ನವದೆಹಲಿ : ಕೊರೊನಾ ಮಹಾಮಾರಿ ವಿಶ್ವವನ್ನೇ ನಡುಗಿಸುತ್ತಿದೆ. ಸಾವಿರಾರು ಮಂದಿ ಕೊರೊನಾಕ್ಕೆ ಬಲಿಯಾಗಿದ್ದು, ವಿಶ್ವದ ಆರ್ಥಿಕತೆ ನೆಲೆಕಚ್ಚುತ್ತಿದೆ. ಆದ್ರೆ ಇಂದು ವಿಶ್ವವನ್ನೇ ಬೆಚ್ಚಿ ಬೀಳಿಸಿರೋ ಕೊರೊನಾ ಬಗ್ಗೆ 475 ವರ್ಷಗಳ ಹಿಂದೆಯೇ ಕಾಲಜ್ಞಾನಿ ನಾಸ್ಟ್ರಡಾಮಸ್ ಭವಿಷ್ಯ ನುಡಿದಿದ್ದಾನೆ.

ಚೀನಾದಲ್ಲಿ ಹುಟ್ಟಿಕೊಂಡಿದ್ದ ಕೊರೊನಾ ಅನ್ನೋ ಡೆಡ್ಲಿ ವೈರಸ್ ಇಂದು ವಿಶ್ವದ 150ಕ್ಕೂ ಅಧಿಕ ನಗರಗಳಿಗೆ ವ್ಯಾಪಿಸಿದೆ. ಚೀನಾ ದೇಶವೊಂದರಲ್ಲೇ ಬರೋಬ್ಬರಿ 8,000ಕ್ಕೂ ಅಧಿಕ ಮಂದಿಯನ್ನ ಬಲಿಪಡೆದಿದ್ದ ಕೊರೊನಾ ಇಟಲಿ, ಇರಾನ್, ಗಲ್ಫ್ ರಾಷ್ಟ್ರಗಳು ಸೇರಿದಂತೆ ಭಾರತದಲ್ಲಿ ಮರಣ ಮೃದಂಗವನ್ನು ಬಾರಿಸುತ್ತಿದೆ.

ವಿಶ್ವದಾದ್ಯಂತ ಸುಮಾರು 2,04,000 ಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಕೊರೊನಾ ಹರಡುವಿಕೆಯಿಂದಾಗಿ ವಿಶ್ವದ ಬಹುತೇಕ ರಾಷ್ಟ್ರಗಳು ಸಂಪೂರ್ಣ ಬಂದ್ ಆಗಿದ್ದು, ಅಂತರಾಷ್ಟ್ರೀಯ ವಿಮಾನ ಸೇವೆಯನ್ನೇ ರದ್ದು ಮಾಡಿವೆ. ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆ ಕೂಡ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದೆ.

ದಿನೇ ದಿನೇ ಹೆಚ್ಚುತ್ತಿರೋ ಕೊರೊನಾ ಸೋಂಕು, ಜನರ ನಿದ್ದೆಗೆಡಿಸಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಭಾರತ, ಅಮೇರಿಕಾ, ಚೀನಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಔಷಧಿ ಕಂಡುಹಿಡಿಲು ಪ್ರಯತ್ನಿಸುತ್ತಿವೆ. ಆದರೆ ಕೊರೊನಾಕ್ಕೆ ಮದ್ದು ಸಿಗುತ್ತಿಲ್ಲ, ಇನ್ನೊಂದೆಡೆ ನಿರೀಕ್ಷಿತ ಮಟ್ಟದಲ್ಲಿ ಕೊರೊನಾ ನಿಯಂತ್ರಣಕ್ಕೂ ಬರುತ್ತಿಲ್ಲ. ಸಾಲದಕ್ಕೆ ಕೊರೊನಾ ಎಮರ್ಜೆನ್ಸಿಯಿಂದಾಗಿ ವಿಶ್ವದ ಬಹುತೇಕ ರಾಷ್ಟ್ರಗಳ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತವನ್ನೇ ನೀಡಿದೆ. ಆದ್ರಿಂದು ಕೊರೊನಾ ವೈರಸ್ ಸೃಷ್ಟಿಸುತ್ತಿರೋ ಆತಂಕದ ಬಗ್ಗೆ ಕಾಲಜ್ಞಾನಿ ನಾಸ್ಟ್ರ ಡಾಮಸ್ ಇಂದಿಗೆ ಸರಿ ಸುಮಾರು 475 ವರ್ಷಗಳ ಹಿಂದೆ ಅಂದ್ರೆ 1555ರಲ್ಲಿಯೇ ಕೊರೊನಾ ವೈರಸ್ ಬಗ್ಗೆ ಭವಿಷ್ಯ ನುಡಿದಿದ್ದಾನೆ.

2020ರಲ್ಲಿ ವಿಶ್ವದಲ್ಲಿ ಮಹಾಯುದ್ದ ಸಂಭವಿಸಲಿದೆ. ಈ ಯುದ್ದವು ಶಸ್ತ್ರಾಸ್ತ್ರಗಳನ್ನು ಕೂಡಿರುವುದಿಲ್ಲ. ಬದಲಾಗಿ ಕೊರೊನಾ ಅನ್ನೋ ವೈರಸ್ ವಿಶ್ವವನ್ನೇ ನಡುಗಿಸುವಂತೆ ಮಾಡಲಿದೆ. ಪಶ್ವಿಮ ರಾಷ್ಟ್ರ ಚೀನಾದಲ್ಲಿ ಹುಟ್ಟುವ ಕೊರೊನಾ ವೈರಸ್ 7 ಪವರ್ತಗಳ ನಾಡು ಇಟಲಿಗೂ ವ್ಯಾಪಿಸಲಿದ್ದು, ನಂತರ ವಿಶ್ವದಾದ್ಯಂತ ಕೊರೊನಾ ಹರಡಲಿದೆ, ಕೊರೊನಾದಿಂದಾಗಿ ವಿಶ್ವದ ಆರ್ಥಿಕತೆಯ ಮೇಲೆ ಗಂಭೀರವಾದ ಪರಿಣಾಮವನ್ನುಂಟು ಮಾಡಲಿದ್ದು, ಇದರಿಂದಾಗಿ ವಿಶ್ವದ ಆರ್ಥಿಕತೆ ಸಂಪೂರ್ಣವಾಗಿ ನೆಲಕಚ್ಚಲಿದೆ ಎಂದು ನಾಸ್ಟ್ರಡಾಮಸ್ ಹೇಳಿದ್ದಾರೆ.

2020ನೇ ಇಸವಿಯಲ್ಲಿಯೇ ಕೊರೊನಾ ಕಾಣಿಸಿಕೊಳ್ಳಲಿದ್ದು, ಇದೀಗ ಕೊರೊನಾ ಮಹಾಮಾರಿ ಕಂಡು ಬಂದಿರೋ ವುಹಾನ್ ನಗರದಲ್ಲಿಯೇ ಕೊರೊನಾ ಕಾಣಿಸಿಕೊಳ್ಳುತ್ತದೆ. ವಿಶ್ವದ ಹಲವು ಜನರನ್ನು ಕೊರೊನಾ ಬಲಿ ಪಡೆಯುತ್ತದೆ ಎಂದು ಹೇಳಿದ್ದ. ಆದ್ರೆ ನಾಸ್ಟ್ರೊ ಡಾಮಸ್ ಹೇಳಿದ ಭವಿಷ್ಯ ನಿಜವಾಗಿದೆ. ಮಹಾಮಾರಿ ಚೀನಾದ ವುಹಾನ್ ನಗರದಲ್ಲಿಯೇ ಮೊದಲ ಬಾರಿಗೆ ಕಂಡು ಬಂದಿದ್ದು, ನಂತರ ಇಟಲಿಗೂ ವ್ಯಾಪಿಸಿ, ವಿಶ್ವನ್ನೇ ನಡುಲಿಸಲಿದೆ ಅನ್ನೋದಾಗಿ ನಾಸ್ಟ್ರಡಾಮಸ್ ತಮ್ಮ ಪುಸ್ತಕದಲ್ಲಿ ಬರೆದಿಟ್ಟಿದ್ದಾನೆ ಅಂತಾ ಯುಕೆ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಇನ್ನು ಕೊರೊನಾ ಹೊಡೆತ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮವನ್ನು ಬೀರಿದ್ದು ವಿಶ್ವವನ್ನೇ ಕತ್ತಲೆಯಲ್ಲಿರಿಸಲಿದೆ. ಜಾಗತಿಕ ಆರ್ಥಿಕತೆಯ ಮೇಲೆ ದೊಡ್ಡ ಮಟ್ಟದ ಹೊಡೆತ ಬೀರಲಿದೆ ಇದೀಗ ನಾಸ್ಟ್ರಡಾಮಸ್ ಹೇಳಿದ ದಾರಿಯಲ್ಲಿಯೇ ನಡೆಯುತ್ತಿದೆ. ಕೊರೊನಾ ಅಟ್ಟಹಾಸಕ್ಕೆ ವಿಶ್ವವೇ ಬೆಚ್ಚಬಿದ್ದಿದೆ. ನಾಸ್ಟ್ರ ಡಾಮಸ್ ಹೇಳಿದ ಭವಿಷ್ಯ ನಿಜವಾಗಿದೆ. ಮಾತ್ರವಲ್ಲ ಮೂರನೇ ಮಹಾಯುದ್ದ ನಡೆಯಲಿದ್ದು, ಅದು ಶಸ್ತ್ರಾಸ್ತ್ರವಿಲ್ಲದ ಮಹಾಯುದ್ದ ನಡೆಯಲಿದೆ ಎಂದಿರುವುದು ಆತಂಕಕ್ಕೆ ಕಾರಣವಾಗಿದೆ.