ನಿತ್ಯಭವಿಷ್ಯ :19-03-2020

0

ಮೇಷರಾಶಿ
ವೈಯಕ್ತಿಕವಾಗಿ ಸಂಸಾರದಲ್ಲಿ ಸಾಮರಸ್ಯದ ಕೊರತೆ ಕಾಣಿಸಬಹುದು. ಮಕ್ಕಳಿಂದ ನೋವು-ಸಂಕಟ, ಉದ್ಯೋಗದಲ್ಲಿ ಒತ್ತಡ, ದೈವಾನುಗ್ರಹ ನಿಮಗೆ ಮುನ್ನಡೆಯನ್ನು ತರಲಿದೆ. ವಿಶೇಷವಾಗಿ ಮಕ್ಕಳ ಬಗ್ಗೆ ಗಮನವಿರಲಿ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಆತ್ಮ ಗೌರವಕ್ಕೆ ಧಕ್ಕೆ, ಹಿರಿಯರಿಂದ ಸಮಸ್ಯೆ ನಿವಾರಣೆ, ದೈವ ಶಾಪದ ಚಿಂತೆ, ಹಿರಿಯರಿಂದ ಬೈಗುಳ, ಮಾನಸಿಕ ವೇದನೆ.

ವೃಷಭರಾಶಿ
ಉದ್ಯೋಗದಲ್ಲಿ ಪ್ರಗತಿ, ಆಗಾಗ ಮಾನಸಿಕ ಒತ್ತಡ, ಉದಾಸೀನತೆ ಅನುಭವಕ್ಕೆ ಬರಲಿದೆ.ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಅನುಕೂಲ, ಅಧಿಕಾರಿಗಳು-ರಾಜಕೀಯ ವ್ಯಕ್ತಿಳಿಂದ ಪ್ರಶಂಸೆ, ಆರ್ಥಿಕವಾಗಿ ದಿನದಿಂದ ದಿನಕ್ಕೆ ಅಭಿವೃದ್ಧಿ ಅನುಭವಕ್ಕೆ ಬರುತ್ತದೆ. ಕಾರ್ಯಕ್ಷೇತ್ರದಲ್ಲಿ ಹೊಂದಾಣಿಕೆ ಅಗತ್ಯವಿದೆ. ಬಂಧುಗಳಿಂದ ಮಾನಸಿಕ ವೇದನೆ, ನೀರಿನ ವ್ಯತ್ಯಾಸದಿಂದ ಅನಾರೋಗ್ಯ, ಕಾರ್ಯಗಳಲ್ಲಿ ಜಯ, ಪ್ರಯಾಣದಲ್ಲಿ ಯಶಸ್ಸು.

ಮಿಥುನರಾಶಿ
ಉದ್ಯೋಗ ನಿಮಿತ್ತ ಆಕಸ್ಮಿಕ ಪ್ರಯಾಣ, ಅನಿರೀಕ್ಷಿತ ಬದಲಾವಣೆ, ತಲೆ, ಕಣ್ಣಿಗೆ ಪೆಟ್ಟಾಗುವ ಸಾಧ್ಯತೆ, ಗೌರವಕ್ಕೆ ಧಕೆ, ಪ್ರಯತ್ನಬಲದಿಂದಲೇ ಮುಂದುವರಿಸಿದಲ್ಲಿ ನಿಮ್ಮ ಪ್ರಯತ್ನಬಲಕ್ಕೆ ಯಶಸ್ಸು ನಿಶ್ಚಿತವೆನ್ನಬಹುದು. ವಿದ್ಯಾರ್ಥಿಗಳು ಉತ್ತಮ ಫ‌ಲವನ್ನು ಪಡೆಯಲಿದ್ದಾರೆ. ಉದ್ಯೋಗದಲ್ಲಿ ಒತ್ತಡ, ನೆರೆಹೊರೆಯವರಿಂದ ತೊಂದರೆ, ತಂದೆಯಿಂದ ಸಹಕಾರ, ಸ್ಥಿರಾಸ್ತಿ ವಿಚಾರದಲ್ಲಿ ಗೆಲುವು, ಅಶುಭ ಸುದ್ದಿ ಕೇಳುವಿರಿ.

ಕಟಕರಾಶಿ
ಮನೆಯವರೊಂದಿಗೆ ಹೊಂದಾಣಿಕೆ ಅಗತ್ಯವಿದೆ. ಪಾಲುದಾರಿಕೆಯಲ್ಲಿ ಯಶಸ್ಸು, ಪಿತ್ತ,ಗ್ಯಾಸ್ಟ್ರಿಕ್, ಉಷ್ಣ ಬಾಧೆ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ನೀವಾಡುವ ಮಾತಿನಿಂದ ಕಲಹ, ಪ್ರಯಾಣದಿಂದ ಅನುಕೂಲ, ಸಂಗಾತಿಯಿಂದ ಧನಾಗಮನ, ಕಾರ್ಯರಂಗದಲ್ಲಿ ವಾದ, ವಿವಾದಗಳು ಕಂಡು ಬಂದಾವು ಜಾಗ್ರತೆ ಇರಲಿ. ಚಿಂತಿತ ಕೆಲಸಗಳಲ್ಲಿ ಪ್ರಯತ್ನ ಬಲವಿರಲಿ. ಆತ್ಮಸಾಕ್ಷಿಗೆ ವಿರುದ್ಧ ನಡೆಯುವಿರಿ, ಕೌಟುಂಬಿಕ ಕಿರಿಕಿರಿಯಿಂದ ವೇದನೆ.

ಸಿಂಹರಾಶಿ
ಸ್ವಯಂಕೃತ ಅಪರಾಧದಿಂದ ನಷ್ಟ, ಸೋಮಾರಿತನ, ಆಲಸ್ಯ, ಜಿಗುಪ್ಸೆ, ಸಾಲ, ಶತ್ರುಗಳ ಬಾಧೆ, ಅವಿವಾಹಿತರಿಗೆ ವಿವಾಹ ಭಾಗ್ಯವಿದೆ. ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಅದೃಷ್ಟಬಲ ಒದಗಿ ಬರುತ್ತದೆ. ಮನೆಯಲ್ಲಿ ಶುಭಮಂಗಲ ಕಾರ್ಯ ನಡೆಯಲಿದೆ. ಕೆಲಸಗಾರರಿಂದ ತೊಂದರೆ, ದುಷ್ಟ ಆಲೋಚನೆ, ವೈವಾಹಿಕ ಜೀವನದಲ್ಲಿ ಏರುಪೇರು, ವ್ಯಾಪಾರ ವ್ಯವಹಾರದಲ್ಲಿ ತೊಂದರೆ, ಆರ್ಥಿಕ ವ್ಯವಹಾರದಲ್ಲಿ ತಪ್ಪು ನಿರ್ಧಾರ.

ಕನ್ಯಾರಾಶಿ
ಸಾಂಸಾರಿಕವಾಗಿ ದೂರವಿರುವ ಸಂದರ್ಭ ಬರುವುದು. ದೂರ ಸಂಚಾರದಲ್ಲಿ ಅಪಘಾತ ಭೀತಿ ತಂದೀತು. ಪಾಲುದಾರಿಕೆಯಲ್ಲಿ ಸಮಸ್ಯೆ, ಋಣ, ರೋಗ ಬಾಧೆಗಾಗಿ ಖರ್ಚು, ಮಕ್ಕಳ ನಡವಳಿಕೆಯಿಂದ ಬೇಸರ, ಅಶುಭ ಸುದ್ದಿ ಕೇಳುವಿರಿ, ಹಿರಿಯರ ಆರೋಗ್ಯಭಾಗ್ಯವು ಸುಧಾರಿಸಲಿದೆ. ಗುರುಬಲದ ಕಾರಣ ಗ್ರಹಿಸಿದ ಕೆಲಸಕಾರ್ಯಗಳು ನಡೆಯಲಾರವು. ಭಾವನೆಗಳಿಗೆ ಪೆಟ್ಟು, ಸಂತಾನ ದೋಷ, ಉನ್ನತ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗದಲ್ಲಿ ಅಡೆತಡೆ ಬೇಸರ.

ತುಲಾರಾಶಿ
ಉದ್ಯೋಗದಲ್ಲಿ ಬಡ್ತಿ, ಶತ್ರುಗಳ ದಮನ, ಮೇಲಾಧಿಕಾರಿಗಳಿಂದ ಸಹಕಾರ, ದೈವ ನಿಂದನೆ, ತೀರ್ಥಕ್ಷೇತ್ರಗಳಿಗೆ ಭೇಟಿ, ಸ್ಥಿರಾಸ್ತಿ-ವಾಹನ ಅನುಕೂಲ.ಮಕ್ಕಳು-ವಯೋವೃದ್ಧರಿಂದ ಲಾಭ, ಬಂಧುಮಿತ್ರರ ಸಹಕಾರದಿಂದ ವ್ಯಾಪಾರ, ವ್ಯವಹಾರಗಳು ಕುದುರಲಿವೆ. ನೌಕರ ವರ್ಗಕ್ಕೆ ಬದಲಾವಣೆ ಮುಂಭಡ್ತಿ ಪ್ರಾಪ್ತಿಯಿಂದ ಸಂತಸವಾದೀತು. ಮಹಿಳೆಯರಿಗೆ ಪಿತ್ತ ಪ್ರಕೋಪದಿಂದ ಆಗಾಗ ಅನಾರೋಗ್ಯ ಕಾಡಲಿದೆ. ಬಾಡಿಗೆದಾರ-ಸಾಲಗಾರರಿಂದ ನೋವು, ಕಾರ್ಮಿಕರಿಂದ ಸಹಕಾರ, ಮಿತ್ರರಿಂದ ಗೌರವಕ್ಕೆ ಧಕ್ಕೆ,

ವೃಶ್ಚಿಕರಾಶಿ
ಕೋರ್ಟ್ ಕೇಸ್‍ಗಳಿಂದ ಮುಕ್ತಿ, ಉತ್ತಮ ಹೆಸರು ಗಳಿಸುವಿರಿ, ಉನ್ನತ ಅಧಿಕಾರಿ-ರಾಜಕೀಯ ವ್ಯಕ್ತಿಗಳ ಭೇಟಿ. ಶನಿಯ ಲಾಭ ಸ್ಥಾನದಿಂದ ತಾಂತ್ರಿಕ ಶಿಕ್ಷಣ, ವೈದ್ಯಕೀಯ ವಿಭಾಗಕ್ಕೆ ಉನ್ನತ ಅಭಿವೃದ್ಧಿಯು ಕಂಡು ಬರುವುದು. ಚಿನ್ನ, ಬೆಳ್ಳಿ ವರ್ತಕರು ತಮ್ಮ ವ್ಯವಹಾರದಲ್ಲಿ ವಿಶೇಷ ಲಾಭವನ್ನು ಪಡೆಯಲಿದ್ದಾರೆ. ಆರೋಗ್ಯದಲ್ಲಿ ಜಾಗ್ರತೆ. ಉದ್ಯೋಗ ಬದಲಾವಣೆಯ ಚಿಂತೆ, ಸರ್ಕಾರಿ ಕೆಲಸದಲ್ಲಿ ಜಯ, ಮಕ್ಕಳಿಂದ ಯೋಗ ಫಲ, ಉದ್ಯೋಗದಲ್ಲಿ ಪ್ರಗತಿ,

ಧನಸ್ಸುರಾಶಿ
ಧನಾದಾಯವಿದ್ದರೂ ಖರ್ಚನ್ನು ಹಿಡಿತದಲ್ಲಿಟ್ಟುಕೊಳ್ಳಿರಿ. ಸಾಂಸಾರಿಕವಾಗಿ ಬಂಧುಬಳಗ ದವರ ಸಹಕಾರವು ಮನಸ್ಸಿಗೆ ಶಾಂತಿ, ನೆಮ್ಮದಿ ಕೊಡಲಿದೆ. ತಂದೆಯಿಂದ ಧನಾಗಮನ ಸಹಕಾರ, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ಶತ್ರುಗಳೇ ಮಿತ್ರರಾಗುವರು, ಅಧಿಕ ಶ್ರಮದಿಂದ ಕಾರ್ಯ ಜಯ, ಪ್ರಯಾಣದಲ್ಲಿ ಅಡೆತಡೆಯಾದ್ರೂ ಅನುಕೂಲ, ಅತೀ ಒಳ್ಳೆತನದಿಂದ ಸಂಕಷ್ಟ, ಮಕ್ಕಳಿಂದ ಯೋಗ ಫಲ. ಚಿಂತಿತ ಕೆಲಸಕಾರ್ಯಗಳು ವಿಳಂಬಗತಿಯಲ್ಲಿ ನಡೆಯಲಿವೆ.

ಮಕರರಾಶಿ
ಧನಾಗಮನ, ಪ್ರಯಾಣ, ಆಯುಷ್ಯಕ್ಕೆ ಕಂಟಕದ ಆತಂಕ, ಅಧಿಕ ಒತ್ತಡ, ಕಾರ್ಯದಲ್ಲಿ ವಿಘ್ನ, ನೆರೆಹೊರೆಯವರಿಂದ ವೈಮನಸ್ಸು, ಮನೋನಿಶ್ಚಿತ ಕೆಲಸಗಳು ಶ್ರೀದೇವತಾ ದಯದಿಂದ ನೆರವೇರಲಿವೆ. ಪದೇ ಪದೆ ಸಂಚಾರ ಗಳು ದೇಹಾರೋಗ್ಯದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆ ವಹಿಸಿರಿ. ಮಾನಸಿಕ ಒತ್ತಡವಿದ್ದರೂ ಶಾಂತಿ, ಸಮಾಧಾನದಿಂದ ಇರಿ. ಅಂತರ ಕಾಯ್ದುಕೊಳ್ಳುವಿರಿ, ಗೃಹ ಬದಲಾವಣೆಯಿಂದ ಸಮಸ್ಯೆ, ಸಂಬಂಧಿಕರೊಂದಿಗೆ ಕಲಹ. ಅಪಘಾತ ಭಯ.

ಕುಂಭರಾಶಿ
ಸಂಗಾತಿಯಿಂದ ಧನಾಗಮನ, ಪಾಲುದಾರಿಕೆಯಲ್ಲಿ ಅನುಕೂಲ, ಕಾಲು ನೋವು, ಜೀವನದಲ್ಲಿ ವ್ಯತ್ಯಾಸ, ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗಭಾಗ್ಯ ದೊರಕಲಿದೆ. ಹಿತಶತ್ರುಗಳಿಂದ ಆಗಾಗ ನಿಮಗೆ ಸಮಸ್ಯೆಗಳು ತೋರಿಬಂದಾವು. ಸಾಂಸಾರಿಕವಾಗಿ ಧರ್ಮ ಪತ್ನಿಯ ಪ್ರೀತಿ, ವಿಶ್ವಾಸ, ಸಹಕಾರ ಮುನ್ನಡೆಸೀತು. ಮಗಳ ಆರೋಗ್ಯದಲ್ಲಿ ವ್ಯತ್ಯಾಸ, ಒರಟು ಮಾತುಗಳು ಕೇಳುವಿರಿ.

ಮೀನರಾಶಿ
ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ಭಾಗ್ಯವಿದೆ. ದಿನಾಂತ್ಯ ಶುಭವಿದೆ. ನೌಕರ ವರ್ಗಕ್ಕೆ ಮುಂಭಡ್ತಿಗೆ ತಡೆ ತಂದೀತು. ಗೃಹ ಕೃತ್ಯಗಳಲ್ಲಿ ಅಡಚಣೆಗಳಿರುತ್ತವೆ. ಅನಾರೋಗ್ಯದಿಂದ ಶರೀರಭಾಗ್ಯ ಕ್ಷೀಣಿಸಲಿದೆ. ಅಹಂಭಾವದಿಂದ ಶತ್ರುತ್ವ ಹೆಚ್ಚಾಗುವುದು, ಸಾಲ ಲಭಿಸುವುದು, ಬಾಡಿಗೆದಾರರಿಂದ ಸಮಸ್ಯೆ, ಸೇವಾ ಉದ್ಯೋಗ ಲಾಭ, ಹಳೇ ಮಿತ್ರರ ಭೇಟಿ, ಹಿರಿಯರಿಂದ ಯೋಗ ಫಲ, ಆತ್ಮ ಗೌರವಕ್ಕೆ ಧಕ್ಕೆ, ಇಲ್ಲ ಸಲ್ಲದ ಅಪವಾದ, ಕಣ್ಣು ಉರಿ, ದೀರ್ಘ ಕಾಲದ ಅನಾರೋಗ್ಯ.

Leave A Reply

Your email address will not be published.