Harsha Murder Case Updates : ಶಿವಮೊಗ್ಗ ಹರ್ಷ ಕೊಲೆ ಪ್ರಕರಣ : ಆರೋಪಿಗಳಿಗೆ 11 ದಿನ ಪೊಲೀಸ್ ಕಸ್ಟಡಿ

ಶಿವಮೊಗ್ಗ (Harsha Murder Case Updates): ರಾಜ್ಯವನ್ನೇ ಬೆಚ್ಚಿ‌ಬೀಳಿಸಿದ್ದ ಹಿಂದೂ ಪರ ಸಂಘಟನೆ‌ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ನೀಡಲಾಗಿದೆ. ರವಿವಾರ ರಾತ್ರಿ ನಡೆದಿದ್ದ ಭಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 10 ಆರೋಪಿಗಳನ್ನು ತನಿಖಾ ತಂಡ ಬಂಧಿಸಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಈಗ ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ಮನವಿ ಮೇರೆಗೆ ಶಿವಮೊಗ್ಗದ ಎರಡನೇ ಜೆಎಮ್ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸನ್ಮತಿ 11 ದಿನಗಳ ಕಾಲ ಆರೋಪಿಗಳನ್ನು ತನಿಖಾ ತಂಡದ ವಶಕ್ಕೆ ನೀಡಲಾಗಿದೆ.

ರವಿವಾರ ನಡೆದ ಕೊಲೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ವೇ ವಿಶೇಷ ಪೊಲೀಸ್ ತನಿಖಾ ತಂಡ ಇಬ್ಬರೂ ಆರೋಪಿಗಳನ್ನು ಬಂಧಿಸಿತ್ತು.‌ಬಂಧಿತ ಖಾಸೀಫ್ ಹಾಗೂ‌ನದೀಮ್ ಎಂಬ ಇಬ್ಬರು ಪ್ರಮುಖ ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಬಳಿಕ ಒಟ್ಟು 6 ಜನರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಫೆ.23 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ರೋಶನ್ ಹಾಗೂ ಜಾಫರ್ ಸಾದಿಕ್ ಎಂಬಾತನನ್ನು ತನಿಖಾ ತಂಡ ಬಂಧಿಸಿತ್ತು. ಮಾತ್ರವಲ್ಲದೇ ಕೊಲೆಗೆ ಬಳಸಲಾದ ಆರು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಮಧ್ಯೆ ವಿಶೇಷ ತನಿಖಾ ತಂಡ ಕೊಲೆಗೆ ಕಾರಣವಾದ ಅಂಶಗಳೇನು ಎಂಬುದರ ಬಗ್ಗೆ ಹೆಚ್ಚಿನ ತನಿಖೆ ಆರಂಭಿಸಿದೆ. ಈ ಮಧ್ಯೆ ಕೊಲೆಯಾಗುವ ಕೆಲವೇ ಗಂಟೆಗಳ ಮೊದಲು ಹರ್ಷನಿಗೆ ವೀಡಿಯೋ ಕೊಲೆ‌ಮಾಡಿದ್ದರೂ ಎನ್ನಲಾದ ಯುವತಿಯರ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ. ಹರ್ಷನ ಸ್ನೇಹಿತರು ನೀಡಿದ ಮಾಹಿತಿ ಆಧರಿಸಿ ತನಿಖೆ ಚುರುಕು ಗೊಳಿಸಿರುವ ಪೊಲೀಸರಿಗೆ ಕಾಲ್ ಮಾಡಿದ ಹುಡುಗಿಯರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿದೆಯಂತೆ.

ಹೀಗಾಗಿ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದ್ದು ಆರೋಪಿಗಳಿಂದ ಇನ್ನಷ್ಟು ಹೆಚ್ಚಿನ ಮಾಹಿತಿ ಹಾಗೂ ಈ ಕೃತ್ಯದ ಹಿಂದಿನ ಪ್ರೇರಣೆ ಯಾರು ? ನಿಜವಾಗಿಯೂ ಹತ್ಯೆ ಹಳೆಯ ದ್ವೇಷದಿಂದಲೇ ನಡೆದಿದ್ದಾ ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕಲಿದ್ದಾರೆ. ಪೊಲೀಸರ ತನಿಖೆಗೆ ಪತ್ತೆಯಾದ ಹರ್ಷ ಮೊಬೈಲ್ ಪೋನ್ ಇನ್ನಷ್ಟು ಬಲತುಂಬಿದ್ದು, ಈಗಾಗಲೇ ಪತ್ತೆಯಾಗಿರೋ ಹರ್ಷನ ಮೊಬೈಲ್ ನ್ನು ಪೊಲೀಸರು ರಿಟ್ರೀವ್ ಗಾಗಿ ಲ್ಯಾಬ್ ಗೆ ಕಳುಹಿಸಿ ಕೊಟ್ಟಿದ್ದಾರೆ.

ಇದನ್ನೂ ಓದಿ : ನ್ಯಾಯಾಂಗ ನಿಂದನೆ ಪ್ರಕರಣ : ನಟ ಚೇತನ್ ಗೆ ಜಾಮೀನು ಮಂಜೂರು

ಇದನ್ನೂ ಓದಿ : ಮೃತ ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್‌ ಮನೆಯಲ್ಲಿ ತುತ್ತು ಕೂಳಿಗೂ ತತ್ವಾರ : ಆಶ್ವಾಸನೆ ಕೊಟ್ಟು ಮರೆತ ಸರಕಾರ

(Harsha Murder Case Updates 11 day police custody for 10 accused)

Comments are closed.