Volvo Bus Fare Reduced : ನಷ್ಟದ ಹೊರೆ ತಪ್ಪಿಸಲು ಬಿಎಂಟಿಸಿ ಸರ್ಕಸ್ : ಇಳಿಕೆಯಾಗಲಿದೆ ವೋಲ್ವೋ ಪ್ರಯಾಣ ದರ

ಬೆಂಗಳೂರು : ಕೊರೊನಾ ಮೂರನೇ ಅಲೆಯ ಭೀತಿಯ ನಡುವೆ ಬಿಎಂಟಿಸಿ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಜನರು ಮಾತ್ರ ಬಸ್ ಏರೋದಿಕ್ಕೆ ಇನ್ನೂ ಹಿಂದೆ ಮುಂದೇ ಯೋಚ್ನೇ ಮಾಡ್ತಿದ್ದಾರೆ. ಹೀಗಾಗಿ ಬಿಎಂಟಿಸಿ ಭಾರಿ ನಷ್ಟದ ಭೀತಿಯಲ್ಲಿದೆ. ನಷ್ಟದ ಪ್ರಮಾಣ ತಪ್ಪಿಸಲು ಈಗ ಬೆಲೆ ಇಳಿಕೆಯ (BMTC Volvo Bus Fare Reduced) ಅಸ್ತ್ರ ಹಿಡಿಯಲು ಮುಂದಾಗಿದ್ದು, ಬಿಎಂಟಿಸಿಯ ಬಿಳಿಯಾನೆ ಎಂದು ಕರೆಸಿಕೊಳ್ಳುವ ವೋಲ್ವೋ ಬಸ್ ಗಳ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ.

ಒಂದು ಕಾಲದಲ್ಲಿ ಐಟಿಬಿಟಿ ಮಂದಿಯನ್ನು ಗಮನದಲ್ಲಿಟ್ಟುಕೊಂಡು ಬಿಎಂಟಿಸಿ ರಸ್ತೆಗಿಳಿಸಿದ ಬಸ್ ಗಳೇ ಈ ವೊಲ್ವೋ ಬಸ್. ಹವಾನಿಯಂತ್ರಿತ ಈ ಬಸ್ ದರ ಕೇವಲ ಐಟಿ ಮಂದಿಗಷ್ಟೇ ಸರಿ ಹೊಂದುವಂತಿತ್ತು. ಹೀಗಾಗಿ ಜನಸಾಮಾನ್ಯರು ಈ ಬಸ್ ನತ್ತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಈ ಮಧ್ಯೆ ಒಕ್ಕರಿಸಿದ ಕರೋನಾದಿಂದ ಐಟಿ ಬಿಟಿ ಮಂದಿ ಮನೆ ಸೇರಿದ್ದಾರೆ. ಹೀಗಾಗಿ ವೋಲ್ವೋ ಬಸ್ ಗಳು ಬಿಎಂಟಿಸಿ ಡಿಪೋ ಸೇರಿದೆ.

ಒಮ್ಮೆ ಸಂಚಾರ ನಿಲ್ಲಿಸಿ ಡಿಪೋ ಸೇರಿದ ವೋಲ್ವೋ ಬಸ್ ಗಳನ್ನು ಮತ್ತೆ ಸಹಜ ಸ್ಥಿತಿಗೆ ತಂದು ಓಡಾಟ ಆರಂಭಿಸುವಂತೆ ಮಾಡಲು ಅನಗತ್ಯವಾಗಿ ವೆಚ್ಚವಾಗುತ್ತದೆ. ಹೀಗಾಗಿ ಬಿಎಂಟಿಸಿ ನೋಪ್ರಾಫಿಟ್ ನೋ ಲಾಸ್ ನಲ್ಲಿ ವೋಲ್ವೋ ಬಸ್ ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ. ಡಿಪೋದಲ್ಲಿ ಸುಮ್ಮನೇ ನಿಂತು ಬಸ್ ಗಳು ಗುಜರಿ ಸೇರೋ ಬದಲು ದರ ಕಡಿತ ಮಾಡಿಸಿ ಬಸ್ ರಸ್ತೆಗಿಳಿಸೋದು ಬಿಎಂಟಿಸಿ ಪ್ಲ್ಯಾನ್. ಇದಕ್ಕಾಗಿ ಈ ಕೆಳಗಿನಂತೆ ಬಿಎಂಟಿಸಿ ದರ ಇಳಿಕೆ ಪ್ಲ್ಯಾನ್ ಮಾಡಿದೆ. 2 ಕಿ.ಮೀ. ಗೆ 9 ರೂಪಾಯಿ ಇರಲಿದೆ. 4 ಕಿಲೋಮೀಟರ್ ಗೆ  15ರೂನಿಂದ 11 ಕ್ಕೆ ಇಳಿಸಲು ಬಿಎಂಟಿಸಿ ನಿರ್ಧರಿಸಿದೆ.

ಕಿಲೋ ಮೀಟರ್‌ ಪ್ರಸ್ತುತ ದರ ಇಳಿಕೆಯಾಗಲಿರುವ ದರ

06ಕಿಮೀ.       20 ರೂ     16ರೂ
10 ಕಿಮೀ.     35ರೂ     26ರೂ
20 ಕಿಮೀ     55ರೂ    42ರೂ
28ಕಿಮೀ.     65ರೂ     47ರೂ
34ಕಿಮೀ.       70ರೂ   51ರೂ
50ಕಿಮೀ.       90ರೂ     70ರೂ

ಕಳೆದ ಡಿಸೆಂಬರ್ ತಿಂಗಳನಿಲ್ಲಿ ಒಮ್ಮೆ ವೋಲ್ವೋ ದರ ಕಡಿತಮಾಡಿದ್ದ ಬಿಎಂಟಿಸಿ, ಈಗ ಮತ್ತೊಮ್ಮೆ ಆ ಪ್ರಯೋಗಕ್ಕೆ ಮುಂದಾಗಿದೆ. ಸದ್ಯ ಪರಿಷತ್ ಚುನಾವಣೆಯ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಹೊಸ ದರ ಜಾರಿಗೆ ಬರೋ ಸಾಧ್ಯತೆ ಇದೆ. ಸದ್ಯ ಬಿಎಂಟಿಸಿ ಬಳಿಯಲ್ಲಿ ಒಟ್ಟು 830 ವೋಲ್ವೋ ಬಸ್ಗಳಿವೆ. ಇವುಗಳ ಪೈಕಿ ಏರ್ಪೋರ್ಟ್, ಐಟಿಪಿಎಲ್ ಎಲೆಕ್ಟ್ರಾನಿಕ್ ಸಿಟಿ ಭಾಗಗಳಿಗೆ ಕೇವಲ 170 ಬಸ್ ಗಳು ಮಾತ್ರ ನಿತ್ಯ ಕಾರ್ಯಾಚರಣೆ ಮಾಡುತ್ತಿದೆ.

ಇದನ್ನೂ ಓದಿ : Dog No entry Cubbon Park : ನಾಯಿಗಳು ಕಬ್ಬನ್ ಪಾರ್ಕ್ ಗೆ ಬಂದ್ರೇ ಬಿಬಿಎಂಪಿ ಅಧಿಕಾರಿಗಳ ತಲೆದಂಡ: ಹೈಕೋರ್ಟ್

ಇದನ್ನೂ ಓದಿ : BBMP Covid Bed Tariffs : ಖಾಸಗಿ ಆಸ್ಪತ್ರೆಗಳ ಕೊರೊನಾ ಸುಲಿಗೆಗೆ ಬಿತ್ತು ಬ್ರೇಕ್: ಬಿಬಿಎಂಪಿ ಖಡಕ್ ರೂಲ್ಸ್

Good News BMTC Volvo bus fare reduced

Comments are closed.