ಭಾರತದ ಪ್ರಸಿದ್ಧ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆ ‘ಚಕ್ದಾ ಎಕ್ಸ್‌ಪ್ರೆಸ್’ (Chakda Express) ಹೆಸರಿನಲ್ಲಿ ಚಲನಚಿತ್ರವಾಗುತ್ತಿದ್ದು ಪ್ರಸಿದ್ಧ ನಟಿ ಅನುಷ್ಕಾ ಶರ್ಮಾ (Anushka Sharma) ಜೂಲನ್ ಗೊಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರರಂಗಕ್ಕೆ ದೊಡ್ಡ ಹಿಟ್‌ನೊಂದಿಗೆ ಹಿಂತಿರುಗಲು ಯೋಜನೆ ಹಾಕಿಕೊಂಡಿರುವ ಅನುಷ್ಕಾ ಶರ್ಮಾ ಈ ಚಿತ್ರದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದ ಹಿರಿಯ ಮತ್ತು ಪ್ರಸಿದ್ಧ ಆಟಗಾರ್ತಿ ಜೂಲನ್ ಗೋಸ್ವಾಮಿಯಾಗಿ (Jhulan Goswami) ಬ್ಯಾಟ್ ಬೀಸಲಿದ್ದಾರೆ.
ಕಳೆದ ವಾರವಷ್ಟೇ ಅನುಷ್ಕಾ ಫಿಟ್‌ನೆಸ್ ಮತ್ತು ದೇಹದಾರ್ಢ್ಯದ ಮೇಲೆ ಹೆಚ್ಚಿನ ಗಮನಹರಿಸುವುದರೊಂದಿಗೆ ಚಕ್ಡಾ ಎಕ್ಸ್‌ಪ್ರೆಸ್ ಸಿನಿಮಾ ಶೂಟಿಂಗ್‌ಗೆ ತಯಾರಿಯನ್ನು ಪ್ರಾರಂಭಿಸಿದ್ದಾಗಿ ವರದಿಯಾಗಿತ್ತು. ಇತ್ತೀಚಿನ ಅಪ್‌ಡೇಟ್‌ಗಳ ಪ್ರಕಾರ ಅನುಷ್ಕಾ ಶರ್ಮಾ ಈಗ ಕ್ರಿಕೆಟ್ ಮೈದಾನಕ್ಕೆ ಕಾಲಿಟ್ಟಿದ್ದಾರೆ ಮತ್ತು ಮಹಿಳಾ ಕ್ರಿಕೆಟ್‌ನ ಸಾರ್ವಕಾಲಿಕ ಪ್ರಮುಖ ವಿಕೆಟ್-ಟೇಕರ್ ಆಗಿದ್ದ ಜೂಲನ್ ಗೊಸ್ವಾಮಿ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನಿಯಮಿತ ಅಭ್ಯಾಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಅಷ್ಟೇ ಅಲ್ಲದೇ ಅಮೆರಿಕಾದಲ್ಲಿಯೂ ಚಕ್ಡಾ ಎಕ್ಸ್‌ಪ್ರೆಸ್ ಚಿತ್ರದ ಬಹಳ ಮುಖ್ಯವಾದ ಸನ್ನಿವೇಶಗಳನ್ನು ಶೂಟಿಂಗ್ ಮಾಡುವುದು ನಿಕ್ಕಿಯಾಗಿದೆ. ಭಾರತದ ಮಹಿಳಾ ಕ್ರೀಡಾ ಕ್ಷೇತ್ರದ ಅತಿ ದೊಡ್ಡ ಐಕಾನ್ ಆಗಿರುವ ಜೂಲನ್ ಗೋಸ್ವಾಮಿ ಅವರ ಜೀವನಗಾಥೆಯನ್ನು ಆದಷ್ಟು ಪರಿಣಾಮಕಾರಿಯಾಗಿ ಚಿತ್ರಿಸುವ ಉದ್ದೇಶವನ್ನು ಚಿತ್ರತಂಡ ಹೊಂದಿದ್ದು ಅನುಷ್ಕಾ ಶರ್ಮಾ ಅವರಿಗೂ ಈ ಚಿತ್ರ ಅಷ್ಟೇ ಮಹತ್ವದ್ದಾಗಿದೆ. ಅಮೆರಿಕಾದಲ್ಲಿ ಒಟ್ಟು ಒಂದು ತಿಂಗಳ ಕಾಲ ಮತ್ತು ಇಂಗ್ಲೆಂಡಿನಲ್ಲಿಯೂ ತಿಂಗಳ ಕಾಲ ಶೂಟಿಂಗ್ ನಡೆಸಲು ಚಿತ್ರತಂಡ ನಿರ್ಧರಿಸಿದೆ ಎಂದು ಬಾಲಿವುಡ್ ಸುದ್ದಿತಾಣಗಳು ವರದಿ ಮಾಡಿವೆ.
ಕ್ಲೀನ್ ಸ್ಲೇಟ್ ಫಿಲ್ಮ್ಜ್ ಮತ್ತು ನೆಟ್‌ಫ್ಲಿಕ್ಸ್ ಫಿಲ್ಮ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಚಕ್ಡಾ ಎಕ್ಸ್‌ಪ್ರೆಸ್ ಟ್ರೈಲರ್ ಜನವರಿ 6 ರಂದು ಬಿಡುಗಡೆಯಾಗಿದೆ. ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜೂಲನ್ ಗೋಸ್ವಾಮಿ ಅವರು 20 ವರ್ಷಗಳನ್ನು ಪೂರೈಸಿದ ದಿನವಾಗಿದ್ದು ಟ್ರೈಲರ್ ಈಗಾಗಲೇ ಅಂತರ್ಜಾಲದಲ್ಲಿ ಸಾಕಷ್ಟು ಬಝ್ ಅನ್ನು ಸೃಷ್ಟಿಸಿದೆ.
Anushka Sharma, who is making her comeback to the movies with Chakda Xpress, stepped on to the field for some practice yesterday. #AnushkaSharma PC: PinkVilla pic.twitter.com/hl210lPh0G
— Female Cricket (@imfemalecricket) February 23, 2022
ಇದನ್ನೂ ಓದಿ:Bank Holidays March 2022: ಗ್ರಾಹಕರೇ ಗಮನಿಸಿ; ಮಾರ್ಚ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 13 ರಜಾದಿನ
(Anushka Sharma Chakdaha Express shooting at cricket ground Jhulan Goswami life story)