ನವದೆಹಲಿ: ದೇಶದ ಇತರ ಭಾಗಗಳಂತೆ ಜಮ್ಮು ಮತ್ತು ಕಾಶ್ಮೀರದಲ್ಲೂ ಅಭಿವೃದ್ಧಿ ಪರ್ವ ಶುರುವಾಗಿದೆ. ಈ ನಿಟ್ಟಿನಲ್ಲಿ 50 ಸಾವಿರ ರೂ.ಗಳನ್ನು ಹೂಡಿಕೆ (Jammu Kashmir Investment) ಮಾಡಲಾಗುತ್ತಿದ್ದು, ಈ ಪೈಕಿ 12 ಸಾವಿರ ರೂ. ಮೊತ್ತದ ಪ್ರಗತಿ ಕಾರ್ಯಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ (Minister Amit Shah) ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದ ಉತ್ತಮ ಆಡಳಿತ ಜಿಲ್ಲೆಗಳ ಸೂಚ್ಯಂಕವನ್ನು ವರ್ಚುವಲ್ ಮೂಲಕ ಬಿಡುಗಡೆ ಮಾಡಿದ ಅವರು, ಈ ಹೂಡಿಕೆಯಿಂದ ಕಣಿವೆಯ ಯುವ ಸಮುದಾಯಕ್ಕೆ ಐದು ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಧಾನಿ ಮೋದಿಯವರು ಅತ್ಯುತ್ತಮವಾದ ಕೈಗಾರಿಕಾ ನೀತಿಯನ್ನು ರೂಪಿಸಿದ್ದಾರೆ. ಇದಕ್ಕೆ 50 ಸಾವಿರ ಕೋಟಿ ರೂ. ಬಂಡವಾಳದ ಅಗತ್ಯವಿದೆ. ದೇಶದ ಸ್ವತಂತ್ರದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಇಷ್ಟು ಮೊತ್ತದ ಹೂಡಿಕೆಯೇ ಆಗಿಲ್ಲ ಎಂದು ಹೇಳಿದರು.
ಮೊದಲ ಹಂತದಲ್ಲಿ 12 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಒಪ್ಪಂದ ಆಗಿದ್ದು, ಇದರಲ್ಲಿ 2 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳ ಕಾಮಗಾರಿಗಳು ಶುರುವಾಗಿದೆ ಎಂದು ಮಾಹಿತಿ ನೀಡಿದರು. ಜಮ್ಮು- ಕಾಶ್ಮೀರದಲ್ಲಿ ಈ ಅಭಿವೃದ್ಧಿ ಕಾರ್ಯದ ಬಗ್ಗೆ ತಿಳುವಳಿಕೆ ಇಲ್ಲಿದ್ದ ಸ್ಥಳೀಯ ನಾಯಕರು ಕಣಿವೆಯ ಜನರಿಗೆ ತಪ್ಪು ಮಾಹಿತಿ ನೀಡಿ ದಿಕ್ಕುತಪ್ಪಿಸುತ್ತಿದ್ದಾರೆ. ಇಂಥ ಮುಖಂಡರನ್ನು ಯುವಕರು ಪ್ರಶ್ನಿಸಬೇಕು. ಕಣಿವೆಯಲ್ಲಿನ ಅಭಿವೃದ್ಧಿ ಕಾರ್ಯವನ್ನು ಯಾರೂ ನಿಲ್ಲಿಸಲು ಆಗುವುದಿಲ್ಲ ಎಂದು ಅಮಿತ್ ಷಾ ತಿಳಿಸಿದರು.
ಕೇಂದ್ರಾಡಳಿತ ಪ್ರದೇಶದಲ್ಲಿ ಕ್ಷೇತ್ರ ಪುನರ್ವಿಂಗಡನಾ ಕಾರ್ಯ ನಡೆಯುತ್ತಿದ್ದು, ಇದು ಮುಗಿದ ನಂತರ ಚುನಾವಣೆಗಳು ನಡೆಯಲಿವೆ. ಇದರ ಬೆನ್ನಿಗೆ ರಾಜ್ಯದ ಸ್ಥಾನಮಾನ ಮರುಸ್ಥಾಪಿಸುವ ವಿಷಯವನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಜಿಲ್ಲೆಗಳನ್ನು ಈಗ ಅಭಿವೃದ್ಧಿ ಸೂಚ್ಯಂಕದಲ್ಲಿ ಪರಿಗಣಿಸಲಾಗಿದ್ದು, ಇವು ದೇಶದ ಇತರ ಜಿಲ್ಲೆಗಳ ಜತೆ ಸ್ಪರ್ಧಾತ್ಮಕ ಪೈಪೋಟಿ ನೀಡಲು ಸಮರ್ಥವಾಗಿವೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು.
ಇದನ್ನೂ ಓದಿ: Life is ‘More’ Beautiful: ರವಿವಾರದ ವಿಶೇಷ: ಲೈಫ್ ಈಸ್ ‘ಮೋರ್’ ಬ್ಯುಟಿಫುಲ್ ಆಗುವುದು ಯಾವಾಗ…?
ಇದನ್ನೂ ಓದಿ: Couple Therapy: ನಿಮ್ಮ ಸಂಗಾತಿ ಜೊತೆಗಿನ ಜಗಳ ಪರಿಹರಿಸಲು ನೆರವಾಗುವ ಚಟುವಟಿಕೆಗಳಿವು!
(Home Minister Amit Shah says 50000 Crore Investments To Come To Jammu Kashmir)