಭರಾಶಿ
ಇಚ್ಛಾಶಕ್ತಿಯ ಕೊರತೆಯು ನಿಮ್ಮನ್ನು ಭಾವನಾತ್ಮಕ ಮತ್ತು ಮಾನಸಿಕ ವರ್ತನೆಗೆ ಬಲಿಪಶು ಮಾಡಬಹುದು. ಹೊಸ ಹಣಕಾಸಿನ ವ್ಯವಹಾರವನ್ನು ಅಂತಿಮಗೊಳ್ಳಲಿದೆ, ಹೊಸ ಮೂಲಗಳಿಂದ ಹಣಕಾಸಿನ ಲಾಭ, ಬಾಕಿ ಉಳಿದಿರುವ ಕೆಲಸಗಳ ಹೊರತಾಗಿಯೂ ಸಾಮಾಜಿಕ ಕಾರ್ಯಕ್ಕೆ ಮನಸ್ಸು ಅರಳುತ್ತದೆ, ನೀವು ಮಾಡುವ ಯಾವುದೇ ಕೆಲಸ ಪರಿಪೂರ್ಣವಾಗಲಿದೆ.

ಮಿಥುನರಾಶಿ
ಇತರರೊಂದಿಗೆ ಸಂತೋಷ ಹಂಚಿಕೊಂಡ್ರೆ ಆರೋಗ್ಯ ವೃದ್ದಿ, ಮನೆಗೆ ಸಂಬಂಧಿಸಿದ ಹೂಡಿಕೆ ಲಾಭವನ್ನು ತರಲಿದೆ, ಸ್ನೇಹಿತರು ಹಾಗೂ ಪರಿಚಯಸ್ಥರು ಸಹಕಾರ ನೀಡಲಿದ್ದಾರೆ. ಪ್ರಿಯತಮೆಗೆ ಮುಜುಗರ ತರುವ ಕಾರ್ಯ ನಡೆಯದಿರಲಿ, ಸಮಸ್ಯೆಗಳಿಗೆ ತ್ವರಿತವಾಗಿ ಕಾರ್ಯನಿರ್ವಹಿಸುವ ನಿಮ್ಮ ಸಾಮರ್ಥ್ಯವು ನಿಮಗೆ ಮನ್ನಣೆಯನ್ನು ತರುತ್ತದೆ. ಅನಿರೀಕ್ಷಿತ ಅತಿಥಿಯಿಂದ ಕಾರ್ಯ ಹಾನಿ.

ಕರ್ಕಾಟಕರಾಶಿ
ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ಆರೋಗ್ಯವು ಉತ್ತಮವಾಗಿರುತ್ತದೆ. ವ್ಯಾಪಾರ ಲಾಭವನ್ನು ತರಲಿದೆ, ಹಿರಿಯರು ನಿಮಗೆ ಸಲಹೆ ನೀಡಲಿದ್ದಾರೆ, ನೀವು ಅವರ ಸಲಹೆ ಆಲಿಸಿದ್ರೆ ನೀವು ಪೂರ್ಣವಂತರು. ನಿಮ್ಮ ಅಗತ್ಯಕ್ಕೆ ಸಂಬಂಧಿಸಿದಂತೆ ಸಹೋದರರು ಸಹಕಾರ ನೀಡಲಿದ್ದಾರೆ. ಸಂಗಾತಿಯೊಂದಿಗೆ ಸಮಯ ಕಳೆಯಲು ಯತ್ನಿಸಿ.

ಸಿಂಹರಾಶಿ
ಆಹಾರ ಸೇವನೆಯಲ್ಲಿ ಎಚ್ಚರಿಕೆ ಇರಲಿ, ಹೊಸ ಆರ್ಥಿಕ ಲಾಭವು ದೊರೆಯಲಿದೆ, ಸ್ನೇಹಿತರು ನಿಮಗೆ ಸಮಸ್ಯೆಯನ್ನು ತಂದಿಡಲಿದ್ದಾರೆ. ರಾಶಿ ಚಕ್ರದ ಹಿನ್ನೆಲೆಯಲ್ಲಿ ಅಧಿಕ ಮಾತನಾಡಬೇಕಾಗುತ್ತದೆ, ಈ ರಾಶಿಯ ಉದ್ಯಮಿಗಳು ಯಾವುದೇ ಹಳೆಯ ಹೂಡಿಕೆಯಿಂದ ಇಂದು ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ನಿಮ್ಮ ಪ್ರೀತಿಪಾತ್ರರು ನಿಮಗೆ ಸಾಕಷ್ಟು ಸಮಯವನ್ನು ನೀಡುವುದಿಲ್ಲ.

ಇದನ್ನೂ ಓದಿ : ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತ : ಪುನೀತ್ ಸಾವಿನ ಬೆನ್ನಲ್ಲೇ ಹೃದಯ ತಪಾಸಣೆಗೆ ಮುಗಿಬಿದ್ದ ಬೆಂಗಳೂರು ಜನ

ಕನ್ಯಾರಾಶಿ
ನಿಮಗೆ ಇಂದು ಸಾಕಷ್ಟು ವಿಶ್ರಾಂತಿಯ ಅಗತ್ಯವಿದೆ, ನಿಮ್ಮನ್ನು ಪ್ರೀತಿಸುವ ಮತ್ತು ಕಾಳಜಿ ವಹಿಸುವ ಜನರಿಗೆ ಸಮಯ ನೀಡಿ, ಕೆಲಸದ ಸ್ಥಳದಲ್ಲಿ ನಿಮ್ಮ ವಿರುದ್ದ ವಿರೋಧಿಗಳು ಪಿತೂರಿಯನನು ಮಾಡುವ ಸಾಧ್ಯತೆಯಿದೆ, ಜಾಗರೂಕತೆ ಹಾಗೂ ಎಚ್ಚರಿಕೆಯಿಂದ ಕೆಲಸ ಮಾಡಿ. ಇಂದು ನೀವು ಸಾಕಷ್ಟು ಆಸಕ್ತಿದಾಯಕ ಆಮಂತ್ರಣಗಳನ್ನು ಪಡೆಯುತ್ತೀರಿ.
ತುಲಾರಾಶಿ
ಒತ್ತಡದ ನಡುವಲ್ಲೇ ಆರೋಗ್ಯ ವೃದ್ದಿಸಲಿದೆ, ಸಾಲಗಾರರಿಂದ ನಿಮ್ಮ ಖಾತೆಗೆ ಹಣ ಜಮೆಯಾಗಲಿದೆ, ಸಾಲಗಾರರು ಯಾವುದೇ ಸುಳಿವು ಇಲ್ಲದೇ ನಿಮ್ಮ ಖಾತೆಗೆ ಹಣವನ್ನು ವರ್ಗಾಯಿಸಲಿದ್ದಾರೆ. ಆರ್ಥಿಕ ವಿಚಾರದಲ್ಲಿ ನಿಮಗೆ ಅಚ್ಚರಿಯೊಂದು ಕಾದಿದೆ. ಮೇಲಾಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗುವಿರಿ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ.

ವೃಶ್ಚಿಕರಾಶಿ
ನಿಮ್ಮ ವೈಯಕ್ತಿಕ ಸಮಸ್ಯೆಗಳು ಮಾನಸಿಕ ಸಂತೋಷವನ್ನು ಹಾಳುಮಾಡಬಹುದು . ಮಾನಸಿಕ ವ್ಯಾಯಾಮದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ಸಹೋದ್ಯೋಗಿಗಳು ಮತ್ತು ಹಿರಿಯರು ಸಂಪೂರ್ಣ ಸಹಕಾರವನ್ನು ನೀಡಲಿದ್ದಾರೆ. ಹೊಸ ಹೂಡಿಕೆಗಳು ನಿಮಗೆ ಕೈ ಕೊಡುವ ಸಾಧ್ಯತೆಯಿದೆ. ದೂರದ ಊರಿನಿಂದ ವಿಶೇಷ ಸಮಾಚಾರವೊಂದು ಕೇಳಿಬರಲಿದೆ.

ಧನಸ್ಸುರಾಶಿ
ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚಗಳನ್ನು ತಿನ್ನಿ, ವ್ಯಾಪಾರ ಸಾಲಕ್ಕಾಗಿ ನಿಮ್ಮನ್ನು ಸಂಪರ್ಕಿಸುವವರನ್ನು ನಿರ್ಲಕ್ಷಿಸಿ. ಯಶಸ್ಸು ಖಂಡಿತವಾಗಿಯೂ ನಿಮ್ಮದಾಗಿದೆ- ನೀವು ಒಂದು ಸಮಯದಲ್ಲಿ ನಿರ್ಣಾಯಕ ಬದಲಾವಣೆಗಳನ್ನು ಮಾಡಿದರೆ. ವ್ಯಾಪಾರ ಉದ್ದೇಶಕ್ಕಾಗಿ ಕೈಗೊಂಡ ಪ್ರಯಾಣವು ದೀರ್ಘಾವಧಿಯಲ್ಲಿ ಪ್ರಯೋಜನಕಾರಿಯಾಗಲಿದೆ,

ಮಕರರಾಶಿ
ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ತನ್ನಿ. ವ್ಯಾಪಾರ ಸಾಲಕ್ಕಾಗಿ ನಿಮ್ಮನ್ನು ಸಂಪರ್ಕಿಸುವವರನ್ನು ನಿರ್ಲಕ್ಷಿಸಿ. ನಿಮ್ಮ ಸಂಬಂಧವನ್ನು ಹಾಳುಮಾಡುತ್ತದೆ. ಯಶಸ್ಸು ಖಂಡಿತವಾಗಿಯೂ ನಿಮ್ಮದಾಗಿದೆ. ವ್ಯಾಪಾರ ಉದ್ದೇಶಕ್ಕಾಗಿ ಕೈಗೊಂಡ ಪ್ರಯಾಣವು ಅಧಿಕ ಲಾಭ ದೊರೆಯಲಿದೆ, ಹೊಂದಾಣಿಕೆಯಿಂದ ಯಾವುದೇ ಕಾರ್ಯವನ್ನು ಮಾಡಬಹುದು.

ಕುಂಭರಾಶಿ
ಸಂಜೆ ಸ್ವಲ್ಪ ವಿಶ್ರಾಂತಿ. ನಿಮ್ಮ ಬಳಿ ಸಾಕಷ್ಟು ಹಣವಿಲ್ಲ ಎಂದು ನೀವು ಭಾವಿಸಿದರೆ, ಹಣ ನಿರ್ವಹಣೆ ಮತ್ತು ಉಳಿತಾಯದ ಬಗ್ಗೆ ಹಿರಿಯರಿಂದ ಸಲಹೆ ಪಡೆಯಿರಿ. ಒಂದೇ ಒಂದು ಒಳ್ಳೆಯ ಕಾರ್ಯದಿಂದಾಗಿ ಕೆಲಸದಲ್ಲಿರುವ ಶತ್ರುಗಳು ಇಂದು ನಿಮ್ಮೊಂದಿಗೆ ಸ್ನೇಹಿತರಾಗಬಹುದು. ನಿಮ್ಮ ಬಿಡುವಿನ ವೇಳೆಯನ್ನು ಬಳಸಿಕೊಳ್ಳಲು ನೀವು ಕಲಿಯಬೇಕು ಇಲ್ಲದಿದ್ದರೆ ನೀವು ಜೀವನದಲ್ಲಿ ಹಿಂದೆ ಉಳಿಯುತ್ತೀರಿ. ಇಂದು ನಿಮ್ಮ ಸಂಗಾತಿಯ ಕ್ಷೀಣಿಸುತ್ತಿರುವ ಆರೋಗ್ಯದಿಂದಾಗಿ ನೀವು ಒತ್ತಡಕ್ಕೆ ಒಳಗಾಗಬಹುದು.

ಮೀನರಾಶಿ
ನಿಮ್ಮ ಶಕ್ತಿಯ ಮಟ್ಟವು ಅಧಿಕವಾಗಿರುತ್ತದೆ, ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ನೀವು ಅದನ್ನು ಬಳಸಬೇಕು. ದೊಡ್ಡ ಯೋಜನೆಗಳು ಇತರರ ಗಮನ ಸೆಳೆಯುತ್ತದೆ, ಯಾವುದೇ ಹೂಡಿಕೆಗೆ ಮೊದಲು ವ್ಯಕ್ತಿಯನ್ನು ಸರಿಯಾಗಿ ಪರಿಚಯ ಮಾಡಿಕೊಳ್ಳಿ, ಕುಟುಂಬದಲ್ಲಿ ಹೊಸ ಅತಿಥಿಯ ಆಗಮನವು ಸಂಭ್ರಮಾಚರಣೆಯನ್ನು ತರಲಿದೆ. ಹೊಸ ಯೋಜನೆಯನ್ನು ಕೈ ಹಾಕಲು ಮೊದಲು ತಜ್ಞರ ಸಲಹೆಯನ್ನು ಪಡೆಯುವಿರಿ.

ಇದನ್ನೂ ಓದಿ : ನೌಕಾಪಡೆ ಸೇರಲು ಬಯಸುವವರಿಗೆ ಗುಡ್‌ ನ್ಯೂಸ್‌ : ನೌಕಾಪಡೆ 300 ಹುದ್ದೆಗಳಿಗೆ ಅರ್ಜಿ ಆಹ್ವಾನ

( Horoscope today astrological prediction for November 02 )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular