Vodafone Idea : ವೋಡಾಫೋನ್ ಕಂಪನಿಯು ಮತ್ತೊಮ್ಮೆ ತನ್ನ ಗ್ರಾಹಕರ ಜೇಬಿಗೆ ಬರೆ ಎಳೆಯಲು ಸಿದ್ಧವಾಗಿದೆ. ಹೌದು ಕಂಪನಿಯು ತನ್ನ ಪ್ರಿಪೇಯ್ಡ್ ಹಾಗೂ ಪೋಸ್ಟ್ಪೇಯ್ಡ್ ಪ್ಲಾನ್ಗಳಲ್ಲಿ ದರ ಏರಿಕೆ ಮಾಡಲು ಮುಂದಾಗಿದೆ. ವೋಡಾಫೋನ್ ತನ್ನ ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ನವೆಂಬರ್ ತಿಂಗಳಲ್ಲಿ ಹೆಚ್ಚಿಸಿತ್ತು. ಕೇವಲ ವೋಡಾಫೋನ್ ಮಾತ್ರವಲ್ಲದೇ ಏರ್ಟೆಲ್ ಹಾಗೂ ರಿಲಯನ್ಸ್ ಜಿಯೋದ ಪ್ರಿಪೇಯ್ಡ್ ಪ್ಲಾನ್ಗಳ ದರ ಕೂಡ ತುಂಬಾನೇ ದುಬಾರಿಯಾಗಿದೆ. ಅಂದಹಾಗೆ ಬೆಲೆ ಏರಿಕೆಯ ಬಳಿಕ ವೋಡಾಫೋನ್ ಚಂದಾದಾರರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.
ಸಾಮಾನ್ಯವಾಗಿ ಬೆಲೆ ಏರಿಕೆಯಾದಾಗ ಮೂರ್ನಾಲ್ಕು ಘಟನೆಗಳು ನಡೆಯುತ್ತದೆ. ಅದರಲ್ಲಿ ಮೊದಲನೆಯದಾಗಿ ಕೆಲವು ದಿನಗಳ ಕಾಲ ರೀಚಾರ್ಜ್ ಮಾಡಿಸುವವರ ಸಂಖ್ಯೆಯು ತುಂಬಾನೇ ಕಡಿಮೆಯಾಗುತ್ತದೆ. ಎರಡನೆಯದಾಗಿ ಸಿಮ್ ಕನ್ಸೋಲಿಡೇಷನ್ ಉಂಟಾಗುತ್ತದೆ. ಮೂರನೆಯದಯದಾಗಿ ಚಂದಾದಾರರ ಸಂಖ್ಯೆಯಲ್ಲಿ ಇಳಿಮುಖವಾಗುತ್ತೆ ಎಂದು ವೋಡಾಫೋನ್ ಐಡಿಯಾ ಕಂಪನಿಯ ಎಂಡಿ ಹಾಗೂ ಸಿಇಓ ಹೇಳಿದ್ದಾರೆ. ಮೂರನೇ ತ್ರೈಮಾಸಿಕದಲ್ಲಿ ವೋಡಾಫೋನ್ ಐಡಿಯಾ ಕಂಪನಿಯು ಬರೋಬ್ಬರಿ 5.8 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿದೆ ಎನ್ನಲಾಗಿದೆ. ಅಂದಹಾಗೆ 4ಜಿ ಸಬ್ಸ್ಕ್ರೈಬರ್ ಬೇಸ್ನಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ.
ಪ್ರಸ್ತುತ ವೋಡಾಫೋನ್ ಕಂಪನಿಯು ನಷ್ಟದಲ್ಲಿ ಸಾಗುತ್ತಿದೆ. ಮುಳುಗುತ್ತಿರುವ ಹಡಗನ್ನು ಬಚಾವು ಮಾಡುವಂತೆ ಈ ಟೆಲಿಕಾಂ ಆಪರೇಟರ್ ತನ್ನ ಹೂಡಿಕೆದಾರರಲ್ಲಿ ಕೇಳಿಕೊಳ್ಳುತ್ತಿದೆ. ಕಳೆದ ವರ್ಷದ ಕಂಪನಿಯು 25 ಸಾವಿರ ಕೋಟಿ ರೂಪಾಯಿ ಹೆಚ್ಚಿಸಲು ಪ್ಲಾನ್ ಮಾಡಿತ್ತು.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಕಂಪನಿಯು ತನ್ನ ಪ್ರಚಲಿತ ಪ್ಲಾನ್ಗಳಲ್ಲಿ 25 ಪ್ರತಿಶತ ದರ ಏರಿಕೆ ಮಾಡಿತ್ತು. ವೋಡಾಫೋನ್ನ ಬೇಸಿಕ್ ಪ್ಲಾನ್ ಇದೀಗ 99 ರೂಪಾಯಿಯಿಂದ ಆರಂಭವಾಗುತ್ತಿದೆ. ತನ್ನ ಆದಾಯವನ್ನು ಸರಿದೂಗಿಸಿಕೊಳ್ಳುವ ಸಲುವಾಗಿ ಬೆಲೆ ಏರಿಕೆ ಮಾಡಿರುವುದಾಗಿ ಕಂಪನಿ ಹೇಳಿಕೊಂಡಿದೆ.
Your Vodafone Idea prepaid, postpaid plans may get costlier
ಇದನ್ನು ಓದಿ : relaxation in Karnataka : ಮೂರನೇ ಅಲೆಯಲ್ಲಿ ಜನರಿಗೆ ಕೊಂಚ ರಿಲ್ಯಾಕ್ಸ್: ಮುಂದಿನ ವಾರದಿಂದ ರದ್ದಾಗಲಿದ್ಯಾ ಟಫ್ ರೂಲ್ಸ್ ?
ಇದನ್ನೂ ಓದಿ : non ISI helmet : ಬೆಂಗಳೂರಿನಲ್ಲಿ ಇನ್ಮೇಲೆ ಈ ರೀತಿಯ ಹೆಲ್ಮೆಟ್ ಧರಿಸಿದರೆ ಬೀಳುತ್ತೆ ದಂಡ