Gangubai Kathiawadi Controversy : ಗಂಗೂಬಾಯಿ ಕಾಠಿಯಾವಾಡಿಗೆ ಸುಪ್ರೀಂ ಸಂಕಷ್ಟ : ಟೈಟಲ್ ಬದಲಿಸಲು ನ್ಯಾಯಾಲಯ ಸೂಚನೆ

ಬಾಲಿವುಡ್ ನಲ್ಲಿ ಸದ್ದು ಮಾಡ್ತಿರೋ ಸಿನಿಮಾ ಗಂಗೂಬಾಯಿ ಕಾಠಿಯಾವಾಡಿ (Gangubai Kathiawadi Controversy) ಈಗ ಸಂಕಷ್ಟಕ್ಕೆ ಸಿಲುಕಿದೆ. ಸಿನಿಮಾದ ಟೈಟಲ್ ಬದಲಿಸುವಂತೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಬಿಡುಗಡೆ ವೇಳೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರೋ ಈ ಸೂಚನೆ ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಶೂಟಿಂಗ್ ಆರಂಭವಾದಾಗಿನಿಂದಲೂ ಗಂಗೂಬಾಯಿ ಪುತ್ರ ಸಿನಿಮಾಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದರು. ಆದರೆ ಇದ್ಯಾವುದಕ್ಕೂ ಸಂಜಯ್ ಲೀಲಾ ಬನ್ಸಾಲಿ ತಲೆಕೆಡಿಸಿಕೊಂಡಿರಲಿಲ್ಲ. ಈಗ ಸಿನಿಮಾ ಬಿಡುಗಡೆಗೆ ಎರಡು ದಿನ ಬಾಕಿ ಇರುವಾಗ ಸಿನಿಮಾ ದ ಟೈಟಲ್ ಗೆ ಕಂಟಕ ಎದುರಾಗಿದೆ.

ಒಂದೆಡೆ ನನ್ನ ತಾಯಿಯನ್ನು ಕೆಟ್ಟದಾಗಿ ವೇಶ್ಯೆಯಂತೆ ಚಿತ್ರಿಸಲಾಗಿದೆ ಎಂದು ಗಂಗೂಬಾಯಿ ಪುತ್ರ ಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಬನ್ಸಾಲಿ ಕ್ಯಾರೇ ಎಂದಿರಲಿಲ್ಲ. ಈ ಮಧ್ಯೆ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಟೈಟಲ್ ಬದಲಿಸುವಂತೆ ಕಾಂಗ್ರೆಸ್ ಶಾಸಕ ಅಮೀನ್ ಪಟೇಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಟೈಟಲ್ ಬದಲಿಸಲು ನಿರ್ದೇಶಕರಿಗೆ ಸೂಚನೆ ನೀಡಿದೆ.

ಮುಂಬೈನ ಕಾಮಾಠಿಪುರದ ಡಾನ್ ಗಂಗೂಬಾಯಿ ಕಾಠಿಯಾವಾಡಿ ಜೀವನ ಕತೆ ಆಧರಿಸಿ ಈ ಸಿನಿಮಾವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ಮಿಸಿದ್ದಾರೆ. ಆದರೆ ನನ್ನ ತಾಯಿಯನ್ನು ವೈಶ್ಯೆಯಂತೆ ಚಿತ್ರಿಸಿದ್ದಾರೆ. ಆದರೆ ನನ್ನ ತಾಯಿ ಸಮಾಜ ಸುಧಾರಕಿಯಾಗಿದ್ದರು ಎಂದು ಆಕೆಯ ಪುತ್ರ ವಾದಿಸಿದ್ದರು. ಆದರೆ ಸಂಜಯ್ ಲೀಲಾ ಬನ್ಸಾಲಿ ಮಾತ್ರ ಲೇಖಕ್ ಹುಸೇನ್ ಜೈದಿಯವರ ಮಾಫಿಯಾ ಕ್ವೀನ್ಸ್ ಆಫ್ ಮುಂಬೈ ಗ್ರಂಥವನ್ನು ಆಧರಿಸಿ ಸಿನಿಮಾ ನಿರ್ಮಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಇನ್ನೊಂದೆಡೆ ಸಂಜಯ್ ಲೀಲಾ ಬನ್ಸಾಲಿಯವರಿಗೂ ಹಾಗೂ ವಿವಾದಗಳಿಗೂ ಇನ್ನಿಲ್ಲದ ನಂಟು. ಈ ಹಿಂದೆ ಬನ್ಸಾಲಿ ನಿರ್ಮಿಸಿದ್ದ ಪದ್ಮಾವತಿ ಸಿನಿಮಾ ಕೂಡಾ ವಿವಾದಕ್ಕೆ ಕಾರಣವಾಗಿತ್ತು. ಇಲ್ಲೂ ಕೋರ್ಟ್ ಸೂಚನೆಯ ಬಳಿಕ ಸಿನಿಮಾದ ಟೈಟಲ್ ಬದಲಿಸಲಾಗಿತ್ತು. ಇನ್ನು ರಾಮಲೀಲಾ ಸಿನಿಮಾದಲ್ಲಿಯೂ ವಿವಾದ ಭುಗಿಲೆದ್ದಿತ್ತು. ಬಳಿಕ ಗೋಲಿಯೋಂಕ ರಾಸಲೀಲಾ ರಾಮಲೀಲಾ ಎಂದು ಬದಲಿಸಿದ್ದರು. ಈಗ ಇನ್ನೇನು ಸಿನಿಮಾ ರಿಲೀಸ್ ಗೆ ಎರಡು ದಿನ ಬಾಕಿ ಇರುವಾಗ ಸುಪ್ರೀಂ ಸೂಚನೆ ಚಿತ್ರತಂಡಕ್ಕೆ ಸಂಕಷ್ಟ ತಂದಿದ್ದು, ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದ ಟೈಟಲ್ ಯಾವ ರೀತಿ ಬದಲಿಸುತ್ತಾರೆ ಎಂಬುದು ಸದ್ಯ ಕುತೂಹಲ ಮೂಡಿಸಿದೆ.

ಇದನ್ನೂ ಓದಿ : ಬಾಲಿವುಡ್ ಆಯ್ತು ಈಗ ಹಾಲಿವುಡ್ ಸರದಿ : ಆಲಿಯಾ ಭಟ್ ಕೊಟ್ರು ಸಿಹಿಸುದ್ದಿ

ಇದನ್ನೂ ಓದಿ : ಸಂಚಲನ ಮೂಡಿಸಿದೆ ರಾಧಿಕಾ ಕುಮಾರಸ್ವಾಮಿ ಲೈವ್ ವಿಡಿಯೋ

(Bollywood Movie Gangubai Kathiawadi Controversy : Supreme Court Suggests Name Change)

Comments are closed.