ಮಂಗಳವಾರ, ಜೂನ್ 17, 2025
HomeSpecial StoryOil For Good Health: ಆರೋಗ್ಯಕ್ಕೆ ಯಾವ ಎಣ್ಣೆ ಉತ್ತಮ?

Oil For Good Health: ಆರೋಗ್ಯಕ್ಕೆ ಯಾವ ಎಣ್ಣೆ ಉತ್ತಮ?

- Advertisement -

ಎಣ್ಣೆ ನಮ್ಮ ಪ್ರತಿದಿನದ ಅಡುಗೆ-ಆಹಾರದಲ್ಲಿ ಅಗತ್ಯವಾಗಿ ಸೇವಿಸುವ ಪದಾರ್ಥ. ಎಣ್ಣೆ ಬಳಸದೇ ಅಡುಗೆ ಮಾಡಲು ಶಕ್ಯವುಂಟೇ? ಅಡುಗೆ ಎಣ್ಣೆಯಲ್ಲೂ ಬಹುವಿಧ. ಹಾಗಾದರೆ ಪ್ರತಿದಿನ ಅಡುಗೆಯಲ್ಲಿ ಯಾವ ಎಣ್ಣೆಯ ಬಳಕೆ ಆರೋಗ್ಯಕ್ಕೆ ಒಳ್ಳೆಯದು (Oil For Good Health) ಎಂಬ ಅಮೂಲ್ಯ ಮಾಹಿತಿಯನ್ನು ನೀವೂ ತಿಳಿದುಕೊಳ್ಳಿ.

ತೆಂಗಿನ ಎಣ್ಣೆ:
ತೆಂಗಿನ ಎಣ್ಣೆಯನ್ನು ದಕ್ಷಿಣ ಭಾರತದ ಅಡುಗೆಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ನೀವು ಶುದ್ಧ ತೆಂಗಿನ ಎಣ್ಣೆಯನ್ನು ಪ್ರತಿದಿನ ನಿಮ್ಮ ಅಡುಗೆಗಳಲ್ಲಿ ಉಪಯೋಗಿಸಬಹುದು.

ತುಪ್ಪ:
ತುಪ್ಪವು ಸಾಂಪ್ರದಾಯಿಕವಾದ ಆರೋಗ್ಯಕ್ಕೆ ಪೂರಕವಾದ ಕೊಬ್ಬಾಗಿದೆ. ಆದರೆ, ಇದು ಕೊಬ್ಬು ಹೆಚ್ಚು ಮಾಡುತ್ತದೆ ಎಂದು ತಪ್ಪಾಗಿ ಜನಪ್ರಿಯವಾಗಿದೆ. ತುಪ್ಪವು, ನೈಸರ್ಗಿಕ ಕೊಬ್ಬುಗಳಿಂದ ತೂಕ ಇಳಿಕೆ ಉತ್ತೇಜಿಸುವಂತಹ ಕೀಟೋ ಆಹಾರಗಳ ಭಾಗವಾಗಿದೆ.

ಎಳ್ಳೆಣ್ಣೆ:
ಎಳ್ಳೆಣ್ಣೆಯಲ್ಲಿರುವ ಲೆಪ್ಟಿನ್‌ಗಳು ಕೊಬ್ಬು ಶೇಖರಣೆಯನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ. ಈ ಎಣ್ಣೆಯು ಉಷ್ಣವರ್ಧಕವಾಗಿದೆ. ಆದ್ದರಿಂದ, ಚಳಿಗಾಲದಲ್ಲಿ ದೇಹದ ಉಷ್ಣವನ್ನು ಕಾಯ್ದುಕೊಳ್ಳುವ ಸಲುವಾಗಿ ಎಳ್ಳೆಣ್ಣೆಯನ್ನು ಸೇವಿಸುತ್ತಾರೆ.

ಆಲೀವ್‌ ಎಣ್ಣೆ:
ಆಲೀವ್‌ ಎಣ್ಣೆಯು ಆರೋಗ್ಯಕ್ಕೆ ಪೂರಕವಾದ ಕೊಬ್ಬು(fat)ಗಳಿಂದಲೇ ಕೂಡಿದೆ. ಇದು ಹೃದಯದ ರಕ್ತನಾಳಗಳ ಕಾಯಿಲೆಯನ್ನು ತಡೆಯಬಲ್ಲದು. ಅಷ್ಟೇ ಅಲ್ಲದೆ, ಆಲೀವ್‌ ಎಣ್ಣೆಯು ತೂಕ ನಷ್ಟಕ್ಕೆ ನೆರವಾಗುವ ಆರೋಗ್ಯಕರ ಕೊಬ್ಬುಗಳಲ್ಲಿ ಒಂದಾಗಿದೆ.

ಶೇಂಗಾ ಎಣ್ಣೆ:
ಶೇಂಗಾ ಎಣ್ಣೆಯು ಒಲಿಕ್‌ ಆಸಿಡ್‌ ಎನ್ನುವ ಏಕರೂಪದ ಕೊಬ್ಬನ್ನು ಹೊಂದಿದೆ. ಈ ಕೊಬ್ಬು ಹಸಿವನ್ನು ನಿಯಂತ್ರಣದಲ್ಲಿರಿಸಿ ತೂಕ ಇಳಿಕೆಯಲ್ಲಿ ನೆರವಾಗುವುದು.

ರೈಸ್‌ ಬ್ರೈನ್‌ ಎಣ್ಣೆ:
ರೈಸ್‌ ಬ್ರೈನ್‌ ಎಣ್ಣೆಯ ಮೊನೋಸ್ಯಾಚ್ಯುರೇಟೆಡ್‌ ಫ್ಯಾಟಿ ಆಸಿಡ್‌(ಏಕರೂಪದ ಫ್ಯಾಟಿ ಆಸಿಡ್‌)ಗಳನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ದೊರೆಯುತ್ತದೆ. ಇದು ಮಾರುಕಟ್ಟೆಯಲ್ಲಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುತ್ತದೆಯೆಂದು ಜನಪ್ರಿಯವಾಗಿದೆ. ರೈಸ್‌ ಬ್ರೈನ್‌ ಎಣ್ಣೆಯು ತೂಕ ಕಡಿಮೆ ಮಾಡಲೂ ಸಹಾಯ ಮಾಡುತ್ತದೆ.

ಆವಕಾಡೊ ಎಣ್ಣೆ:
ಆವಕಾಡೊ ಎಣ್ಣೆಯು ಉಳಿದ ಎಣ್ಣೆಗಳಿಗೆ ಹೋಲಿಸಿದರೆ ದರದಲ್ಲಿ ಸ್ವಲ್ಪ ಜಾಸ್ತಿಯೇ ಅನಿಸುತ್ತದೆ. ಆದರೆ, ಆವಕಾಡೊ ಎಣ್ಣೆಯು ತೂಕ ಇಳಿಸಿಕೊಳ್ಳುತ್ತಿರುವವರಿಗೆ ಪರ್ಫೆಕ್ಟ್‌ ಆಗಿದೆ. ಇದನ್ನು ಅಡುಗೆಗಳಲ್ಲಿ ಮತ್ತು ಸಲಾಡ್‌ಗಳ ಡ್ರೆಸಿಂಗ್‌ನಲ್ಲಿಯೂ ಬಳಸುತ್ತಾರೆ.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 1

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 2

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 3

(Oil For Good Health you must know before coocking)

RELATED ARTICLES

Most Popular