ಮಂಗಳವಾರ, ಏಪ್ರಿಲ್ 29, 2025
HomeNationalMLA's son dies : ಗುಂಡು ಹಾರಿಸಿಕೊಂಡು ಕಾಂಗ್ರೆಸ್‌ ಶಾಸಕರ ಪುತ್ರ ಆತ್ಮಹತ್ಯೆ

MLA’s son dies : ಗುಂಡು ಹಾರಿಸಿಕೊಂಡು ಕಾಂಗ್ರೆಸ್‌ ಶಾಸಕರ ಪುತ್ರ ಆತ್ಮಹತ್ಯೆ

- Advertisement -

ಮಧ್ಯಪ್ರದೇಶ : ಶಾಸಕರ ಅಪ್ರಾಪ್ತ ಪುತ್ರನೋರ್ವ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಬಬಲ್‌ ಪುರ ನಡೆದಿದೆ. ಕಾಂಗ್ರೆಸ್‌ ಶಾಸಕ ಸಂಜಯ್‌ ಯಾದವ್‌ ( MLA Sanjaya Yadav )ಅವರ ಪುತ್ರ ವೈಭವ್‌ ಅಲಿಯಾಸ್‌ ವಿಭು ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ.

ವೈಭವ್ ಯಾದವ್ (17 ವರ್ಷ) ಎಂಬಾತ ಜಬಲ್‌ಪುರ ಪಟ್ಟಣದ ಗೋರಖ್‌ಪುರ ಪ್ರದೇಶದಲ್ಲಿ ತನ್ನ ತಂದೆ ಸಂಜಯ್ ಯಾದವ್ ಅವರ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಡೆಯುತ್ತಲೇ ವೈಭವ್‌ ಯಾದವ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ವೈಭವ್‌ ಯಾದವ್‌ ತಂದೆ ಸಂಜಯ್ ಯಾದವ್ ಅವರು ಜಬಲ್ಪುರ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿರುವ ಬಾರ್ಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ.

ಘಟನೆಯ ಬೆನ್ನಲ್ಲೇ ಪೊಲೀಸರು ಬಬಲ್‌ಪುರದಲ್ಲಿರುವ ಮನೆಯಲ್ಲಿ ಶಾಸಕ ಸಂಜಯ್‌ ಯಾದವ್‌ ಅವರ ರಿವಾಲ್ವಾರ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮನೆಯಲ್ಲಿ ವೈಭವ್‌ ಯಾದವ್‌ ಡೆತ್‌ನೋಟ್‌ ಪತ್ತೆಯಾಗಿದ್ದು, ಪತ್ರದಲ್ಲಿ ಸಾವಿಗೆ ನಿಖರವಾದ ಕಾರಣ ಏನೂ ಅನ್ನೋದನ್ನು ನಮೂದಿಸಿಲ್ಲ ಎಂದು ಜಬಲ್ ಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿದ್ದಾರ್ಥ್‌ ಬಹುಗುಣ ಅವರು ತಿಳಿಸಿದ್ದಾರೆ ಎಂದು ಖ್ಯಾತ ಸುದ್ದಿವಾಹಿನಿ ಇಂಡಿಯಾ ಟುಡೆ ವರದಿ ಮಾಡಿದೆ.

ವೈಭವ್‌ ಯಾದವ್‌ 12ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾನೆ. ವಾಶ್‌ ರೂಂನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವೈಭವ್‌ ಯಾದವ್‌ ತನ್ನ ಸ್ನೇಹಿತರಿಗೆ ಮೇಸೇಜ್‌ ಕಳುಹಿಸಿದ್ದು, ಅವರಿಗೆಲ್ಲರಿಗೂ ಧನ್ಯವಾದವನ್ನು ತಿಳಿಸಿದ್ದಾನೆ ಎನ್ನಲಾಗುತ್ತಿದೆ. ಆದರೆ ಶಾಸಕರ ಪುತ್ರನ ಸಾವಿಗೆ ನಿಖರವಾದ ಕಾರಣ ಮಾತ್ರ ತಿಳಿದುಬಂದಿಲ್ಲ.

ಇದನ್ನೂ ಓದಿ : Puneeth Rajkumar ಹಾದಿ ತುಳಿದ ಜಮೀರ್ : ನೇತ್ರದಾನಕ್ಕೆ ಸಹಿ ಹಾಕಿದ ಶಾಸಕ

ಇದನ್ನೂ ಓದಿ : Bitcoin ಕೇಸಲ್ಲಿ ಬಿಜೆಪಿ ನಾಯಕರ ವಿರುದ್ದ ಮುನಿಸು : ಮೋದಿ, ಅಮಿತ್‌ ಶಾಗೆ ದೂರು ಕೊಟ್ಟ ಸಿಎಂ ಬೊಮ್ಮಾಯಿ

( Congress MLA Sanjaya Yadav’s son Vaibhav Yadav Commits Suicide in Jabalpur Madhya Pradesh )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular