ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ಮೇಘನಾ ಸರ್ಜಾ ಹಾಗೂ ಚಿರು ಸರ್ಜಾ ( Chiru Sarja ) ದೈಹಿಕವಾಗಿ ಇನ್ನೆಂದೂ ಒಂದಾಗದಂತೆ ದೂರವಾಗಿದ್ದರೂ ಮೇಘನಾ ಪತಿಯ ನೆನಪು ನಲ್ಲೇ ಸದಾ ಖುಷಿ ಹಂಚಿಕೊಳ್ಳುತ್ತಿರುತ್ತಾರೆ. ಹುಟ್ಟುವ ಮುನ್ನವೇ ತಂದೆಯನ್ನು ಕಳೆದುಕೊಂಡ ಮಗುವಿಗೆ ( Raayan Raj Sarja ) ತಂದೆ ಹಾಗೂ ತಾಯಿ ಸ್ಥಾನದಲ್ಲಿ ನಿಂತು ಪೊರೈಯುತ್ತಿರುವ ಮೇಘನಾ ಮಗನಿಗಾಗಿ ಸಾಂತಾಕ್ಲಾಸ್ ( Santa Claus ) ಬಳಿ ವಿಶೇಷ ಗಿಫ್ಟ್ ( Meghana Raj special Demand ) ಕೇಳಿದ್ದಾರೆ. ಅಷ್ಟೇ ಅಲ್ಲ ತಾವು ಕೇಳಿದ ಗಿಫ್ಟ್ ಏನು ಎಂಬುದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಮೇಘನಾ ಪತಿ ನೆನಪಿನಲ್ಲೇ ಮಗನ ಜೊತೆ ನಿಧಾನಕ್ಕೆ ಸಹಜ ಬದುಕಿಗೆ ಮರಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಅಕ್ಟಿವ್ ಆಗಿರೋ ಮೇಘನಾ ತಮ್ಮ ಪುತ್ರ ರಾಯನ್ ರಾಜ್ ಸರ್ಜಾ ಬಗ್ಗೆ ಸದಾ ಅಪ್ಡೇಟ್ ನೀಡುತ್ತಾ ಇರುತ್ತಾರೆ. ಕ್ರಿಶ್ಚಿಯನ್ ಹಾಗೂ ಹಿಂದೂ ಎರಡೂ ಧರ್ಮ ಸಮಾನವಾಗಿ ಪಾಲಿಸಲ್ಪಡುವ ಮೇಘನಾ ಕುಟುಂಬದಲ್ಲಿ ಸದ್ಯ ಕ್ರಿಸ್ಮಸ್ ಸಂಭ್ರಮ ಮನೆಮಾಡಿದೆ.
ಹೀಗಾಗಿ ಮನೆಯ ಅಲಂಕಾರ ಸೇರಿದಂತೆ ಎಲ್ಲ ಸಿದ್ಧತೆ ನಡೆದಿದೆ. ಈ ಮಧ್ಯೆ ಕ್ರಿಸ್ಮಸ್ ಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ಸಾಂತಾಕ್ಲಾಸ್ ಬಳಿ ಮೇಘನಾ ರಾಜ್ ಸರ್ಜಾ ತಮ್ಮ ಪುತ್ರನಿಗಾಗಿ ಸ್ಪೆಶಲ್ ಗಿಫ್ಟ್ ವೊಂದನ್ನು ಕೇಳಿದ್ದಾರಂತೆ. ಇತ್ತೀಚಿಗೆ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಮೇಘನಾ ರಾಜ್ ಪ್ರಶ್ನೋತ್ತರ ಅವಧಿಯನ್ನು ಆಯೋಜಿಸಿದ್ದರು. ಈ ವೇಳೆ ಅಭಿಮಾನಿಗಳು ನೀವು ಸಾಂತಾ ಕ್ಲಾಸ್ ಬಳಿ ಮಗನಿಗಾಗಿ ಯಾವ ಗಿಫ್ಟ್ ಕೇಳುತ್ತಿರಿ ಎಂದು ಪ್ರಶ್ನಿಸಿದ್ಧರು.

ಈ ಪ್ರಶ್ನೆಗೆ ಪೋಟೋ ಮೂಲಕ ಮೇಘನಾ ರಾಜ್ ಉತ್ತರ ನೀಡಿದ್ದು, ಮಗನಿಗಾಗಿ ಮೇಘನಾ ಸಾಂತಾಕ್ಲಾಸ್ ಬಳಿ ಚಿರುವನ್ನು ವಾಪಸ್ ಕೇಳಿದ್ದಾರೆ. ಒಂದುಕಡೆ ಚಿರು ಹಾಗೂ ಇನ್ನೊಂದು ಕಡೆ ರಾಯನ್ ರಾಜ್ ಸರ್ಜಾ ಪೋಟೋ ಹಾಕಿರುವ ಮೇಘನಾ ಮಗನಿಗಾಗಿ ಚಿರುವನ್ನು ವಾಪಸ್ ಕೇಳುತ್ತೇನೆ ಎಂಬ ಮಾತನ್ನು ಪರೋಕ್ಷವಾಗಿ ಹೇಳಿದ್ದಾರೆ.
ಮೇಘನಾ ರಾಜ್ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಹಲವರು ಮೇಘನಾ ಬೇಡಿಕೆಯನ್ನು ನೋಡಿ ಭಾವುಕ ಇಮೋಜಿಗಳ ಮೂಲಕ ಕಮೆಂಟ್ ಮಾಡಿದ್ದಾರೆ. ಇನ್ನು ಹಲವರು ಮಿರಾಕಲ್ ನಡೆದು ಚಿರು ಮಗುವಿಗಾಗಿ ವಾಪಸ್ ಬರಲಿ ಎಂದು ಕಮೆಂಟ್ ಮಾಡಿದ್ದಾರೆ. ಮೇಘನಾ ಐದು ತಿಂಗಳ ಗರ್ಭಿಣಿಯಾಗಿದ್ದಾಗ ಚಿರು ತೀವ್ರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ತಂದೆ ನಿಧನರಾದ ನಾಲ್ಕು ತಿಂಗಳ ಬಳಿಕ ಅಕ್ಟೋಬರ್ 22 ರಂದು ಮೇಘನಾ ಪುತ್ರ ಜ್ಯೂನಿಯರ್ ಚಿರು ಭುವಿಗೆ ಬಂದಿದ್ದ. ಇತ್ತೀಚಿಗೆ ಮಗನಿಗೆ ಅದ್ದೂರಿ ನಾಮಕರಣ ನಡೆಸಿದ್ದ ಮೇಘನಾ ಹಾಗೂ ಸರ್ಜಾ ಕುಟುಂಬ ಕಂದನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿತ್ತು.
ಇದನ್ನೂ ಓದಿ : ಬಣ್ಣದ ಲೋಕಕ್ಕೆ ಕುಟ್ಟಿಮಾ ಕಮ್ ಬ್ಯಾಕ್: ವರ್ಕೌಟ್ ಪೋಟೋ ಮೂಲಕ ರೀ ಎಂಟ್ರಿ ಸುಳಿವುಕೊಟ್ಟ ಮೇಘನಾ ರಾಜ್
ಇದನ್ನೂ ಓದಿ: ಕೆಜಿಎಫ್ ಮೀರಿಸುತ್ತಾ ವಿಕ್ರಾಂತ್ ರೋಣ: ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರವೇನು ಗೊತ್ತಾ?!
(Meghana Raj special Demand in Santa Claus her son Raayan Raj Sarja, Please Give me Chiru Sarja)