Fish Lorry Accident : ಉಡುಪಿಯಲ್ಲಿ ವೃದ್ದನ ಜೀವ ಉಳಿಸಲು ತನ್ನ ಪ್ರಾಣವನ್ನೇ ಕಳೆದುಕೊಂಡ ಮೀನಿನ ಲಾರಿಯ ಚಾಲಕ !

ಉಡುಪಿ : ವಾಹನ ಚಾಲನೆಯ ವೇಳೆಯಲ್ಲಿ ಎಷ್ಟೇ ಜಾಗೃತರಾಗಿದ್ದರೂ ಕೂಡ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಇನ್ನು ಕೆಲವೊಮ್ಮೆ ಬೇರೊಬ್ಬರ ಜೀವ ಉಳಿಸುವ ಸಲುವಾಗಿ ತಮ್ಮ ಪ್ರಾಣವನ್ನ ಕಳೆದುಕೊಳ್ಳುವ ಘಟನೆಗಳು ನಡೆಯುತ್ತಿವೆ. ಇದೀಗ ರಸ್ತೆ ಅಡ್ಡಲಾಗಿ ಬಂದ ವೃದ್ದನೋರ್ವನ ಪ್ರಾಣ ಉಳಿಸಲು ಭರಸದಲ್ಲಿ ಮೀನಿನ ಲಾರಿಯ ಚಾಲಕನೋರ್ವ ( driver death ) ಜೀವವನ್ನೇ ಕಳೆದುಕೊಂಡಿರುವ (Fish Lorry Accident) ಘಟನೆ ಉಡುಪಿಯ ಸಂತೆಕಟ್ಟೆ ಎಂಬಲ್ಲಿ ನಡೆದಿದೆ.

ತೌಫಿಕ್‌ (28 ವರ್ಷ) ಎಂಬವರೇ ಪ್ರಾಣ ಕಳೆದುಕೊಂಡ ಚಾಲಕ. ರಾಷ್ಟ್ರೀಯ ಹೆದ್ದಾರಿ 66 ರ ಸಂತೆಕಟ್ಟೆಯ ಬಳಿಯಲ್ಲಿ ತೌಫಿಕ್‌ ಚಲಾಯಿಸುತ್ತಿದ್ದ ಮೀನಿನ ಲಾರಿ ಸಂಚರಿಸುತ್ತಿತ್ತು. ಈ ವೇಳೆಯಲ್ಲಿ ವೃದ್ದನೋರ್ವ ಲಾರಿಗೆ ಅಡ್ಡ ಬಂದಿದ್ದಾನೆ. ಮೀನಿನ ವಾಹನ ವೇಗವಾಗಿ ಬರುತ್ತಿದ್ದು, ವೃದ್ದನನ್ನು ರಕ್ಷಿಸುವ ಸಲುವಾಗಿ ಲಾರಿಯನ್ನು ಪಕ್ಕಕ್ಕೆ ಎಳೆದಿದ್ದಾರೆ. ಈ ವೇಳೆಯಲ್ಲಿ ಲಾರಿ ರಸ್ತೆ ಪಕ್ಕದಲ್ಲಿರುವ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಚಾಲಕ ತೌಫಿಕ್‌ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

Fish Lorry Accident driver death Santhekatte in udupi

ಇನ್ನು ಲಾರಿಯಲ್ಲಿದ್ದ ಕ್ಲೀನರ್ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಉಡುಪಿ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ವೃದ್ದನ ಜೀವ ಉಳಿಸಲು ಹೋದ ಲಾರಿ ಚಾಲಕ ಇದೀಗ ಬಾರದ ಲೋಕಕ್ಕೆ ಪಯಣಿಸಿದ್ದಾನೆ.

ಮಗುವಿನ ಅಳು ಸಹಿಸಲಾರದೇ ಗೋಡೆಗೆ ಜಜ್ಜಿ ಕೊಂದ ಪಾಪಿ ತಾಯಿ..!

27 ದಿನದ ಮಗುವನ್ನು ಹೆತ್ತ ತಾಯಿಯ ಗೊಡೆಗೆ ಜಪ್ಪಿ ಸಾಯಿಸಿದ ದಾರುಣ ಘಟನೆಯು ಕೇರಳದಲ್ಲಿ ವರದಿಯಾಗಿದೆ. ಅವಧಿಗೂ ಮೊದಲೇ ಜನಿಸಿದ್ದ ಈ ಮಗುವು ಅನಾರೋಗ್ಯದಿಂದ ಬಳಲುತ್ತಿತ್ತು ಹಾಗೂ ಇಡೀ ದಿನ ಅಳುತಿತ್ತು ಎನ್ನಲಾಗಿದೆ. ಇದರಿಂದ ಕಿರಿಕಿರಿ ಅನುಭವಿಸಿದ 21 ವರ್ಷದ ತಾಯಿ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಡಿಸೆಂಬರ್​ 9ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಹಾಗೂ ವೈದ್ಯರು ನೀಡಿದ ಔಷಧಿಯನ್ನು ಪಡೆದು ಮನೆಗೆ ಮರಳಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆದರೆ ಔಷಧಿ ಸೇವಿಸಿದ ಬಳಿಕವೂ ಮಗುವಿನ ಸ್ಥಿತಿ ಬಿಗಡಾಯಿಸುತ್ತಲೇ ಇತ್ತು. ಕೊನೆಗೆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಅದು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ. ಅಡುಗೆ ಕೆಲಸ ಮಾಡಿಕೊಂಡು ತನ್ನ 45 ವರ್ಷದ ಪ್ರಿಯಕರನೊಂದಿಗೆ ಮಹಿಳೆ ವಾಸವಾಗಿದ್ದ ಆಶ್ರಮವನ್ನು ನಡೆಸುತ್ತಿದ್ದ ಫಾದರ್​ ಜೋಜಿ ಥಾಮಸ್​ ನೀಡಿದ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿಸೆಂಬರ್​ 10ರಂದು ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದ ವೇಳೆಯಲ್ಲಿ ಮಗುವಿನ ತಲೆಯ ಹಿಂಭಾಗದಲ್ಲಿ ಗಾಯ ಉಂಟಾಗಿರುವುದು ಗಮನಕ್ಕೆ ಬಂದಿದೆ. ಹಸುಗೂಸಿನ ತಲೆಬುರುಡೆ ಅತ್ಯಂತ ಮೃದವಾಗಿದ್ದರಿಂದ ಗಾಯಗಳು ಸರಿಯಾಗಿ ಗೋಚರವಾಗುತ್ತಿರಲಿಲ್ಲ. ಆದರೂ ಅನುಮಾನಗೊಂಡ ಪೊಲೀಸರು ಮಗುವಿನ ತಾಯಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಪೊಲೀಸರಿಗೆ ಮಗುವಿನ ತಾಯಿ ಮಾನಸಿಕ ಅಸ್ವಸ್ಥಳಂತೆ ಕಂಡಿದ್ದಾಳೆ. ಹೀಗಾಗಿ ಆಕೆಯನ್ನು ವಿವರವಾಗಿ ಪ್ರಶ್ನಿಸಲು ಪೊಲೀಸರು ಮುಂದಾಗಲಿಲ್ಲ. ದಂಪತಿ ವಿಚಾರಣೆ ನಡೆಸಿದ ವೇಳೆ ಇವರಿಬ್ಬರು ಪರಸ್ಪರ ಫೋನ್​ ಕಾಲ್​ ಮೂಲಕ ಪರಿಚಯವಾಗಿದ್ದರು ಹಾಗೂ ನಂತರದಲ್ಲಿ ಆಶ್ರಮದಲ್ಲಿ ಒಟ್ಟಾಗಿ ಇರಲು ಆರಂಭಿಸಿದರು ಎಂದು ತಿಳಿದುಬಂದಿದೆ.

ಮಗುವಿನ ತಂದೆಗೆ ಈಗಾಗಲೇ ಮದುವೆಯಾಗಿತ್ತು. ಈ ವಿಚಾರ ತಿಳಿದಿದ್ದರೂ ಸಹ ಆಕೆ ಆತನೊಂದಿಗೆ ವಾಸವಿದ್ದಳು ಎನ್ನಲಾಗಿದೆ. ಹೆಚ್ಚಿನ ವಿಚಾರಣೆ ವೇಳೆ ತಾನೇ ಮಗುವನ್ನು ಗೋಡೆಗೆ ಹೊಡೆದು ಕೊಲೆ ಮಾಡಿರುವುದಾಗಿ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ. ಅನಾರೋಗ್ಯದಿಂದ ಬಳಲುತ್ತಿರುವ ಶಿಶು ಮುಂದೆ ತನ್ನ ಭವಿಷ್ಯಕ್ಕೆ ಹಾನಿ ಮಾಡಬಹುದೆಂಬ ಭಯದಿಂದ ಮಹಿಳೆ ಈ ರೀತಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಇದನ್ನೂ ಓದಿ : Monkey Viral Video : ಕೋತಿಮರಿ ಉಳಿಸಲು ಬಾಯಿಗೆ ಬಾಯಿಟ್ಟು ಗಾಳಿ ಊದಿದ ಕಾರು ಚಾಲಕ; ಮಾನವೀಯತೆಗೆ ಪ್ರಶಂಸೆ ವ್ಯಕ್ತಪಡಿಸಿದ ನಟ ಸೂರ್ಯ

ಇದನ್ನೂ ಓದಿ : Student Committed Suicide : ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಐದನೇ ತರಗತಿ ಬಾಲಕಿ: ಕ್ರೈಮ್​ ಪೆಟ್ರೋಲ್​ನಿಂದ ಸಿಕ್ಕಿತ್ತು ಸ್ಪೂರ್ತಿ

ಇದನ್ನೂ ಓದಿ : online gaming tokens :ಆನ್​ಲೈನ್​ ಗೇಮ್​​ನ ಹುಚ್ಚಿನಿಂದ ಸಹೋದರರನನ್ನೇ ಕೊಂದ 16 ವರ್ಷದ ಬಾಲಕ..!

( Fish Lorry Accident driver death Santhekatte in udupi)

Comments are closed.