ಸೋಮವಾರ, ಏಪ್ರಿಲ್ 28, 2025
HomeCinemaDarshan Thoogudeepa : ಕೊಲ್ಲೂರಿನಲ್ಲಿ ನವಚಂಡಿಕಾಯಾಗ ನೆರವೇರಿಸಿದ ನಟ ದರ್ಶನ್‌

Darshan Thoogudeepa : ಕೊಲ್ಲೂರಿನಲ್ಲಿ ನವಚಂಡಿಕಾಯಾಗ ನೆರವೇರಿಸಿದ ನಟ ದರ್ಶನ್‌

- Advertisement -

ಕುಂದಾಪುರ : ರಾಜ್ಯದ ಪ್ರಮುಖ ಪುಣ್ಯಕ್ಷೇತ್ರವಾಗಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ( Actor Darshan Thoogudeepa visited Kollur Mookambika Temple) ಭೇಟಿ ನೀಡಿ, ದೇವಿಯ ದರ್ಶನ ಪಡೆದಿದ್ದಾರೆ. ದೇವಸ್ಥಾನದಲ್ಲಿ ನವ ಚಂಡಿಕಾಯಾಗದಲ್ಲಿ ಭಾಗಿಯಾಗಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ನಟ ದರ್ಶನ್‌ ಅವರು ಸ್ನೇಹಿತ ಚಿಕ್ಕಣ್ಣ ಜೊತೆಗೆ ಭೇಟಿ ನೀಡಿದ್ದರು. ನವಚಂಡಿಕಾ ಯಾಗವನ್ನು ನೆರವೇರಿಸಿದ ದರ್ಶನ್‌ ದೇವಿಯ ದರ್ಶನ ಪಡೆದಿದ್ದಾರೆ. ದೇವಸ್ಥಾನದ ವತಿಯಿಂದ ನಟ ದರ್ಶನ್‌ ಹಾಗೂ ಚಿಕ್ಕಣ್ಣ ಅವರನ್ನು ಅಭಿನಂದಿಸಲಾಯಿತು. ನಟ ದರ್ಶನ್‌ ಕ್ರಾಂತಿ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ ಬಿಡುವು ಮಾಡಿಕೊಂಡು ದರ್ಶನ್‌ ಕೊಲ್ಲೂರು ದೇವಸ್ಥಾನಕ್ಕೆ ಭೇಟಿಯನ್ನು ನೀಡಿದ್ದಾರೆ. ಆಗಾಗ ಕರಾವಳಿ ಭಾಗದ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮಂಗಳೂರಿನ ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ನೀಡಿದ್ದರು.

“ಕ್ರಾಂತಿ” ಮೊಳಗಿಸೋಕೆ ರೆಡಿಯಾದ್ರು ನಟ ದರ್ಶನ್‌

ಡಿ ಬಾಸ್‌ ದರ್ಶನ್ ಸದ್ಯ ಕ್ರಾಂತಿ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ದರ್ಶನ್‌ ಅಭಿನಯಿಸುತ್ತಿರುವ 55ನೇ ಸಿನಿಮಾ ಇದಾಗಿದ್ದು, ಸಿನಿಮಾಕ್ಕೆ ‘ಕ್ರಾಂತಿ’ ಎಂದು ಹೆಸರಿಡಲಾಗಿದೆ. ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದ್ದು, ಐದೂ ಭಾಷೆಗಳಲ್ಲಿ ಸಿನಿಮಾದ ಹೆಸರುಳ್ಳ ಪೋಸ್ಟರ್‌ ಅನ್ನುಬಿಡುಗಡೆ ಮಾಡಲಾಗಿದೆ. ಕ್ರಾಂತಿ ಸಿನಿಮಾದ ಪೋಸ್ಟರ್‌ನಲ್ಲಿ ದರ್ಶನ್‌ರ ಆಂಗ್ರಿ ಲುಕ್‌ನ ಚಿತ್ರ ಗಮನ ಸೆಳೆಯುತ್ತಿದೆ. ಜೊತೆಗೆ ಕಾರೊಂದು ವೇಗವಾಗಿ ಹೋಗುತ್ತಿರುವ ಚಿತ್ರವೂ ಇದೆ. ವಿಮಾನ, ಹೆಲಿಕಾಪ್ಟರ್‌ಗಳ ಚಿತ್ರವೂ ಇದೆ. ಪೋಸ್ಟರ್‌ ನೋಡಿದರೆ ಇದೊಂದು ಪಕ್ಕಾ ಆಕ್ಷನ್ ಸಿನಿಮಾ ಎಂಬುದು ಅರಿವಾಗುತ್ತದೆ.

ದರ್ಶನ್ ಅಭಿನಯಿಸುತ್ತಿರುವ ‘ಕ್ರಾಂತಿ’ ಸಿನಿಮಾವನ್ನು ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದು, ಶೈಲಜಾ ನಾಗ್ ಮತ್ತು ಬಿ ಸುರೇಶ್ ನಿರ್ಮಾಣ ಮಾಡುತ್ತಿದ್ದಾರೆ. ದರ್ಶನ್ ನಟಿಸಿದ್ದ ‘ಯಜಮಾನ’ ಚಿತ್ರವನ್ನೂ ಸಹ ಇದೇ ತಂಡ ನಿರ್ಮಾಣ ಮಾಡಿತ್ತು. ವಿ.ಹರಿಕೃಷ್ಣಗೆ ನಿರ್ದೇಶಕರಾಗಿ ಇದು ಎರಡನೇ ಸಿನಿಮಾ. ಸಂಗೀತ ನಿರ್ದೇಶನವನ್ನೂ ಅವರೇ ಮಾಡಲಿದ್ದಾರೆ.

Actor Darshan Thoogudeepa and chikkanna visited Kollur Mookambika Temple
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಟ ದರ್ಶನ್‌

ದರ್ಶನ್ ಕೊನೆಯದಾಗಿ ರಾಬರ್ಟ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸಾಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು ರಾಬರ್ಟ್ ಸಿನಿಮಾ. . ಈ ಸಿನಿಮಾ ಬಳಿಕ ದರ್ಶನ್ ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಾರೆ ಎನ್ನುವ ಕುತೂಹಲ ಹೆಚ್ಚಾಗಿತ್ತು. ಇದೀಗ ಕುತೂಹಲಕ್ಕೆ ತೆರೆಬಿದ್ದಿದ್ದು, ಈ ಹಿಂದೆ ಹಿಟ್ ಸಿನಿಮಾ ನೀಡಿದ್ದ ತಂಡದೊಂದಿಗೆ ದರ್ಶನ್ ಮತ್ತೆ ಕೈಜೋಡಿಸಿದ್ದಾರೆ.

ಇದನ್ನೂ ಓದಿ : Darshan Thoogudeepa viral photos : ಹುಡುಗಿ ಜೊತೆ ವೈರಲ್ ಆಯ್ತು ದರ್ಶನ್ ಪೋಟೋ : ಏನಿದರ ಅಸಲಿಯತ್ತು ಗೊತ್ತಾ?!

ಇದನ್ನೂ ಓದಿ : Nia Sharma : ಬಾಯ್ ಪ್ರೆಂಡ್ ಕೈಕೊಟ್ಟಿದ್ದಕ್ಕೆ ನಾನು ಕಡಿಮೆ ಬಟ್ಟೆ ಹಾಕೋದು: ಬಾಲಿವುಡ್ ನಟಿಯ ಬೋಲ್ಡ್ ಆನ್ಸರ್

( Actor Darshan Thoogudeepa and chikkanna visited Kollur Mookambika Temple)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular