ಶೂಟಿಂಗ್ ಆರಂಭವಾದ ದಿನದಿಂದ ಪ್ರತಿನಿತ್ಯವೂ ಕುತೂಹಲ ಮೂಡಿಸುತ್ತಲೇ ಬಂದಿರೋ ಕೆಜಿಎಫ್-2 ಸಿನಿಮಾ ರಿಲೀಸ್ ಗೆ (KGF 2 Release) ಮುಹೂರ್ತ ಫಿಕ್ಸ್ ಆಗಿದೆ. ಆದರೆ ಸಿನಿಮಾ ತಂಡ ಮಾತ್ರ ಯಾವ ಅಪ್ಡೇಟ್ ನ್ನು ಬಿಟ್ಟುಕೊಡ್ತಿಲ್ಲ. 2021 ರ ಯಶ್ ಬರ್ತಡೇ ಗೆ ಹೊರಬಿದ್ದ ಟೀಸರ್ ಬಿಟ್ಟರೆ ಇನ್ಯಾವ ಮಾಹಿತಿಯೂ ಚಿತ್ರತಂಡದಿಂದ ಸಿಕ್ಕಿಲ್ಲ. ಇದರಿಂದ ಕಂಗೆಟ್ಟ ಅಭಿಮಾನಿಗಳು ಅರೇ ಇದೇನಪ್ಪಾ ಕತೇ ಅಂದುಕೊಳ್ಳುವ ಹೊತ್ತಿನಲ್ಲೇ ಕೆಜಿಎಫ್-2 ಚಿತ್ರತಂಡ ಟ್ರೇಲರ್ ಬೇಕಾ ಟೀಸರ್‌ಬೇಕಾ ಸಾಂಗ್ ಬೇಕಾ ಅಂತ ಅಭಿಮಾನಿಗಳನ್ನೇ ಕೇಳ್ತಿದೆ.
ಹೌದು ಕೆಜಿಎಫ್-2 ಕನ್ನಡ ಚಿತ್ರರಂಗದ ಜೊತೆಗೆ ಬಹು ಭಾಷೆಯ ನೀರಿಕ್ಷೆಯನ್ನು ಹೆಚ್ಚಿಸಿದ ಸಿನಿಮಾ. ಸದ್ಯ ಏಪ್ರಿಲ್ 14 ರಂದು ತೆರೆಗೆ ಬರಲು ಸಿದ್ಧವಾಗಿರೋ ಈ ಸಿನಿಮಾದ ಬಗ್ಗೆ ಯಶ್ ಅಭಿಮಾನಿಗಳು ಸಖತ್ ಕುತೂಹಲದಿಂದ ಕಾಯ್ತಿದ್ದಾರೆ. ಆದರೆ ಇದುವರೆಗೂ ಯಾವುದೇ ಅಪ್ಡೇಟ್ ನೀಡಿಲ್ಲ ಚಿತ್ರತಂಡ. ಹೀಗಾಗಿ ಪ್ರಧಾನಿ ಮೋದಿ ಕೆಜಿಎಫ್-2 ಬಗ್ಗೆ ಅಪ್ಡೇಟ್ ಕೇಳ್ತಿದ್ದಾರೆ ಎಂಬರ್ಥದ ಪೋಸ್ಟರ್ ಗಳನ್ನು ಕೂಡ ಹೊರಡಿಸಲಾಗಿತ್ತು. ಈಗ ಅಭಿಮಾನಿಗಳನ್ನು ಸಮಾಧಾನಿಸಲು ಚಿತ್ರತಂಡ ಸಖತ್ ಪ್ಲ್ಯಾನ್ ಮಾಡಿದೆ. ಇನ್ನೇನು ಆರಂಭ ವಾಗಲಿರೋ ಚಿತ್ರದ ಪ್ರಮೋಶನ್ ಕೂಡ ಗಮನದಲ್ಲಿಟ್ಟುಕೊಂಡು ಟೀಸರ್, ಟ್ರೇಲರ್ ಹಾಗೂ ಸಾಂಗ್ ರಿಲೀಸ್ ಮಾಡಲಿದೆಯಂತೆ.

ಇದಕ್ಕಾಗಿ ನಿಮಗೆ ಕೆಜಿಎಫ್ ಸಿನಿಮಾದ ಸಾಂಗ್, ಟ್ರೇಲರ್, ಟೀಸರ್ ಇದರಲ್ಲಿ ಯಾವುದು ಬೇಕು ಎಂದು ಅಭಿಮಾನಿಗಳನ್ನೇ ಪ್ರಶ್ನಿಸಿದ್ದು ಟ್ವಿಟರ್ ನಲ್ಲಿ ವೋಟಿಂಗ್ ಲಿಂಕ್ ನೀಡಿದೆ. ಹೊಂಬಾಳೆ ಫಿಲ್ಸಂನ ಅಧಿಕೃತ ಟ್ವೀಟರ್ ಅಕೌಂಟ್ ನಲ್ಲಿ ಗುರುವಾರ ಈ ಲಿಂಕ್ ಶೇರ್ ಮಾಡಲಾಗಿದ್ದು, what do you want to see first ? let the KGF army decide the next move ಎಂದು ಪ್ರಶ್ನೆ ಮಾಡಲಾಗಿದೆ. ಅಲ್ಲದೇ ಈ ಪ್ರಶ್ನೆಗೆ ಸಾಂಗ್ ,ಟ್ರೇಲರ್ ಅಥವಾ ಲೆಟ್ ಅಸ್ ಸಪ್ರೈಸ್ ಯೂ ಎಂಬ ಉತ್ತರ ನೀಡಲಾಗಿದೆ.

ಈ ಪೋಸ್ಟ್ ಗೆ ಈಗಾಗಲೇ ಲಕ್ಷಾಂತರ ಲೈಕ್ಸ್ ಹರಿದು ಬಂದಿದ್ದು ಒಂದು ಲಕ್ಷಕ್ಕೂ ಮೀರಿಜನರು ಕಮೆಂಟ್ ಮಾಡಿದ್ದಾರೆ. ಈ ಪೈಕಿ ಬಹುತೇಕರು ಟ್ರೇಲರ್ ಎಂದಿದ್ದರೇ ಇನ್ನು ಕೆಲವರು ಸಾಂಗ್ ಎಂದು ಕಮೆಂಟ್ ಮಾಡಿದ್ದಾರೆ. ಆದರೆ ಚಿತ್ರದ ಪ್ರಮೋಶನ್ ಸಿದ್ಧತೆ ಆರಂಭಿಸಿರೋ ಚಿತ್ರತಂಡ ಅಭಿಮಾನಿಗಳ ಯಾವ ಬೇಡಿಕೆ ಸ್ಪಂದಿಸುತ್ತೇ? ಚಿತ್ರದ ಅಪ್ಡೇಟ್ ನೀಡುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ : ಶಾರೂಖ್ ಖಾನ್ ಮಕ್ಕಳಿಗೆ ಕೈತುಂಬಾ ಕೆಲಸ; ಆರ್ಯನ್ ಖಾನ್ ಮುಂದಿನ ಗುರಿ ಸಿನಿಮಾ ನಿರ್ದೇಶನವಂತೆ
ಇದನ್ನೂ ಓದಿ : ನ್ಯಾಯಾಂಗ ನಿಂದನೆ ಪ್ರಕರಣ : ನಟ ಚೇತನ್ ಗೆ ಜಾಮೀನು ಮಂಜೂರು
( Ready for Release song and trailer in KGF 2 Movie)