ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಒಂದಿಲ್ಲೊಂದು ಆಕರ್ಷಕ, ಮನಸ್ಸಿಗೆ ಮುದ ನೀಡುವ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅಂದಹಾಗೆ ವಿಡಿಯೋ ಆಫ್ ದಿ ಡೇ ಸರದಿ ತಮಿಳುನಾಡಿನ ಪೆರಂಬಲೂರು ಬಳಿಯ ಕನ್ನಂನ 38 ವರ್ಷದ ವ್ಯಕ್ತಿ. ಅವರು ಫೇಮಸ್ ಆಗಿದ್ದು ಸಹ ಅಷ್ಟೇ ವೈರಲ್ ಆಗಬಹುದಾದ ವಿಷಯಕ್ಕೆ. ವೃತ್ತಿಯಲ್ಲಿ ಕಾರ್ ಡ್ರೈವರ್ ಆಗಿರುವ ಎಂ.ಪ್ರಭು ಅವರು ಪ್ರಜ್ಷೆತಪ್ಪಿ ಬಿದ್ದಿದ್ದ ಮಂಗನ ಮರಿಯೊಂದಕ್ಕೆ ಪ್ರಥಮ ಚಿಕಿತ್ಸೆ ನೀಡಿರುವ ವಿಡಿಯೋವೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ (Monkey Viral Video) ಸೃಷ್ಟಿಸಿದೆ.
ಮಣ್ಣು ಕಲ್ಲುಗಳಿಂದ ಕೂಡಿರುವ ರಸ್ತೆಯೊಂದರಲಲ್ಲಿ ಕೋತಿಯ ಮರಿಯೊಂದು ಪ್ರಜ್ಷೆತಪ್ಪಿ ಬಿದ್ದಿದೆ. ಇದನ್ನು ಕಂಡ ಕಾರ್ ಚಾಲಕ ಎಂ.ಪ್ರಭು ತಕ್ಷಣವೇ ಏನಾದರೂ ಮಾಡಬೇಕಲ್ಲ ಎಂದು ಯೋಚಿಸಿದ್ದಾರೆ. ಅವರ ಮಾನವೀಯ ಹೃದಯಕ್ಕೆ ಕೋತಿಯ ಮರಿಯನ್ನು ಉಳಿಸಬೇಕು ಎಂದು ಮಿಡಿದಿದೆ. ಮನುಷ್ಯರು ಪ್ರಜ್ಞೆ ತಪ್ಪಿ ಬಿದ್ದಾಗ ಹೇಗೆ ಬಾಯಿಗೆ ಗಾಳಿ ಊದಿ ಎಚ್ಚರಿಸಲು ಪ್ರಯತ್ನಿಸುತ್ತಾರೋ ಅದೇ ರೀತಿ ಎಂ.ಪ್ರಭು ಅವರು ಸಹ ಕೋತಿ ಮರಿಯ ಬಾಯಲ್ಲಿ ಗಾಳಿ ಊದಿದ್ದಾರೆ. ಉಸಿರು ನೀಡಿದ್ದಾರೆ. ಕೋತಿ ಮರಿಯ ಎದೆಯನ್ನು ಒತ್ತುತ್ತಾ ಕೋತಿ ಮರಿಗೆ ಪ್ರಜ್ಞೆ ಮರುಕಳಿಸುವ ಪ್ರಯತ್ನ ನಡೆಸಿದ್ದಾರೆ.
There are people who still value every little life on this earth. Here Mr.Prabhu uses the first aid techniques he learned years back to resuscitate a 8 month old macaque which was attacked by a group of dogs
— Sudha Ramen 🇮🇳 (@SudhaRamenIFS) December 13, 2021
His swift action has saved the life of this little fella. @Thiruselvamts pic.twitter.com/bTHhIy5Km9
ಕೆಲವು ಕೋತಿಗಳು ಮರಿಕೋತಿಯನ್ನು ಅಟ್ಟಿಸಿಕೊಂಡು ಬಂದು ಹಲ್ಲೆ ನಡೆಸಿದ್ದವು. ಇದರಿಂದ ಕೋತಿ ಮರಿ ಘಾಸಿಗೊಳಗಾಗಿತ್ತು. ಇದನ್ನು ಕಂಡ ಎಂ.ಪ್ರಭು ಅವರು ತಕ್ಷಣವೇ ಕೋತಿಮರಿಗೆ ನೀರು ಕುಡಿಸಲು ಯತ್ನಿಸಿದ್ದಾರೆ. ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಕೋತಿಮರಿ ದಾರಿಮಧ್ಯೆಯೇ ಪ್ರಜ್ಞೆ ಕಳೆದುಕೊಂಡಿದೆ. ಇದನ್ನು ಅರಿತ ಎಂ.ಪ್ರಭು ತಕ್ಷಣವೇ ವಾಹನ ನಿಲ್ಲಿಸಿ ಕೋತಿಮರಿಯನ್ನು ಉಳಿಸಲು ಪ್ರಯತ್ನ ನಡೆಸಿದ್ದಾರೆ.
— Suriya Sivakumar (@Suriya_offl) December 13, 2021
ಆನಂತರ ಪಶು ಚಿಕಿತ್ಸಾಲಯಕ್ಕೆ ಕೋತಿಮರಿಯನ್ನು ಒಯ್ದು ಚಿಕಿತ್ಸೆ ನೀಡಿದ್ದಾಗಿ ಎಂ.ಪ್ರಭು ತಿಳಿಸಿದ್ದಾರೆ. ಅಂದಹಾಗೆ ಎಂ.ಪ್ರಭು ಅವರು 2000ನೇ ಇಸ್ವಿಯಲ್ಲಿ ತಂಜಾವೂರಿನಲ್ಲಿ ಪ್ರಥಮ ಚಿಕಿತ್ಸೆ ತರಬೇತಿ ಪಡೆದಿದ್ದರು. ಇದರಿಂದ ಕೋತಿಮರಿಯನ್ನು ಉಳಿಸಲು ಸಹಾಯವಾಯಿತು. ಒಂದಾನುವೇಳೆ ಕೋತಿಗೆ ರೇಬಿಸ್ ಸೋಂಕಿದ್ದರೆ ಕೋತಿಯ ಬಾಯಿಗೆ ಬಾಯಿ ಕೊಟ್ಟು ಗಾಳಿ ಊದಿದಕ್ಕಾಗಿ ಎಂ.ಪ್ರಭು ಅವರ ಆರೊಗ್ಯವನ್ನು ಪರಿಶೀಲಿಸಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: Google Search Tricks : ಗೂಗಲ್ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು
(Monkey Viral Video : Tamil Nadu man saves wounded monkey with injuries)