ಸೋಮವಾರ, ಏಪ್ರಿಲ್ 28, 2025
HomeCrimeMarried 14 women : ಮಹಿಳೆಯರನ್ನು ವಂಚಿಸಿ 14 ಮದುವೆಯಾದಾತನ ಬಂಧನ

Married 14 women : ಮಹಿಳೆಯರನ್ನು ವಂಚಿಸಿ 14 ಮದುವೆಯಾದಾತನ ಬಂಧನ

- Advertisement -

ನವದೆಹಲಿ : ಆತ ವಿಚ್ಚೇಧಿತ ಮಹಿಳೆಯರನ್ನೇ ಟಾರ್ಗೇಟ್‌ ಮಾಡ್ತಿದ್ದ. ಮ್ಯಾಟ್ರಿಮೊನಿ ವೆಬ್‌ಸೈಟ್‌ಗಳ ಮೂಲಕ ವಿಚ್ಚೇಧಿತ ಮಹಿಳೆಯರನ್ನು ಸಂಪರ್ಕ ಮಾಡುತ್ತಿದ್ದ. ನಂತರ ಅವರನ್ನು ನಂಬಿಸಿ ಮದುವೆಯಾಗುತ್ತಿದ್ದ ಆಸಾಮಿ ಹಣವನ್ನು ವಂಚಿಸಿ ಪರಾರಿಯಾಗುತ್ತಿದ್ದ. ಇದೀಗ ಕೊನೆಯ ಪತ್ನಿ ನೀಡಿದ ದೂರಿನ ಆಧಾರದ ಮೇಲೆ 14 ಮಹಿಳೆಯರನ್ನು ಮದುವೆಯಾಗಿದ್ದ ವಂಚಕನನ್ನು (Married 14 women)ಪೊಲೀಸರು ಬಂಧಿಸಿದ್ದಾರೆ.

ಒಡಿಶಾದ ಕೇಂದ್ರಪಾರ ಜಿಲ್ಲೆಯ ಪಟ್ಕುರಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರ ನಿವಾಸಿಯಾಗಿದ್ದಾನೆ. ಕಳೆದ ನಲವತ್ತು ವರ್ಷಗಳಲ್ಲಿ ಈತ ಏಳು ರಾಜ್ಯಗಳಲ್ಲಿನ ಬರೋಬ್ಬರಿ 14 ಮಹಿಳೆಯರನ್ನು ವಂಚಿಸಿದ್ದಾನೆ. 1982 ರಲ್ಲಿ ಮೊದಲ ಬಾರಿಗೆ ಮದುವೆಯಾಗಿದ್ದ ಆಸಾಮಿ ನಂತರ 2002ರಲ್ಲಿ ಮೊದಲ ಪತ್ನಿಗೆ ತಿಳಿಯದಂತೆ ಎರಡನೇ ಮದುವೆಯಾಗಿದ್ದ. ಐದು ಮಕ್ಕಳ ತಂದೆಯಾಗಿದ್ದ ಆಸಾಮಿ, ನಂತರದಲ್ಲಿ ಹಲವು ಮಹಿಳೆಯರ ಜೊತೆಯಲ್ಲಿ ವಿವಾಹವಾಗಿದ್ದಾನೆ.

ಶಿಕ್ಷಕಿಯೋರ್ವಳನ್ನು ಮದುವೆಯಾಗಿದ್ದ ಆರೋಪಿ 2018 ರಲ್ಲಿ ಶಿಕ್ಷಕಿಯೋರ್ವರನ್ನು ನವದೆಹಲಿಯಲ್ಲಿ ಮದುವೆಯಾಗಿ ಭುವನೇಶ್ವರಕ್ಕೆ ಕರೆದೊಯ್ದಿದ್ದು. ಆದರೆ ನಂತರದಲ್ಲಿ ಆಕೆಗೆ ಕೈಕೊಟ್ಟಿದ್ದ. ಈ ಹಿನ್ನೆಲೆಯಲ್ಲಿ ಶಿಕ್ಷಕಿ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ತನಿಖೆಯನ್ನು ಕೈಗೊಂಡಿದ್ದರು. ಈ ವೇಳೆಯಲ್ಲಿ ಆಸಾಮಿಯ ಮದುವೆಯ ಪುರಾಣ ಬಯಲಾಗಿದೆ. ಆರೋಪಿ ಇದುವರೆಗೆ ದೆಹಲಿ, ಪಂಜಾಬ್, ಅಸ್ಸಾಂ, ಜಾರ್ಖಂಡ್ ಮತ್ತು ಒಡಿಶಾ ಸೇರಿದಂತೆ ಏಳು ರಾಜ್ಯಗಳಲ್ಲಿ ಮಹಿಳೆಯರನ್ನು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಬಂಧಿತ ಆರೋಪಿಯಿಂದ 11 ಎಟಿಎಂ ಕಾರ್ಡ್‍ಗಳು, ನಾಲ್ಕು ಆಧಾರ್ ಕಾರ್ಡ್‍ ಸೇರಿದಂತೆ ಇತರ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಈತ ಹದಿನಾಲ್ಕು ಮಹಿಳೆಯ ರನ್ನು ಮದುವೆಯಾಗಿದ್ದು, ಎಲ್ಲರಿಂದಲೂ ಹಣವನ್ನು ಪಡೆದು ವಂಚಿಸಿರೋದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಆದರೆ ಆತ ಅಷ್ಟೊಂದು ಮಹಿಳೆಯರನ್ನು ಮದುವೆಯಾಗಿದ್ದರೂ ಕೂಡ ಯಾರಿಗೂ ಅನುಮಾನವೇ ಬಾರದಂತೆ ವರ್ತಸುತ್ತಿದ್ದ.

ಇದನ್ನೂ ಓದಿ : 100 ರೂಪಾಯಿ ಸಾಲ ವಾಪಸ್​ ಕೊಟ್ಟಿಲ್ಲವೆಂದು ಸ್ನೇಹಿತನನ್ನೇ ಕೊಂದ ಭೂಪ ಅರೆಸ್ಟ್​

ಇದನ್ನೂ ಓದಿ : ತಾಯಿಯನ್ನು ಥಳಿಸಿ ಹತ್ಯೆಗೈದ ಪಾಪಿ ಮಗ : ಅನಾರೋಗ್ಯದ ನಾಟಕವಾಡಿದಾತ ಕೊನೆಗೂ ಅಂದರ್‌

ಇದನ್ನೂ ಓದಿ : ವಿದೇಶಕ್ಕೆ ತೆರಳುವುದಾಗಿ ಹೇಳಿದ್ದ ಆರ್ಕಿಟೆಕ್ಟ್ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ

ಇದನ್ನೂ ಓದಿ : ಕೇರಳ ಚಿನ್ನ ಸಾಗಣೆ ಪ್ರಕರಣದಲ್ಲಿ ಮತ್ತೊಂದು ತಿರುವು : ಶಿವಶಂಕರ್​ ವಿರುದ್ಧ ಆಕ್ರೋಶ ಹೊರಹಾಕಿದ ಸ್ವಪ್ನಾ

man who Married 14 women Arrested in Odisha

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular