ಯಾದಗಿರಿ : Cow Feeds Famished Puppies :ತಾಯಿಯ ಹಾಲು ಅಮೃತ ಸಮಾನ ಎಂದು ಹೇಳುತ್ತಾರೆ. ಈ ಮಾತು ಕೇವಲ ಮನುಷ್ಯರಿಗೆ ಮಾತ್ರವಲ್ಲದೇ ಪ್ರಾಣಿಗಳ ವಿಚಾರದಲ್ಲಿಯೂ ಅನ್ವಯವಾಗುತ್ತದೆ. ಹುಟ್ಟಿದ ಪ್ರತಿ ಜೀವಿಯು ಬದುಕಲೂ ತಾಯಿಯ ಆರೈಕೆ ತುಂಬಾನೇ ಅವಶ್ಯಕವಾಗಿದೆ. ಯಾದಗಿರಿಯ ಪೇಠ ಅಮ್ಮಾಪುರ ಗ್ರಾಮದಲ್ಲಿ ಗೋವಿನ ತಾಯಿ ಪ್ರೀತಿಯೊಂದು ಭಾರೀ ಪ್ರಶಂಸೆಗೆ ಪಾತ್ರವಾಗುತ್ತಿದೆ. ಹಸಿವಿನಿಂದ ಬಳಲುತ್ತಿರುವ ಶ್ವಾನದ ಮರಿಗಳಿಗೆ ಹಸು ಹಾಲುಣಿಸುತ್ತಿದ್ದು ಈ ವಿಚಾರ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಸುರಪುರ ತಾಲೂಕಿನ ಪೇಠ ಅಮ್ಮಾಪುರ ಎಂಬ ಗ್ರಾಮ ಇದಾಗಿದ್ದು ಕಳೆದ ಐದು ದಿನಗಳಿಂದ ಹಸುವೊಂದು ಶ್ವಾನದ ಮರಿಗಳಿಗೆ ಹಾಲುಣಿಸುತ್ತಿದೆ. ನಾಲ್ಕು ಶ್ವಾನದ ಮರಿಗಳು ಇದೀಗ ಹಸುವಿನ ಹಾಲನ್ನೇ ನಂಬಿ ಬದುಕಿವೆ. ನಾಲ್ಕು ಮರಿಗಳು ಒಮ್ಮೆಲೆ ಜನಿಸಿದ್ದರಿಂದ ಶ್ವಾನಕ್ಕೆ ಎಲ್ಲಾ ಮರಿಗಳಿಗೆ ಹಾಲುಣಿಸಲು ಹಾಲಿನ ಕೊರತೆಯಾಗಿದೆ. ಹೀಗಾಗಿ ಹಸುವೇ ಶ್ವಾನದ ಮರಿಗಳಿಗೆ ಹಾಲು ನೀಡಿ ಹೊಟ್ಟೆ ತುಂಬಿಸಿದೆ.
ಈ ಹಸು ಶ್ವಾನದ ಮರಿಗಳಿಗೆ ಹಾಲು ನೀಡಬೇಕು ಅಂತಾನೇ ವಾಲ್ಮೀಕಿ ವೃತ್ತದ ಸಮೀಪದಲ್ಲಿರುವ ಶ್ವಾನದ ಮರಿಗಳ ಬಳಿ ಹುಡುಕಿಕೊಂಡು ಬರುತ್ತದೆ. ಮೇವು ತಿಂದು ಬರುವ ಹಸುವು ಶ್ವಾನದ ಮರಿಗಳಿಗೆ ಹಾಲನ್ನು ನೀಡುತ್ತದೆ. ಬೆಳಗ್ಗೆ ಹಾಗೂ ಸಂಜೆ ಎರಡೂ ಹೊತ್ತು ಹಸುವು ಶ್ವಾನದ ಮರಿಗಳಿಗೆ ಹಾಲುಣಿಸುತ್ತದೆ. ಒಂದು ವೇಳೆ ಶ್ವಾನದ ಮರಿಗಳು ಕಾಣದೇ ಹೋದರೆ ಕನಕಪ್ಪ ಎಂಬವರ ಮನೆಗೆ ಬಂದು ಹಾಲನ್ನು ನೀಡುತ್ತದೆಯಂತೆ.
ಹಸುವಿಗೆ ಶ್ವಾನದ ಮರಿಗಳ ಮೇಲಿನ ಈ ಪ್ರೀತಿಯು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಗೋ ಮಾತೆಯ ಮಾತೃಪ್ರೇಮ ಕಂಡು ಎಲ್ಲರೂ ಬೆರಗಾಗಿದ್ದಾರೆ. ಮನುಷ್ಯರಾಗಲಿ, ಪ್ರಾಣಿಯಾಗಲಿ ಮಾತೃಪ್ರೇಮವೊಂದೇ ಎಂದು ಮಾತನಾಡುತ್ತಿದ್ದಾರೆ.
WATCH: Cow Feeds Famished Puppies Milk in Karnataka
ಇದನ್ನು ಓದಿ : Goat with the face of a human : ಮನುಷ್ಯ ಮುಖದ ಆಕೃತಿಯ ವಿಚಿತ್ರ ಮರಿಗೆ ಜನ್ಮ ನೀಡಿದ ಮೇಕೆ
ಇದನ್ನೂ ಓದಿ : Octopus Hearts: ಆಕ್ಟೋಪಸ್‌ಗೆ ಮೂರು ಹೃದಯಗಳಿರುವುದು ಏಕೆ?