Sourav Ganguly : ಜೀವನದ ಒತ್ತಡಗಳ ಬಗ್ಗೆ ತಮಾಷೆ ಮಾಡಲು ಹೋಗಿ ವಿವಾದಕ್ಕೆ ಗುರಿಯಾದ ಸೌರವ್​ ಗಂಗೂಲಿ

ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ(Sourav Ganguly) ಭಾರತೀಯ ಕ್ರಿಕೆಟ್​ ಇತಿಹಾಸದ ದಂತಕತೆ ಎಂದು ಹೇಳಿದರೆ ತಪ್ಪಾಗಲಾರದು. ಸೌರವ್​ ಗಂಗೂಲಿ ನಾಯಕತ್ವ ದಲ್ಲಿ ಟೀಂ ಇಂಡಿಯಾ ಸಾಕಷ್ಟು ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿದೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ ಗೆಲುವಂತೂ ಮರೆಯುವ ಹಾಗೆಯೇ ಇಲ್ಲ. ಅಭಿಮಾನಿಗಳು ಈಗಲೂ ಸೌರವ್​ ಗಂಗೂಲಿಯನ್ನು ಪ್ರೀತಿಸುತ್ತಿರೋದಕ್ಕೆ ಅನೇಕ ಕಾರಣಗಳಿವೆ. ಸೌರವ್​ ಗಂಗೂಲಿ ಪ್ರಸ್ತುತ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದಾರೆ . ಟೀಂ ಇಂಡಿಯಾದ ಭವಿಷ್ಯ ಸಂಬಂಧಿ ಸಾಕಷ್ಟು ಮಹತ್ವದ ನಿರ್ಧಾರಗಳನ್ನು ಗಂಗೂಲಿ ಕೈಗೊಂಡಿದ್ದಾರೆ .

ಕ್ರಿಕೆಟ್​ ಇತಿಹಾಸದಲ್ಲಿ ಗಂಗೂಲಿ ಇಷ್ಟೆಲ್ಲ ಸಾಧನೆ ಮಾಡಿರುವಾಗ ಅವರ ಮಾತುಗಳನ್ನು ಕೇಳುವವರ ಸಂಖ್ಯೆಯೂ ಹೆಚ್ಚಿರುತ್ತದೆ. ಆದರೆ ಸೌರವ್​ ಗಂಗೂಲಿ ಮಾತ್ರ ತಮ್ಮ ಹೇಳಿಕೆಯೊಂದರ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ಗುರುಗಾಂವ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಂಗೂಲಿ ಭಾರತೀಯ ಕ್ರಿಕೆಟ್​ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ಒತ್ತಡ ನಿರ್ವಹಣೆ ವಿಚಾರದಲ್ಲಿ ಸೌರವ್​ ಗಂಗೂಲಿ ನೀಡಿದ ಹೇಳಿಕೆಯು ಇದೀಗ ಭಾರೀ ವಿವಾದಕ್ಕೆ ಗ್ರಾಸವಾಗಿದೆ.

ಜೀವನದಲ್ಲಿ ಯಾವುದೇ ಒತ್ತಡವಿಲ್ಲ. ಪತ್ನಿ ಹಾಗೂ ಗೆಳತಿ ಮಾತ್ರ ಒತ್ತಡವನ್ನು ಕೊಡುತ್ತಾರೆ ಎಂದು ಕಾರ್ಯಕ್ರಮದಲ್ಲಿ ಸೌರವ್​ ಗಂಗೂಲಿ ತಮಾಷೆ ಮಾಡಿದ್ದಾರೆ. ಆದರೆ ಪತ್ನಿ ಹಾಗೂ ಗೆಳತಿ ವಿರುದ್ಧ ಸೌರವ್​ ಗಂಗೂಲಿ ನೀಡಿದ ಹೇಳಿಕೆಯು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಹೇಳಿಕೆಯ ವಿಡಿಯೋವನ್ನು ನೋಡಿದ ನೆಟ್ಟಿಗರು ಗಂಗೂಲಿ ಹೇಳಿಕೆಗೆ ವ್ಯಾಪಕ ವಿರೋಧವನ್ನು ವ್ಯಕ್ತಪಡಿಸಿದ್ದಾರೆ .. ಈ ಹೇಳಿಕೆಯನ್ನು ನೀಡಿದ್ದಕ್ಕೆ ನೆಟ್ಟಿಗರು ಗಂಗೂಲಿಯನ್ನು ಲಿಂಗ ಬೇಧಭಾವ ಮಾಡುವ ವ್ಯಕ್ತಿ ಎಂದು ಜರಿದಿದ್ದಾರೆ. ಸೌರವ್​ ಗಂಗೂಲಿಯಂತಹ ವ್ಯಕ್ತಿಯಿಂದ ಇಂತಹ ಹೇಳಿಕೆಯನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಅನೇಕರು ಅಸಮಾಧಾನ ಹೊರಹಾಕುತ್ತಿದ್ದಾರೆ .

ಇದನ್ನು ಓದಿ : Free buspass garment employees : ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಗಳಿಗೆ ಸಿಹಿಸುದ್ದಿ: BMTC ನೀಡಲಿದೆ ಉಚಿತ ಪಾಸ್

ಇದನ್ನೂ ಓದಿ : Lucknow list out IPL 2022 : ಲಕ್ನೋ ತಂಡದಲ್ಲಿ ರಾಹುಲ್, ರಶೀದ್ ಖಾನ್, ಸ್ಟೀವ್ ಸ್ಮಿತ್ ಮತ್ತು ಸುರೇಶ್ ರೈನಾ

ಇದನ್ನೂ ಓದಿ : Ahmedabad list out IPL 2022 : ಅಹಮದಾಬಾದ್ ಸೇರ್ತಾರೆ ಶ್ರೇಯಸ್ ಅಯ್ಯರ್, ಡೇವಿಡ್ ವಾರ್ನರ್, ಹಾರ್ದಿಕ್‌ ಪಾಂಡ್ಯ

Sourav Ganguly jokingly says ‘only wife and girlfriend give stress’, called out for ‘sexism’

Comments are closed.