sandwich sneakers : ಅಬ್ಬಬ್ಬಾ.. ಇಂಥಾ ವಿಚಿತ್ರ ಶೂವನ್ನು ನೀವು ನೋಡಿರೋಕೆ ಸಾಧ್ಯವೇ ಇಲ್ಲ

sandwich sneakers : ಇಂಟರ್ನೆಟ್​ನಲ್ಲಿ ಒಂದಾಂದರೊಂದು ಆಶ್ಚರ್ಯಕರ ವಿಚಾರವು ಇದ್ದೇ ಇರುತ್ತದೆ. ಅಲ್ಲದೇ ವಿಚಿತ್ರ ವಿಚಾರಗಳು ಇಂಟರ್ನೆಟ್​ನಲ್ಲಿ ಬಹುಬೇಗನೇ ವೈರಲ್​ ಆಗಿ ಬಿಡುತ್ತದೆ. ಅಂದಹಾಗೆ ಈ ಎಲ್ಲದರ ಬಗ್ಗೆ ಈಗ್ಯಾಕೆ ಮಾತನಾಡುತ್ತಿದ್ದಾರೆ ಎಂದು ನೀವು ಯೋಚಿಸುತ್ತಿರಬಹುದು. ಇದಕ್ಕೆ ಕಾರಣವಿದೆ. ಸೋಶಿಯಲ್​ ಮೀಡಿಯಾದಲ್ಲಿ ಸದ್ಯ ಸ್ಯಾಂಡ್​ವಿಚ್​ ಶೂನದ್ದೇ ಚರ್ಚೆ..! ಅರ್ರೆ ಇದೇನಿದು ಸ್ಯಾಂಡ್​ವಿಚ್​ ಶೂ ಅಂದರಾ ಈ ಬಗ್ಗೆ ವಿವರಣೆ ಇಲ್ಲಿದೆ ನೋಡಿ.


ಮೇಲೆ ಕಾಣಿಸುತ್ತಿರುವ ಫೋಟೋದಲ್ಲಿ ಯುವತಿಯು ಸ್ಯಾಂಡ್​ವಿಚ್​ನಂತೆಯೇ ಕಾಣಿಸುತ್ತಿರುವ ಶೂ ಧರಿಸಿರುವುದನ್ನು ನೀವು ನೋಡಿರುತ್ತೀರಿ. ಈ ಶೂ ನೋಡೋಕೆ ಥೇಟ್​ 3 ಡಿ ಸ್ಯಾಂಡ್​ವಿಚ್​ನಂತೆಯೇ ಇದೆ. ಅಂದರೆ ಬ್ರೆಡ್, ಸಲಾಮಿ, ಈರುಳ್ಳಿ ಹೀಗೆ ಎಲ್ಲವನ್ನು ಬಳಸಿ ಈ ಶೂ ತಯಾರಿಸಿದ್ದಾರೇನೋ ಎಂಬಂತೆ ಭಾಸವಾಗುತ್ತದೆ. ಅಂದಹಾಗೆ ಈ ಶೂ ಡಾಲ್ಸ್​ ಕಿಲ್ಸ್​ ವೆಬ್​ಸೈಟ್​ನಲ್ಲಿ ಲಭ್ಯವಿದೆ.


ನೀವಿದನ್ನು ಎಲ್ಲಿಗೆ ಧರಿಸುತ್ತೀರಿ..? ಎಂದು ಈ ಪೋಸ್ಟ್​ಗೆ ಶೀರ್ಷಿಕೆ ನೀಡಲಾಗಿದೆ. ಈ ಫೋಟೋವನ್ನು ಪೋಸ್ಟ್​ ಮಾಡಿದ ಕೆಲವೇ ಗಂಟೆಗಳಲ್ಲಿ 46 ಸಾವಿರಕ್ಕೂ ಅಧಿಕ ಲೈಕ್ಸ್​ಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಈ ಶೂಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಇದಕ್ಕೆ ಓರ್ವ ನೆಟ್ಟಿಗ ಇದು ನನಗೆ ಬೇಡ ಎಂದು ಹೇಳಿದ್ದರೆ, ಮತ್ತೊಬ್ಬರು ನಾನು ಈ ಶೂ ಧರಿಸುತ್ತೇನೆ. ನಾನು ವಿಭಿನ್ನವಾಗಿದ್ದೇನೆ. ಅಲ್ಲದೇ ನಿಮಗೆ ಇರೋದು ಒಂದೇ ಜೀವನ ಎಂದು ಬರೆದುಕೊಂಡಿದ್ದಾರೆ .
ಅಂದಹಾಗೆ ಈ ಸ್ಯಾಂಡ್​ವಿಚ್​ ಶೂನ ಬೆಲೆ ಮಾತ್ರ ನಿಮಗೆ ತಲೆ ತಿರುಗಿಸಬಹುದು. ಡಾಲ್ಸ್​​​ ಕಿಲ್ಸ್​ ವೆಬ್​ಸೈಟ್​ನಲ್ಲಿ ಲಭ್ಯವಿರುವ ಈ ವಿಚಿತ್ರ ಶೂ 98 ಡಾಲರ್​ಗೆ ಅಂದರೆ ಸರಿ ಸುಮಾರು 7322 ರೂಪಾಯಿಗಳಿಗೆ ಲಭ್ಯವಿದೆ..! ಅಂದಹಾಗೆ ಈ ಶೂಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು..?

Will you buy this Rs 7k pair of sandwich sneakers? Internet is divided

ಇದನ್ನು ಓದಿ : relaxation in Karnataka : ಮೂರನೇ ಅಲೆಯಲ್ಲಿ ಜನರಿಗೆ ಕೊಂಚ ರಿಲ್ಯಾಕ್ಸ್: ಮುಂದಿನ ವಾರದಿಂದ ರದ್ದಾಗಲಿದ್ಯಾ ಟಫ್ ರೂಲ್ಸ್ ?

ಇದನ್ನೂ ಓದಿ : non ISI helmet : ಬೆಂಗಳೂರಿನಲ್ಲಿ ಇನ್ಮೇಲೆ ಈ ರೀತಿಯ ಹೆಲ್ಮೆಟ್​ ಧರಿಸಿದರೆ ಬೀಳುತ್ತೆ ದಂಡ

Comments are closed.