Russia vs Ukraine Army Strenth: ರಷ್ಯಾ vs ಉಕ್ರೇನ್: ದಾಯಾದಿ ದೇಶಗಳ ಸೇನೆಗಳ ಬಲಾಬಲವೇನು?

ರಷ್ಯಾ ಉಕ್ರೇನ್ ವಿರುದ್ಧ ಯುದ್ಧವನ್ನೇನೋ ಸಾರಿದೆ. ಇದು ಮೂರನೆ ಮಹಾಯುದ್ಧದ ಆರಂಭ ಎಂಬ (3rd World War) ವಿಶ್ಲೇಷಣೆಗಳು ಸಹ ಕೇಳಿಬರುತ್ತಿವೆ. ಹಾಗಿದ್ದರೆ ರಷ್ಯಾ ಮತ್ತು ಉಕ್ರೇನ್ ಸೇನೆಗಳ ಬಲಾಬಲವೇನು ಎಂಬ ಪ್ರಶ್ನೆ ಎಲ್ಲರಿಗಗೂ ಹುಟ್ಟದಿರದು. ಎರಡೂ ದೇಶಗಳ ಸೇನೆಯ ಸಾಮರ್ಥ್ಯದ ಸ್ಥೂಲ ಪರಿಚಯ (Russia vs Ukraine Army Strenth) ನಿಮಗಾಗಿ ಇಲ್ಲಿದೆ. ರಷ್ಯಾ ಸೈನ್ಯವು 2014 ರಲ್ಲಿ ಉಕ್ರೇನ್‌ನಿಂದ ಕ್ರೈಮಿಯಾ ಪರ್ಯಾಯ ದ್ವೀಪವನ್ನು ಯಾವುದೇ ಹೋರಾಟವಿಲ್ಲದೆ ವಶಪಡಿಸಿಕೊಂಡಾಗ ಉಕ್ರೇನ್‌ನ ಸೈನ್ಯದ ಸ್ಥಿತಿ ಅಷ್ಟು ಚೆನ್ನಾಗಿರಲಿಲ್ಲ. ಆದರೆ 2014ರ ನಂತರ ಉಕ್ರೇನ್ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದು ಈ ಕುರಿತು ಶ್ಲಾಘನೆ ವ್ಯಕ್ತವಾಗಿತ್ತು. ಉಕ್ರೇನ್ ಸೇನೆ ಉತ್ತಮ ತರಬೇತಿ (Ukraine Army) ಹೊಂದಿದ್ದು ಯುದ್ಧಕ್ಕೆ  ಸಜ್ಜುಗೊಂಡಿದೆ ಮತ್ತು ದೇಶವನ್ನು ರಕ್ಷಿಸಲು ಸಜ್ಜಾಗಿದೆ ಎಂದು ಸ್ವತಃ ಉಕ್ರೇನ್ ಅಧ್ಯಕ್ಷರು ವಿಶ್ವಾಸ ವ್ಯಕ್ತಪಡಿಸಿ ಭಾಷಣ ಮಾಡಿದ್ದಾರೆ. ಆದರೆ ಉಕ್ರೇನ್‌ನಲ್ಲಿ ಭಾರೀ ಸಾವುನೋವುಗಳನ್ನು ಉಂಟುಮಾಡುವ ಸಾಮರ್ಥ್ಯವನ್ನು ರಷ್ಯಾ ಸೇನೆ (Russia Army)ಹೊಂದಿರುವುದಂತೂ ಸತ್ಯ.

ರಷ್ಯಾ ಮತ್ತು ಉಕ್ರೇನ್ ಯುರೋಶಿಯಾದ ಎರಡು ದೊಡ್ಡ ದೇಶಗಳಾಗಿವೆ. ಸದ್ಯ ನೆರೆಹೊರೆಯ ದೇಶಗಳಾಗಿರುವ ಇವು ಈಮುನ್ನ ಯುಎಸ್ಎಸ್ಆರ್  ಒಕ್ಕೂಟದಲ್ಲಿ ಒಟ್ಟಿಗಿದ್ದವು. ಯುಎಸ್‌ಎಸ್‌ಆರ್ ಒಕ್ಕೂಟದ 15 ಸೋವಿಯತ್ ಗಣರಾಜ್ಯಗಳ ಭಾಗವಾಗಿದ್ದರು. 1991 ರಲ್ಲಿ ಸೋವಿಯತ್ ಒಕ್ಕೂಟದ ಪತನದ ನಂತರ, ಉಕ್ರೇನ್ ಸ್ವತಂತ್ರ ದೇಶವಾಯಿತು ಮತ್ತು ರಷ್ಯಾದಿಂದ ದೂರವಾಯಿತು.

ರಷ್ಯಾ ಸೇನೆಯು ಸುಮಾರು 8,50,000 ಸಕ್ರಿಯ ಸಿಬ್ಬಂದಿಯನ್ನು ಹೊಂದಿದ್ದು ಉಕ್ರೇನ್ ಕೇವಲ 2,50,000 ಸಿಬ್ಬಂದಿಗಳನ್ನು ಹೊಂದಿದೆ. ರಷ್ಯಾದ ವಾಯುಶಕ್ತಿಯು ಉಕ್ರೇನ್‌ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ರಷ್ಯಾ 4,100 ಕ್ಕೂ ಹೆಚ್ಚು ವಿಮಾನಗಳನ್ನು ಹೊಂದಿದ್ದು ಅವುಗಳಲ್ಲಿ 772 ಫೈಟರ್‌ ಜೆಟ್‌ಗಳಾಗಿವೆ. ಆದರೆ ಉಕ್ರೇನ್ ಕೇವಲ 318 ಒಟ್ಟು ಏರ್‌ಕ್ರಾಪ್ಟ್‌ಗಳನ್ನು ಹೊಂದಿದೆ ಅವುಗಳಲ್ಲಿ ಕೇವಲ 69 ಯುದ್ಧವಿಮಾನಗಳಾಗಿವೆ.

ಇದಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

ಭೂ ಸೇನಾ ಶಕ್ತಿಗೆ ಸಂಬಂಧಿಸಿದಂತೆ, ರಷ್ಯಾ ಸುಮಾರು 12,500 ಟ್ಯಾಂಕ್‌ಗಳನ್ನು ಹೊಂದಿದೆ. ಉಕ್ರೇನ್ ಸುಮಾರು 2,600 ಟ್ಯಾಂಕ್‌ಗಳು ಮತ್ತು 12,000 ಶಸ್ತ್ರಸಜ್ಜಿತ ವಾಹನಗಳನ್ನು ಮಾತ್ರ ಹೊಂದಿದೆ. ರಷ್ಯಾ 30,000 ಕ್ಕೂ ಹೆಚ್ಚು ಶಸ್ತ್ರಸಜ್ಜಿತ ವಾಹನಗಳನ್ನು ಹೊಂದಿದೆ. ಯುದ್ಧ ವಿಮಾನಗಳ ವಿಷಯದಲ್ಲಿ, ರಷ್ಯಾ 772 ಯುದ್ಧವಿಮಾನಗಳನ್ನು ಹೊಂದಿದ್ದರೆ, ಉಕ್ರೇನ್ ಕೇವಲ 69 ಯುದ್ಧವಿಮಾನಗಳನ್ನು ಹೊಂದಿದೆ.

ಇತ್ತೀಚಿನ ವಾರಗಳಲ್ಲಿ, NATO ಒಕ್ಕೂಟದ ದೇಶಗಳು ಉಕ್ರೇನ್‌ಗೆ ಹೆಚ್ಚುವರಿಯಾಗಿ ಮಾರಣಾಂತಿಕ ಸನ್ನಿವೇಶಗಳಲ್ಲಿ ಬಲಸಲೆಂಬು ಸೇನಾ ನೆರವನ್ನು ನೀಡುತ್ತಿದ್ದು ಉದಾಹರಣೆಗೆ ಅಮೆರಿಕಾ 2,000 ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳನ್ನು ಒದಗಿಸಿದೆ.

ಇದಇದನ್ನೂ ಓದಿ: Russia vs Ukraine War : ರಷ್ಯಾ ಉಕ್ರೇನ್ ಯುದ್ಧ: ಭಾರತೀಯರ ಮೇಲೆ ಏನೇನು ಪರಿಣಾಮವಾಗಲಿದೆ?

(Russia vs Ukraine Army Strenth here is the comparision)

Comments are closed.