ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಚರ್ಚೆಗೊಳಗಾದ ನಟಿ ಅಂದ್ರೇ ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಮಿಂಚಿದ ಬೆಡಗಿ ಸಮಂತಾ. ವಿಚ್ಛೇಧನ, ವಿಚ್ಛೇಧನದ ಬಳಿಕ ಕೆರಿಯರ್, ಇಂಟರವ್ಯೂ ಹೀಗೆ ನಾನಾ ಕಾರಣಗಳಿಗೆ ಸಮಂತಾ ಸುದ್ದಿಯಾಗುತ್ತಲೇ ಇದ್ದಾರೆ. ಈ ಮಧ್ಯೆ ಪುಷ್ಪ ಸಿನಿಮಾದ ( Pushpa Movie ) ಐಟಂ ಸಾಂಗ್ ವಿಚಾರಕ್ಕಂತೂ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಗೆ ಒಳಗಾಗುತ್ತಲೇ ಇದ್ದಾರೆ. ಆದರೆ ಇದಕ್ಕೆಲ್ಲ ಸಮಂತಾ ಖಡಕ್ ( Actress Samantha Bold Answer ) ಉತ್ತರ ರವಾನಿಸಿದ್ದಾರೆ.
ಟಾಲಿವುಡ್ ಬೆಡಗಿ ಸಮಂತಾ ಇತ್ತೀಚಿಗೆ ನಟನೆಯಲ್ಲಿ ಮಾತ್ರವಲ್ಲ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಗೂ ನಡೆ-ನುಡಿಯಲ್ಲೂ ದಿಟ್ಟತನ ತೋರುತ್ತಿದ್ದಾರೆ. ತಿಂಗಳ ಹಿಂದೆಯಷ್ಟೇ ಅಕ್ಕಿನೇನಿ ಕುಟುಂಬದಿಂದ ಹೊರಬಂದ ಸಮಂತಾ ವೈವಾಹಿಕ ಬದುಕಿನ ನೋವುಗಳನ್ನು ಬದಿಗಿಟ್ಟು ಕೆರಿಯರ್ ನಲ್ಲಿ ಬ್ಯುಸಿಯಾದ್ರು. ಅಷ್ಟೇ ಅಲ್ಲ ಪುಷ್ಪ ಸಿನಿಮಾದ ಊ ಅಂಟಾವಾ ಮಾವಾ ಉಹೂಂ ಅಂಟಾವಾ ಮಾವಾ ಹಾಡಿನಲ್ಲಿ ಬೋಲ್ಡ್ ಅವತಾರದಲ್ಲಿ ಕುಣಿದು ಪಡ್ಡೆಗಳ ನಿದ್ದೆಗೆಡಿಸಿದ್ರು.
ಸಮಂತಾ ತುಂಡು ಲಂಗ ಹಾಕಿಕೊಂಡು ಬೋಲ್ಡ್ ಸ್ಪೆಪ್ ನಲ್ಲಿ ಕುಣಿಯುತ್ತಿದ್ದಂತೆ ಟ್ರೋಲಿಗರು ಎಚ್ಚೆತ್ತುಕೊಂಡು ಸಮಂತಾ ಮೇಲೆ ಮುಗಿಬಿದ್ದಿದ್ದಾರೆ. ಕೆಲವರಂತೂ ಸಮಂತಾ ವಿರುದ್ಧ ದೂರು ಕೂಡ ದಾಖಲಿಸಿದ್ದಾರೆ. ಸಮಂತಾ ಕುಣಿದಿರೋ ಐಟಂ ಸಾಂಗ್ ಪುರುಷರನ್ನು ಆಹ್ವಾನಿಸುವಂತಿದೆ ಎಂದು ಆರೋಪಿಸಿ ದೂರು ಕೂಡ ದಾಖಲಿಸಿದ್ದಾರೆ.
ಇನ್ನು ಕೆಲವರು ಪತಿ ನಾಗಚೈತನ್ಯ ಹಾಗೂ ಮಾವಾ ನಾಗಾರ್ಜುನ್ ಗೆ ಟಾಂಟ್ ನೀಡಲೆಂದೇ ಸಮಂತಾ ಇಂಥ ಪಾತ್ರ ಮಾಡಿದ್ದಾರೆ ಎಂದೂ ಆರೋಪಿಸಿದ್ದರು. ಇತ್ತ ಯೂ ಟ್ಯೂಬ್ ನಲ್ಲಿ ಸಮಂತಾ ನಟನೆಯ ಹಾಡು ದಾಖಲೆ ಬರೆಯುತ್ತಲೇ ಇದೆ. ಈಗಾಗಲೇ ೧೦ ಮಿಲಿಯನ್ ವೀವ್ಸ್ ದಾಟಿ ದಾಖಲೆ ಸಾಗುತ್ತಲೇ ಇದೆ. ಹೀಗಾಗಿ ಟೀಕೆಗಳಿಗೆ ಕಿವಿಕೊಡದೇ ತಮ್ಮ ಖುಷಿಯನ್ನು ಎಂಜಾಯ್ ಮಾಡ್ತಿರೋ ಸಮಂತಾ, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲಿಗರಿಗೆ ಸಖತ್ ತಿರುಗೇಟು ನೀಡಿದ್ದಾರೆ.
ನಾನು ಒಳ್ಳೆಯ ಪಾತ್ರಗಳನ್ನು ಮಾಡಿದ್ದೇನೆ. ಕೆಟ್ಟ ಪಾತ್ರಗಳಲ್ಲಿಯೂ ನಟಿಸಿದ್ದೇನೆ. ಗಂಭೀರವಾದ ಪಾತ್ರಗಳಲ್ಲಿಯೂ ನಟಿಸಿದ್ದೇನೆ. ನಾನು ನಟಿಸುವ ಎಲ್ಲ ಪಾತ್ರಗಳಲ್ಲಿಯೂ ಅದ್ಭುತವಾಗಿ ನಟಿಸಬೇಕೆಂದು ,ಚೆನ್ನಾಗಿ ಮೂಡಿಬರಬೇಕೆಂದು ನಾನು ಕಷ್ಟ ಪಡುತ್ತೇನೆ. ಆದರೆ ಸೆಕ್ಷಿಯಾಗಿ ಕಾಣಿಸಿಕೊಳ್ಳುವುದು ಬಹಳ ಬಹಳ ಕಷ್ಟದ ಕೆಲಸ. ಊ ಅಂಟಾವಾ ಊಹು ಅಂಟಾವಾ ಹಾಡಿಗೆ ನೀವು ತೋರಿದ ಪ್ರೀತಿಗೆ ನಾನು ಚಿರ ಋಣಿ ಎಂದು ಸಂಮತಾ ಇನ್ ಸ್ಟಾಗ್ರಾಂ ಪೋಸ್ಟ್ ಹಾಕಿದ್ದಾರೆ. ಮಾತ್ರವಲ್ಲ ಪುಷ್ಪ ಸಿನಿಮಾದಲ್ಲಿ ಅಲ್ಲೂ ಅರ್ಜುನ್ ನಟನೆಯನ್ನು ಕೊಂಡಾಡಿದ ಸಮಂತಾ, ಸೀಟಿಗೆ ಅಂಟಿಕೊಂಡೇ ಕೂರುವಂತೆ ಮಾಡುತ್ತೆ. ಅವರ ನಟನೆಯಿಂದ ನಾನು ಸ್ಪೂರ್ತಿಗೊಂಡಿದ್ದೇನೆ ಎಂದಿದ್ದಾರೆ.
( Samantha Troll to Bold Look: Actress Samantha Bold Answer on Social Media Pushpa Movie)