Student Committed Suicide : ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಐದನೇ ತರಗತಿ ಬಾಲಕಿ: ಕ್ರೈಮ್​ ಪೆಟ್ರೋಲ್​ನಿಂದ ಸಿಕ್ಕಿತ್ತು ಸ್ಪೂರ್ತಿ

ಮನರಂಜನೆಗೆಂದು ನೋಡುವ ಟಿವಿಯಲ್ಲಿ ಬರುವ ಕಾರ್ಯಕ್ರಮಗಳು ನಮ್ಮ ಜೀವನದ ಮೇಲೂ ಪ್ರಭಾವ ಬೀರಬಲ್ಲವು ಎಂಬ ಮಾತನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಮಕ್ಕಳ ಎದುರು ಯಾವುದೇ ಕಾರ್ಯಕ್ರಮಗಳನ್ನು ವೀಕ್ಷಿಸುವ ಮುನ್ನ ಜಾಗ್ರತರಾಗಿ ಇರುವುದು ಒಳ್ಳೆಯದು. ಏಕೆಂದರೆ ಕ್ರೈಮ್​ ಪೆಟ್ರೋಲ್​, ಸಾವಧಾನ್​ ಇಂಡಿಯಾಗಳಂತಹ ಶೋಗಳನ್ನು ವೀಕ್ಷಿಸುತ್ತಿದ್ದ ಪುಟ್ಟ ಬಾಲಕಿಯು ಇದೀಗ ನೇಣಿಗೆ ಶರಣಾಗಿದ್ದಾಳೆ (Student Committed Suicide)!

ಹೌದು..! ಆಕೆಗಿನ್ನೂ ಕೇವಲ 10 ವರ್ಷ ವಯಸ್ಸು. ಆದರೆ ವಿಧಿಯಾಟದಿಂದಾಗಿ ಆಕೆ ಬಾರದ ಲೋಕಕ್ಕೆ ತೆರಳಿದ್ದಾಳೆ. ಇದಕ್ಕೆ ಕಾರಣ ಟಿವಿಯಲ್ಲಿ ಬರುತ್ತಿದ್ದ ಕಾರ್ಯಕ್ರಮ ಅಂದರೆ ನೀವು ನಂಬಲೆಬೇಕು..! ಇತ್ತೀಚಿನ ದಿನಗಳಲ್ಲಿ ಟಿವಿ ಶೋಗಳು ಮಕ್ಕಳ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತಿದೆ. ಇದಕ್ಕೆ ಈ ಘಟನೆಯೇ ಬೆಸ್ಟ್‌ ಎಕ್ಸಾಂಪಲ್‌. ಇದೀಗ ಗುಜರಾತ್​ನಲ್ಲಿ ಇಂತಹದ್ದೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಐದನೇ ತರಗತಿ ಓದುತ್ತಿದ್ದ ಬಾಲಕಿಯು ನೇಣಿಗೆ ಶರಣಾಗಿದ್ದಾಳೆ.

ಸಾವಧಾನ್​ ಇಂಡಿಯಾ, ಕ್ರೈಂ ಪೆಟ್ರೋಲ್​ನಂತಹ ಕಾರ್ಯಕ್ರಮಗಳನ್ನು ಅತಿಯಾಗಿ ವೀಕ್ಷಿಸಿದ್ದೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಬೇರೊಂದು ಮನೆಯಲ್ಲಿ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಬಾಲಕಿಯ ಪೋಷಕರು ಮನೆಯಿಂದ ತೆರಳಿದ್ದರು. ಈ ಕಾರ್ಯಕ್ರಮಕ್ಕೆ ಹಾಜರಾಗಲು ಬಾಲಕಿ ನಿರಾಕರಿಸಿದ್ದಳು. ಕಾರ್ಯಕ್ರಮ ಮುಗಿಸಿ ಮನೆಗೆ ವಾಪಸ್ಸಾದ ಬಳಿಕ ಬಾಗಿಲು ಎಷ್ಟೇ ಬಡಿದರೂ ಸಹ ಬಾಲಕಿ ಬಾಗಿಲು ತೆರದೇ ಇರಲಿಲ್ಲ. ಇದರಿಂದ ಅನುಮಾನಗೊಂಡ ಮನೆಯವರು ಕಿಟಕಿ ತೆರೆದು ನೋಡಿದ ವೇಳೆ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆಯಾಗಿದೆ.

ಬಾಲಕಿಯನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರೂ ಸಹ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ 10 ವರ್ಷದ ಬಾಲಕಿಗೆ ನೇಣು ಹಾಕಿಕೊಳ್ಳುವಂತಹ ಧೈರ್ಯ ಹೇಗೆ ಬಂತು ಎಂಬ ಅನುಮಾನ ಮೂಡಿದೆ. ಈ ಸಂಬಂಧ ಕೇಸ್​ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ: SBI Recruitment 2021 : ಪದವೀಧರರಿಗೆ ಎಸ್‌ಬಿಐನಲ್ಲಿದೆ 1,200 CBO ಹುದ್ದೆ, 36,000 ರೂ. ವೇತನ

ಇದನ್ನೂ ಓದಿ: Mother Killed Baby : ಮಗುವಿನ ಅಳು ಸಹಿಸಲಾರದೇ ಗೋಡೆಗೆ ಜಜ್ಜಿ ಕೊಂದ ಪಾಪಿ ತಾಯಿ..!

class 5th girl student committed suicide after watching crime patrol in rajkot

Comments are closed.