Yash Bollywood : ಬಾಲಿವುಡ್ ಗೆ ಎಂಟ್ರಿ ಕೊಡ್ತಾರಾ ರಾಕಿಂಗ್ ಸ್ಟಾರ್ : ಸುಳಿವು ಬಿಟ್ಟು ಕೊಟ್ಟ ಡಬ್ಬುರತ್ನಾನಿ

ಸಿನಿಮಾ ಅದೇಷ್ಟೇ ಎತ್ತರಕ್ಕೇ ಏರಿದರೂ ಅವರ ಭವಿಷ್ಯಕ್ಕೆ ಆಧಾರವಾಗೋದು ಸದಾ ಟ್ರೆಂಡಿಯಾಗಿ ನಡೆಸೋ ಪೋಟೋಶೂಟ್. ಈಗ ಇಂತಹುದೇ ಪೋಟೋಶೂಟ್ ನಿಂದ ರಾಕಿಂಗ್ ಸ್ಟಾರ್ ಯಶ್ ಸುದ್ದಿಯಲ್ಲಿದ್ದು, ಯಶ್ (Yash ) ಅಭಿಮಾನಿಗಳಿಗೆ ಭರ್ಜರಿ ಬ್ರೇಕಿಂಗ್ ನ್ಯೂಸ್ ಸಿಗೋ ಸಾಧ್ಯತೆ ಇದೆ. ಸದ್ಯ ಕೆಜಿಎಫ್- 2 ಬಿಡುಗಡೆಗಾಗಿ ಕಾದಿರೋ ಯಶ್ (Yash) ಅಭಿಮಾನಿಗಳಿಗೆ ಕೆಜಿಎಫ್-2 ಗಿಂತ ಹೆಚ್ಚು ಖುಷಿ ಕೊಡೋ ಸುದ್ದಿಯೊಂದು ಸಿಗೋ ಸಾಧ್ಯತೆ ದಟ್ಟವಾಗತೊಡಗಿದೆ.

ಅದು ಮತ್ತೆನಲ್ಲ ರಾಕಿಂಗ್ ಸ್ಟಾರ್ ಯಶ್ ಸದ್ಯದಲ್ಲೇ ಸ್ಯಾಂಡಲ್ ವುಡ್ ಗಡಿ ದಾಟಿ ಬಾಲಿವುಡ್ ಗೆ ಕಾಲಿರಿಸಲಿದ್ದಾರೆ. ಸಿನಿಮಾ ಯಾವುದು, ಏನು ಅನ್ನೋ ವಿವರಣೆಗಳು ಸಿಗದೇ ಇದ್ದರೂ ಬಾಲಿವುಡ್ ಪ್ರವೇಶ ಬಹುತೇಕ ಖಚಿತ ಎನ್ನಲಾಗ್ತಿದೆ. ಇದಕ್ಕೆ ಸಾಕ್ಷಿ ಆಗ್ತಿರೋದು ಯಶ್ ಡಬ್ಬು ರತ್ನಾನಿ ಜೊತೆ ನಡೆಸಿರೋ ಪೋಟೋಶೂಟ್. ಡಬ್ಬು ರತ್ನಾನಿ ಬಾಲಿವುಡ್ ನ ಪೋಟೋಶೂಟ್ ಸ್ಪೆಶಲಿಸ್ಟ್. ಇವರ ಕ್ಯಾಮರಾಕ್ಕೆ ಪೋಸ್ ನೀಡಲು ಸೆಲೆಬ್ರೆಟಿಗಳು, ನಟಿಯರು ಕಾಯುತ್ತಿರುತ್ತಾರೆ.

ಇಂಥಹ ಸೆಲೆಬ್ರೆಟಿ ಸ್ಪೆಶಲಿಸ್ಟ್ ಡಬ್ಬು ರತ್ನಾನಿ ಕ್ಯಾಮರಾಕ್ಕೆ ಕನ್ನಡದ ಅಣ್ಣ ತಮ್ಮ, ರಾಮಾಚಾರಿ ರಾಕಿಂಗ್ ಸ್ಟಾರ್ ಯಶ್ ಪೋಟೋ ಪೋಸ್ ನೀಡಿದ್ದಾರೆ. ಹೀಗಾಗಿ ಯಶ್ ಬಾಲಿವುಡ್ ಪ್ರವೇಶಕ್ಕೆ ಸಿದ್ಧತೆ ಮಾಡ್ಕೋತಿದ್ದಾರೆ ಎಂಬ ಸಂಗತಿ ಬಲಪಡೆದುಕೊಂಡಿದೆ.

ಡಬ್ಬು ರತ್ನಾನಿ ಸ್ವತಃ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಈ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಯಶ್ ಜೊತೆಗಿನ ಪೋಟೋವನ್ನು ಹಂಚಿಕೊಂಡಿರೋ ಡಬ್ಬು ರತ್ನಾನಿ, ಅಯ್ ಹ್ಯಾವ್ ಗಾಟ್ ಯುವರ್ ಬ್ಯಾಕ್ ಎಂದು ಟ್ಯಾಗ್ ಲೈನ್ ನೀಡಿದ್ದಾರೆ.

ಆದರೆ ಈ ಪೋಟೋಶೂಟ್ ಹಿಂದಿನ ಕಾರಣವೇನು ಎಂಬುದನ್ನು ಡಬ್ಬು ಶೇರ್ ಮಾಡಿಲ್ಲ. ಆದರೆ ಪೋಟೋಗಳು ಮಾತ್ರ ಕನ್ನಡದ ರಾಕಿಂಗ್ ಸ್ಟಾರ್ ಹೊಸ ಸಾಹಸಕ್ಕೆ ಸಾಕ್ಷಿ ಒದಗಿಸುವಂತಿವೆ. ಇದಕ್ಕೆ ಪೂರಕ ಎಂಬಂತೆ ಕೆಜಿಎಫ್ 2 ಸಿನಿಮಾ ಡಬ್ಬಿಂಗ್ ಮುಗಿದಿದ್ದರೂ ಯಶ್ ತಮ್ಮ ಮುಂದಿನ ಸಿನಿಮಾ ಯಾವುದು ಎಂಬ ಸಂಗತಿಯನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಹಿಂದಿಗೆ ಯಶ್ ಎಂಟ್ರಿಕೊಡೋದು ಗ್ಯಾರಂಟಿ ಎನ್ನಲಾಗ್ತಿದೆ.

ಇದನ್ನೂ ಓದಿ : KGF 2 : ಕೆಜಿಎಫ್‌ 2 ಬಿಡುಗಡೆ ಮುಹೂರ್ತ ಫಿಕ್ಸ್‌ : ಎಪ್ರಿಲ್‌ನಲ್ಲಿ ತೆರೆಗೆ ಬರುತ್ತೆ ಸಿನಿಮಾ

ಡಬ್ಬೂ ರತ್ನಾನಿ ಪ್ರತಿವರ್ಷ ಕ್ಯಾಲೆಂಡರ್ ಕೂಡ ರಿಲೀಸ್ ಮಾಡ್ತಾರೆ. ಅದಕ್ಕಾಗಿ ಯಶ್ ಪೋಟೋ ತೆಗೆದುಕೊ‌ಂಡಿರೋ ಸಾಧ್ಯತೆಯೂ ಇದೆ. ಈ ಹಿಂದೆ ನಟಿ ಸನ್ನಿ ಲಿಯೋನ್ ಸೇರಿದಂತೆ ಹಲವರು ಡಬ್ಬು ಕ್ಯಾಮರಾಗೆ ತಮ್ಮ ಮಾದಕ ಮೈಮಾಟ ತೋರಿದ್ದಾರೆ. ಆದರೆ ಡಬ್ಬು ರತ್ನಾನಿ ಕ್ಯಾಮರಾಗೆ ಪೋಸ್ ನೀಡಿದ ಮೊದಲ ಕನ್ನಡಿಗ ಖ್ಯಾತಿ ಯಶ್ ರದ್ದಾಗಿದೆ.

ಇದನ್ನೂ ಓದಿ :‌ ಕಲಾವಿದರ ಸಂಕಷ್ಟಕ್ಕೆ ‌ಮಿಡಿದ ರಾಕಿಂಗ್ ಸ್ಟಾರ್ : ಒಂದೂವರೆ ಕೋಟಿ ಫ್ಯಾಕೇಜ್ ಘೋಷಿಸಿದ ಯಶ್

ಇದನ್ನೂ ಓದಿ : ಭಾರತದ ಮೋಸ್ಟ್ ಡಿಸೈರೆಬಲ್ ಮೆನ್ ಪಟ್ಟಿಯಲ್ಲೂ ಯಶ್ ಗೆ ಸ್ಥಾನ…! ಟೈಮ್ಸ್ ಪ್ರಕಟಿಸಿದ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ ನೋಡಿ…!!

(Rocking Star Yash starring in Bollywood movie, Dabboo Ratnani post viral)

Comments are closed.