Corona Opinion ಇನ್ನಾದರೂ ಎಚ್ಚರ ಅತೀ ಅಗತ್ಯ: ಕೊರೊನ ಹಿಮ್ಮೆಟ್ಟಿಸಲು ನಾವೇ ಜವಾಬ್ದಾರರು

ಕೊರೊನ(Corona) ಮಹಾಮಾರಿ ಜಗತ್ತಿಗೆ ಕಾಲಿಟ್ಟು ಭರ್ತಿ ಮೂರು ವರ್ಷಗಳಾಗುತ್ತ ಬಂತು. ಕೇವಲ ಮೂರಕ್ಷರದ ಮೂರು ವರ್ಷಗಳ ಈ ರೋಗ ಬಲಿ ತೆಗೆದುಕೊಂಡಿದ್ದು, ಕೋಟ್ಯಂತರ ಜೀವಗಳನ್ನು. 2019ರಲ್ಲಿ ಚೀನಾದಲ್ಲಿ (China) ಕಾಣಿಸಿಕೊಂಡ ಈ ರೋಗ ನಿಧಾನವಾಗಿ ಉಳಿದ ದೇಶಗಳಿಗೂ ಹಬ್ಬಿತ್ತು. ಆಗ ಜನರು ಎಷ್ಟೊಂದು ಭಯ ಪಟ್ಟಿದ್ದರು ಎಂದರೆ ಮನೆಯಿಂದ ಹೊರಗೆ ಹೋಗುವುದೂ ಅಸಾಧ್ಯವಾಗಿತ್ತು. ಇದಕ್ಕೆ ಇನ್ನೊಂದು ಮುಖ್ಯ ಕಾರಣ ಎಂದರೆ, ವಿವಿಧ ಮಾಧ್ಯಮಗಳು ಕೊರೊನ ಕುರಿತು ಇಲ್ಲ ಸಲ್ಲದ ಸುಳ್ಳು ಸುದ್ದಿ (Corona Fake News) ನೀಡಿ ಜನರಲ್ಲಿ ಮತ್ತಷ್ಟು ಭೀತಿ ಹೆಚ್ಚಿಸಿದ್ದು ಗೊತ್ತೇ ಇದೆ. ಒಂದಷ್ಟು ಮಂದಿ ಭಯದಲ್ಲೇ ಪ್ರಾಣ ಕಳೆದುಕೊಂಡ ಘಟನೆಗಳು ನಮ್ಮ ಮುಂದಿವೆ.
ಜನರ ಓಡಾಟ ಜಾಸ್ತಿಯಾದಾಗ ಸರಕಾರ ಅನಗತ್ಯವಾಗಿ ಓಡಾಡದಂತೆ ಮನವಿ ಮಾಡಿತ್ತು. ಆದರೆ, ಪರಿಸ್ಥಿತಿ ಕೈ ಮೀರಿದಾಗ ಲಾಕ್‌ಡೌನ್ ಅನಿವಾರ್ಯ ಆಗಿತ್ತು. ಕೇವಲ ಒಂದು ವಾರಕ್ಕೆಂದು ಮಾಡಿದ ಲಾಕ್‌ಡೌನ್ ಮುಂದುವರಿದು ಎರಡ್ಮುರು ತಿಂಗಳುಗಳ ಕಾಲ ಎಲ್ಲರನ್ನು ಮನೆಯಲ್ಲೇ ಇರುವಂತೆ ಮಾಡಿತ್ತು.
ಇದೆಲ್ಲ ಹಳೆಯದೆನಿಸಿದರು, ಮರೆಯಬಾರದು. ಈ ಸಂದರ್ಭದಲ್ಲಿ ಶ್ರೀಮಂತ ಬಡವ ಎನ್ನದೇ ಎಲ್ಲರೂ ಕಷ್ಟ ಅನುಭವಿಸಿದ್ದಾರೆ. ಜನರು ಉದ್ಯೋಗ, ಆಹಾರ, ಚಿಕಿತ್ಸಾ ಸೌಲಭ್ಯ ಸರಿಯಾಗಿ ದೊರೆಯದೆ ಸಾವನ್ನಪ್ಪಿದ್ದಾರೆ.
ಕ್ರಮೇಣ ವ್ಯಾಕ್ಸಿನ್ ಕಂಡುಹಿಡಿದ ಮೇಲೆ, ಜನರ ಭೀತಿಯೂ ಕಡಿಮೆಯಾಯಿತು. ಜೊತೆಗೆ ಕೊರೊನ ಇದೆಯೆಂದು ಮರೆತು ಅನಗತ್ಯ ಓಡಾಟ ಜಾಸ್ತಿಯಾಯಿತು.
ಕೊರೊನ ಬಂದ ಮೊದ ಮೊದಲು ಮಾಸ್ಕ್ ,ಸಾನಿಟೈಸರ್, ಹ್ಯಾಂಡ್ ವಾಷ್ ಬಳಸುತ್ತಿದ್ದ ಜನ ಇಂದು ಅದ್ಯಾವುದರ ಗೊಡವೆ ಇಲ್ಲದೆ ಹಾಯಾಗಿದ್ದಾರೆ. ಕೊರೊನ ಅದೆಷ್ಟು ಅಪಾಯಕಾರಿ ಎಂಬುದನ್ನು ಮರೆತೇ ಹೋದರೇನೋ ಎನ್ನುವಂತಿದೆ ಜನರ ನಡವಳಿಕೆ.
ಇದೀಗ ಮೂರನೇ ವರ್ಷಕ್ಕೆ ಮೂರನೇ ಅಲೆಯೂ ಬಂದಾಯ್ತು. ಅತಿ ವೇಗದಲ್ಲಿ ಹರಡುವ ಒಮಿಕ್ರಾನ್ ಕೂಡ ಭಾರತಕ್ಕೆ ಕಾಲಿಟ್ಟಾಯ್ತು. ಇಷ್ಟೇ ಅಲ್ಲ ಫ್ಲೋರೋನ ಹಾಗೂ ಐ ಎಚ್ ಯು ಎಂಬ ಹೊಸ ರೂಪಾಂತರಿ ತಳಿಗಳು ಕೂಡ ಇದೀಗ ಇಸ್ರೇಲ್ ಹಾಗೂ ಫ್ರಾನ್ಸ್‌ನಲ್ಲಿ ಬಂದಿವೆ. ಆದರೆ ಜನರಿಗೆ ಬುದ್ದಿ ಮಾತ್ರ ಬಂದಿಲ್ಲ! ಇಷ್ಟೆಲ್ಲ ಆದರೂ, ತಪ್ಪು ಸರಕಾರದ್ದು ಎನ್ನುವ ಧೋರಣೆ ಮಾತ್ರ ನಿಂತಿಲ್ಲ.
ಇದೀಗ ದಿನೇ ದಿನೇ ಒಮಿಕ್ರಾನ್ ಸಂಖ್ಯೆ ಏರುತ್ತಲೇ ಇದೆ. ಇದು ಅಷ್ಟೊಂದು ಸೀರಿಯಸ್ ರೋಗ ಅಲ್ಲದೇ ಹೋದರೂ, ಜಾಗ್ರತೆಯಿಂದ ಅತಿ ಅಗತ್ಯ. ಸರಕಾರ ಈಗಾಗಲೇ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಗೆ ತಂದಿದೆ. ಒಂದು ವೇಳೆ ಮತ್ತೂ ಹತೋಟಿಗೆ ಬರದೆ ಹೋದಲ್ಲಿ, ಲಾಕ್‌ಡೌನ್ ಅನಿವಾರ್ಯ ಎನ್ನಲಾಗುತ್ತಿದೆ.
ಹಾಗಾಗಿ ಜನರು ಸ್ವತಃ ತಾವೇ ಅರಿತು ಅನಗತ್ಯ ಓಡಾಟ ನಿಲ್ಲಿಸಬೇಕು. ಒಬ್ಬ ಜವಾಬ್ದಾರಿ ನಾಗರಿಕನಂತೆ ವರ್ತಿಸಿದರೆ, ಕೊರೊನ ಮಹಾಮಾರಿ ಹಾಗೂ ಲಾಕ್‌ಡೌನ್ ತಪ್ಪಿಸಲು ಸಾಧ್ಯ.
(Retreat the corona)
ಇದನ್ನೂ ಓದಿ:Omicron cases : ಹೊಸ ರೂಪಾಂತರಿಯ ಹುಟ್ಟಿಗೆ ಕಾರಣವಾಗಲಿದೆ ಓಮಿಕ್ರಾನ್​ : ಡಬ್ಲುಹೆಚ್​ಓ ಎಚ್ಚರಿಕೆ

Comments are closed.