KL Rahul costliest player : ಕೆಎಲ್ ರಾಹುಲ್ ಐಪಿಎಲ್ 2022 ರ ದುಬಾರಿ ಆಟಗಾರ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಪಂದ್ಯಗಳು ಭಾರತದಲ್ಲಿ ಪ್ರೇಕ್ಷಕರಿಲ್ಲದೆ ನಡೆಯಲಿವೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳು ತಿಳಿಸಿವೆ. ಕೆ.ಎಲ್. ರಾಹುಲ್, ಆಸ್ಟ್ರೇಲಿಯಾ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಮತ್ತು ಅನ್‌ಕ್ಯಾಪ್ಡ್ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ IPL 2022 ಗಾಗಿ ಲಕ್ನೋ ತಂಡದ ಪರ ಆಡುವುದಕ್ಕೆ ಸಹಿ ಹಾಕಿದ್ದಾರೆ. ಆದ್ರೀಗ ಕನ್ನಡಿಗ ಕೆ.ಎಲ್.ರಾಹುಲ್‌ ಐಪಿಎಲ್ 2022ರ ದುಬಾರಿ ಆಟಗಾರರಾಗಿ‌ (KL Rahul costliest player) ಹೊರಹೊಮ್ಮಿದ್ದಾರೆ.

ಐಪಿಎಲ್‌ನಲ್ಲಿನ ಹೊಸ ಲಕ್ನೋ ಫ್ರಾಂಚೈಸಿ ನೀಡಿದ್ದ ಬರೋಬ್ಬರಿ 17 ಕೋಟಿ ರೂಪಾಯಿ ಒಪ್ಪಂದಕ್ಕೆ ರಾಹುಲ್‌ಗೆ ಸಹಿ ಹಾಕಿದ್ದಾರೆ. ಈ ಮೂಲಕ ರಾಹುಲ್‌ ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ಇದರಿಂದಾಗಿ ಲೀಗ್‌ನ ಇತಿಹಾಸದಲ್ಲಿ ಬ್ಯಾಟರ್ ಜಂಟಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರನಾಗಿದ್ದಾನೆ. ಐಪಿಎಲ್ 2018 ರ ಹರಾಜಿನ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರನ್ನು ಉಳಿಸಿಕೊಂಡಾಗ ಇಷ್ಟೇ ಮೊತ್ತವನ್ನು ವಿರಾಟ್‌ ಕೊಹ್ಲಿ ಪಡೆದುಕೊಂಡಿದ್ದರು.

ಆಸ್ಟ್ರೇಲಿಯಾದ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ( 9.2 ಕೋಟಿಗೆ ) ಮತ್ತು ಅನ್‌ಕ್ಯಾಪ್ಡ್ ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯ್ ( 4 ಕೋಟಿ ) ಒಳಗೊಂಡಿರುವ ತಂಡಕ್ಕೆ ರಾಹುಲ್‌ ನಾಯಕರಾಗಲಿದ್ದಾರೆ. ಲಕ್ನೋ ತಂಡದ ಖಾತೆಯಲ್ಲೀಗ ಒಟ್ಟು 59.80 ಕೋಟಿ ರೂಪಾಯಿ ಉಳಿದುಕೊಂಡಿದ್ದು, IPL 2022 ಮೆಗಾ ಹರಾಜಿನಲ್ಲಿ ಉಳಿದ ಆಟಗಾರರನ್ನು ಖರೀದಿ ಮಾಡಬೇಕಾಗಿದೆ. ಕನ್ನಡಿಗ ಕೆಎಲ್ ರಾಹುಲ್ ಅತ್ಯುತ್ತಮ ಬ್ಯಾಟ್ಸ್‌ಮನ್ ಮಾತ್ರವಲ್ಲದೆ ಶ್ರೇಷ್ಠ ವಿಕೆಟ್ ಕೀಪರ್ ಕೂಡ ಆಗಿದ್ದಾರೆ ಎಂದು ಫ್ರಾಂಚೈಸಿ ಮಾಲೀಕತ್ವದ ಆರ್‌ಪಿಎಸ್‌ಜಿ ಗ್ರೂಪ್‌ನ ಮುಖ್ಯಸ್ಥ ಸಂಜೀವ್ ಗೋಯೆಂಕಾ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

ಕೆಎಲ್ ರಾಹುಲ್ ನಾಯಕನಾಗಿ ಮಾರ್ಕಸ್ ಉತ್ತಮ ಫಿನಿಶರ್, ಉತ್ತಮ ಬೌಲರ್ ಮತ್ತು ಅದ್ಭುತ ಫೀಲ್ಡರ್. ರವಿ ಬಿಶ್ನೋಯಿ ಸ್ಪಿನ್ ವಿಭಾಗಕ್ಕೆ ಬಲ ತಂಡಿದ್ದಾರೆ. ಜೊತೆಗೆ ಅತ್ಯುತ್ತಮ ಫೀಲ್ಡರ್‌ ಆಗಿದ್ದಾರೆ. ಇನ್ನು ಆಟಗಾರರು ಹೆಚ್ಚು ವರ್ಷಗಳ ಕಾಲ ನಮ್ಮ ತಂಡದ ಜೊತೆಯಲ್ಲಿ ಉಳಿಯ ಬೇಕು ಎಂದು ಗೋಯೆಂಕಾ ತಿಳಿಸಿದ್ದಾರೆ. ಅಲ್ಲದೇ ತಂಡದ ಮೆಂಟರ್‌ ಗೌತಮ್‌ ಗಂಭೀರ ನೇಮಕವಾಗುವ ಸಾಧ್ಯತೆಯಿದೆ. ಜೊತೆಗೆ ರಾಹುಲ್‌ ಆರಂಭಿಕ ಆಟಗಾರನಾಗಿರುವುದರ ಜೊತೆಗೆ ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯ ಹೊಣೆಯನ್ನು ಹೊರಲಿದ್ದಾರೆ.

ಅಹಮದಾಬಾದ್ ಫ್ರಾಂಚೈಸ್ ಹಾರ್ದಿಕ್ ಪಾಂಡ್ಯ (15 ಕೋಟಿ) , ರಶೀದ್ ಖಾನ್ ( 15 ಕೋಟಿ) ಮತ್ತು ಶುಭ್ಮನ್ ಗಿಲ್ ( 8 ಕೋಟಿ ) ಅವರಿಗೆ ಸಹಿ ಹಾಕಿದೆ. ತಂಡದಲ್ಲಿ ಒಟ್ಟು 52 ಕೋಟಿಗಳ ಹಣವನ್ನು ಉಳಿಸಿಕೊಂಡಿದ್ದು, ಮೆಗಾ ಹರಾಜಿನಲ್ಲಿ ಉಳಿದ ಆಟಗಾರರನ್ನು ಖರೀದಿ ಮಾಡಬೇಕಾಗಿದೆ. ಈ ಬಾರಿ ಮೆಗಾ ಹರಾಜಿನಲ್ಲಿ ಒಟ್ಟು 1,214 ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 896 ಭಾರತೀಯ ಆಟಗಾರರು, 318 ವಿದೇಶಿ ಆಟಗಾರರು. ನೇಪಾಳ, ಯುಎಇ, ಓಮನ್, ಸ್ಕಾಟ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್‌ನಂತಹ 270 ಕ್ಯಾಪ್ಡ್, 903 ಅನ್‌ಕ್ಯಾಪ್ಡ್ ಮತ್ತು 41 ಆಟಗಾರರನ್ನು ಒಳಗೊಂಡಿದೆ. ಅಮೆರಿಕದ 14 ಆಟಗಾರರು ಕೂಡ ಇದ್ದಾರೆ. ಪ್ರತಿ ಫ್ರಾಂಚೈಸಿಯು ತಮ್ಮ ತಂಡದಲ್ಲಿ ಗರಿಷ್ಠ 25 ಆಟಗಾರರನ್ನು ಹೊಂದಿದ್ದರೆ, 217 ಆಟಗಾರರನ್ನು ಹರಾಜಿನಲ್ಲಿ ಖರೀದಿಸಲಾಗುತ್ತದೆ, ಅದರಲ್ಲಿ 70 ವಿದೇಶಿ ಆಟಗಾರರು ಇರಬಹುದು.

ಇದನ್ನೂ ಓದಿ : ಐಪಿಲ್‌ ಮೆಗಾ ಹರಾಜಿಗೆ ಆಟಗಾರರ ಪಟ್ಟಿ ಸಿದ್ದ: ಆಟಗಾರರ ಮೂಲ ಬೆಲೆ ಎಷ್ಟು ಗೊತ್ತಾ

ಇದನ್ನೂ ಓದಿ : ಲಕ್ನೋ ತಂಡಕ್ಕೆ ಕೆ.ಎಲ್.ರಾಹುಲ್‌ ನಾಯಕ, ಮಾರ್ಕಸ್ ಸ್ಟೊಯಿನಿಸ್, ರವಿ ಬಿಷ್ಣೋಯ್ ಸೇರ್ಪಡೆ

( KL Rahul become costliest player for IPL 2022)

Comments are closed.