Raayan Raj Sarja : ಅಪ್ಪಾ ಅಪ್ಪಾ ಎಂದ ಮೇಘನಾ ಸರ್ಜಾ ಪುತ್ರ ರಾಯನ್ ಸರ್ಜಾ : ವಿಡಿಯೋ ವೈರಲ್

ಸ್ಯಾಂಡಲ್ ವುಡ್ ನ ಬ್ರೇವ್ ನಟಿ ಮೇಘನಾ ಸರ್ಜಾ ತಮ್ಮ ಬದುಕಿ‌ನ ಕರಾಳ ದಿನಗಳನ್ನು ದಾಟಿ ಸಹಜ ಬದುಕಿಗೆ ಮರಳುತ್ತಿದ್ದಾರೆ. ಸದ್ಯ ಜಾಹೀರಾತು, ಸಿನಿಮಾ ರಿಯಾಲಿಟಿ ಶೋ ಎಂದೆಲ್ಲ ಬ್ಯುಸಿಯಾಗಿರೋ ಮೇಘನಾ ಎಷ್ಟೇ ಬ್ಯುಸಿ ಇದ್ದರೂ ಮಗ ರಾಯನ್ ಸರ್ಜಾ (Raayan Raj Sarja) ತುಂಟಾಟಗಳನ್ನು, ಅವನ‌ ಮೊದ ಮೊದಲ ಪ್ರಯತ್ನಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳೋದನ್ನು ತಪ್ಪಿಸೋದಿಲ್ಲ. ಈಗಲೂ ಹೊಸ ವಿಡಿಯೋವೊಂದನ್ನು ಕುಟ್ಟಿಮಾ ಶೇರ್ ಮಾಡಿದ್ದು, ಆ ವಿಡಿಯೋ ನೋಡಿದವರ ಕಣ್ಣುಗಳು ಹನಿಗೂಡುತ್ತಿವೆ.

ಹುಟ್ಟು ಹುಟ್ಟುತ್ತಲೇ ಕರುನಾಡಿಗರ ಪ್ರೀತಿಗೆ ಪಾತ್ರವಾದ ಕಂದ ರಾಯನ್ ರಾಜ್ ಸರ್ಜಾ. ರಾಯನ್ ತಂದೆ ಚಿರು ಸರ್ಜಾ ನಿಧನರಾದ ನಾಲ್ಕು ತಿಂಗಳ ಬಳಿಕ ಜನಿಸಿದ ಮಗು. ಆ ಕಾರಣಕ್ಕೋ ಏನೋ ಕನ್ನಡಿಗರಿಗೆ, ಸಿನಿಮಾ ಅಭಿಮಾನಿಗಳಿಗೆ ಈ ಕಂದನ ಮೇಲೆ ತುಸು ಪ್ರೀತಿ ಜಾಸ್ತಿ. ಅದಕ್ಕೆ ತಕ್ಕಂತೆ ನಟಿ ಮೇಘನಾ ರಾಜ್ ಕೂಡ ತಮ್ಮ ಪುಟ್ಟ ಕಂದನ ಅಪ್ಡೇಟ್ ಗಳನ್ನು ಸದಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇತ್ತೀಚಿಗಷ್ಟೇ ಒಂದು ವರ್ಷ ಪೊರೈಸಿದ ರಾಯನ್ ರಾಜ್ ಸರ್ಜಾ ಈಗ ಒಂದೊಂದೆ ಹಂತದ ಬೆಳವಣಿಗೆಯನ್ನು ಮುಗಿಸುತ್ತಿದ್ದಾರೆ. ಸದ್ಯ ರಾಯನ್ ಗೆ ಮೇಲೇರೆಡು ಕೆಳಗೆರಡು ಮೊಲದ ಹಲ್ಲುಗಳಂತ ಮುದ್ದಾದ ಹಲ್ಲುಗಳು ಬಂದಿವೆ. ಆದೇ ಪುಟ್ಟ ಹಲ್ಲಿನ ಬಾಯಿಬಿಟ್ಟು, ಬಾಯ್ತುಂಬ ರಾಯನ್ ರಾಜ್ ಸರ್ಜಾ ತನ್ನ ತಂದೆಯನ್ನು ನೆನಪಿಸಿಕೊಂಡಿದ್ದಾನೆ. ರಾಯನ್ ಅಪ್ಪಾ, ಪಪ್ಪಾ ಎಂದಿರುವ ವಿಡಿಯೋವೊಂದನ್ನು ಮೇಘನಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಮೊದಲು ತಾತ ಎನ್ನುವ ರಾಯನ್ ಬಳಿಕ ಮುದ್ದು ಮುದ್ದಾಗಿ ತಾಯಿ ಹೇಳಿದಂತೆಯೇ ಅಪ್ಪಾ ಅಪ್ಪಾ ಎಂದು ಚಿರುವನ್ನು ನೆನಪಿಸಿಕೊಂಡಿದ್ದಾನೆ. ಮೇಘನಾ ಹಂಚಿಕೊಂಡ ಈ ವಿಡಿಯೋ ಸಾಕಷ್ಟು ಅಭಿಮಾನಿಗಳು ಎಮೋಶನಲ್ ಕಮೆಂಟ್ ಮಾಡಿದ್ದು, ಆ ಪುಟ್ಟ ಮುದ್ದು ಕಂದನಿಂದ ತಂದೆಯನ್ನು ಕಸಿದುಕೊಂಡ ವಿಧಿಯನ್ನು ಶಪಿಸಿದ್ದಾರೆ.

ಇನ್ನು ಕೆಲವರು ಮಗುವಿನ ಮುದ್ದಾದ ಹಾವಭಾವ ಕಂಡು ಖುಷಿಯಾಗಿದ್ದಾರೆ. ಒಂದು ವರ್ಷಗಳ ಮಗುವಿನ ಆರೈಕೆಗಾಗಿ ಬ್ರೇಕ್ ಪಡೆದಿದ್ದ ಮೇಘನಾ ಈಗ ಮಗನ ಲಾಲನೆ ಪಾಲನೆ ಜೊತೆ ಜೊತೆಗೆ ಹೊಸ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಶಬ್ದ ಸಿನಿಮಾ ಮೂಲಕ ಮೇಘನಾ ಮತ್ತೆ ಚಂದನವನಕ್ಕೆ ಮರಳಿದ್ದಾರೆ. ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮೇಘನಾ ರಾಜ್ ಮೊದಲ ಬಾರಿಗೆ ಕ್ರೈಂ ಥ್ತಿಲ್ಲರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : ಸೆಟ್ ನಲ್ಲಿ ಮೇಘನಾ ರಾಜ್‌ ಸರ್ಜಾ ನೋಡಿ ಭಾವುಕರಾದ ನಿರ್ದೇಶಕ : ಶಬ್ದ ಸಿನಿಮಾದಲ್ಲಿ ಅಂತಹದ್ದೇನಾಯ್ತು ಗೊತ್ತಾ !

ಇದನ್ನೂ ಓದಿ : ಹ್ಯಾಪಿ ಬರ್ತಡೇ BIL ಎಂದ ನಟಿ ಮೇಘನಾ ರಾಜ್‌

( Raayan Raj Sarja son of Meghana Sarja and Chiranjeevi Sarja called Appa Appa, is a video viral)

Comments are closed.