Meghana Raj :ಚಂದನವನದ ಚಂದದ ತಾರೆ ಮೇಘನಾ ರಾಜ್ ತಮ್ಮ ಜೀವನದಲ್ಲಿ ಕಂಡ ಕಷ್ಟ ಹೇಳುವಂತದ್ದಲ್ಲ. ಗರ್ಭಿಣಿ ಇರುವಾಗಲೇ ಪತಿಯನ್ನು ಕಳೆದುಕೊಂಡು ಸಾಕಷ್ಟು ನೋವನ್ನು ನುಂಗಿದ್ದ ಮೇಘನಾ ಪುತ್ರ ರಾಯನ್ಗೆ ಜನ್ಮ ನೀಡಿ ಸದ್ಯ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. ರಾಯನ್ ಜನನದ ಬಳಿಕ ಸೋಶಿಯಲ್ ಮೀಡಿಯಾಗಳಲ್ಲಿ ಆ್ಯಕ್ಟಿವ್ ಆಗಿದ್ದ ಮೇಘನಾ ರಾಜ್ ಇದೀಗ ಕಿರುತೆರೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
ಮತ್ತೆ ಮೇಘನಾ ರಾಜ್ ಬಣ್ಣ ಹಚ್ಚೋದನ್ನು ನೋಡೋದು ಯಾವಾಗ ಅಂತಾ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಮೇಘನಾ ಗುಡ್ ನ್ಯೂಸ್ ನೀಡಿದ್ದಾರೆ. ಹೌದು..! ನಟಿ ಮೇಘನಾ ಜನವರಿ 8ರಿಂದ ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸ್ಯಾಂಡಲ್ವುಡ್ಗೆ ನಟಿ ಮೇಘನಾ ರಾಜ್ ಯಾವಾಗ ಕಮ್ಬ್ಯಾಕ್ ಮಾಡುತ್ತಾರೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಎಲ್ಲರಲ್ಲೂ ಇತ್ತು. ಪತಿಯ ಜನ್ಮದಿನದಂದು ಈ ಕುತೂಹಲಕ್ಕೆ ತೆರೆ ಎಳೆದಿದ್ದ ಮೇಘನಾ ರಾಜ್ ತಾವು ಸಿನಿಮಾದಲ್ಲಿ ನಟಿಸುವ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು. ಆದರೆ ಇದಕ್ಕೂ ಮುನ್ನವೇ ಮೇಘನಾ ರಾಜ್ ಅಭಿಮಾನಿಗಳ ಮುಂದೆ ರಿಯಾಲಿಟಿ ಶೋವೊಂದರ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಯೆಸ್..! ಕಲರ್ಸ್ ಕನ್ನಡ ವಾಹಿನಿಯಲ್ಲಿ ಲೋಕೇಶ್ ಪ್ರಾಡಕ್ಷನ್ನಡಿಯಲ್ಲಿ ಮೂಡಿ ಬರುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನಲ್ಲಿ ನಟಿ ಮೇಘನಾ ರಾಜ್ ನಿರ್ಣಾಯಕಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ನಟ ವಿಜಯ ರಾಘವೇಂದ್ರ, ಡ್ಯಾನ್ಸರ್ ಮಯೂರಿ ಜೊತೆಯಲ್ಲಿ ನಟಿ ಮೇಘನಾ ರಾಜ್ ಈ ಡ್ಯಾನ್ಸಿಂಗ್ ರಿಯಾಲಿಟಿ ಶೋವನ್ನು ಜಡ್ಜ್ ಮಾಡಲಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡಿರುವ ಮೇಘನಾ ರಾಜ್, ಯಾವಾಗಲು ಅನೇಕ ಮೊದಲುಗಳು ಇರುತ್ತವೆ. ನಾನು ಮೊದಲ ಬಾರಿಗೆ ಡ್ಯಾನ್ಸ್ ರಿಯಾಲಿಟಿ ಶೋವೊಂದರ ಜಡ್ಜ್ ಆಗಿದ್ದೇನೆ.ಇಂತಹದ್ದೊಂದು ಅನುಭವ ನೀಡುತ್ತಿರುವ ಕಲರ್ಸ್ ಕನ್ನಡ ವಾಹಿನಿ, ಸೃಜನ್ ಲೋಕೇಶ್ ಹಾಗೂ ಲೋಕೇಶ್ ಪ್ರಾಡಕ್ಷನ್ಗೆ ನನ್ನ ಧನ್ಯವಾದಗಳು. ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮದಲ್ಲಿ ನನ್ನನ್ನು ಸೆಲೆಬ್ರಿಟಿ ಜಡ್ಜ್ ಆಗಿ ಬರಮಾಡಿಕೊಂಡಿದ್ದಕ್ಕೆ ಧನ್ಯವಾದಗಳು. ಹಾಗೂ ಈ ಸ್ಪರ್ಧೆಯಲ್ಲಿರುವ ಎಲ್ಲಾ ಪ್ರತಿಭಾನ್ವಿತ ಸ್ಪರ್ಧಿಗಳಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ವಿಜಯ ರಾಘವೇಂದ್ರ ಹಾಗೂ ಮಯೂರಿ ಜೊತೆ ಸಮಯ ಕಳೆಯಲು ಸಂತೋಷವಾಗಿದೆ. ನಿರೂಪಕ ಅಕುಲ್ ಬಾಲಾಜಿ ಕೂಡ ಸೂಪರ್ ಎಂದು ಬರೆದಿದ್ದಾರೆ.
actress meghana raj to be a dancing reality show judge in colors kannada
ಇದನ್ನು ಓದಿ : ek love ya movie : ರಚಿತಾ ರಾಮ್ ಬಹುನೀರಿಕ್ಷಿತ ಸಿನಿಮಾಗೆ ಶಾಕ್ : ರಿಲೀಸ್ ಡೇಟ್ ಮುಂದೂಡಿದ ಜೋಗಿ ಪ್ರೇಮ್
ಇದನ್ನೂ ಓದಿ : Netflix Kapil Sharma : ಕಾಮಿಡಿ ನೈಟ್ಸ್ ಕತೆ ನೆಟ್ ಫ್ಲಿಕ್ಸ್ ಜೊತೆ: ಬದುಕಿನ ಕತೆ ಹೇಳಲು ಬರ್ತಿದ್ದಾರೆ ಕಪಿಲ್ ಶರ್ಮಾ