ಕನ್ನಡಿಗ ಕೆ.ಎಲ್. ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ಆಯ್ಕೆಯಾದ ಬೆನ್ನಲ್ಲೇ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ (Mayank Agarwal) ಲಕ್ ಖುಲಾಯಿಸಿದೆ. ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ಮಯಾಂಕ್ (Mayank Agarwal new captain) ಆಯ್ಕೆಯಾಗಿದ್ದಾರೆ. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಮುಂದಿನ ನಾಯಕ ಯಾರೂ ಅನ್ನೋ ಪ್ರಶ್ನೆಗೆ ಉತ್ತರ ದೊರೆತಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಪಂಜಾಬ್ ತಂಡದ ನಾಯಕನಾಗುವ ಕುರಿತು ಈ ಹಿಂದೆಯೇ newsnext.live ವರದಿಯನ್ನು ಬಿತ್ತರಿಸಿತ್ತು.
ಪಂಜಾಬ್ ಕಿಂಗ್ಸ್ ತಂಡಕ್ಕೆ ಕೆ.ಎಲ್.ರಾಹುಲ್ ನಾಯಕರಾಗಿ ಸೇವೆ ಸಲ್ಲಿಸಿದ್ದು, ಈ ಬಾರಿ ಅವರು ಲಕ್ನೋ ತಂಡವನ್ನು ಸೇರಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಜಾಬ್ ಕಿಂಗ್ಸ್ ಹೊಸ ನಾಯಕನನ್ನು ನೇಮಕ ಮಾಡಿದೆ. ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ತಂಡದ ಉಪನಾಯಕನಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಕೆ.ಎಲ್.ರಾಹುಲ್ ಅನುಪಸ್ಥಿತಿಯಲ್ಲಿ ತಂಡದ ನಾಯಕನಾಗಿಯೂ ಮುನ್ನಡೆಸಿದ್ದರು. ರಾಹುಲ್ ತಂಡದಿಂದ ಹೊರ ನಡೆದ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ತಂಡ ಮಯಾಂಕ್ ಅಗರ್ವಾಲ್ (Mayank Agarwal) ಹಾಗೂ ಆರ್ಶದೀಪ್ ಸಿಂಗ್ ಅವರನ್ನು ಮಾತ್ರವೇ ತಂಡದಲ್ಲಿ ಉಳಿಸಿಕೊಂಡಿತ್ತು. ಇದೀಗ ಮಯಾಂಕ್ ಅಗರ್ವಾಲ್ ಅವರನ್ನು ನೇಮಕ ಮಾಡಿರುವ ಕುರಿತು ಪಂಜಾಬ್ ಕಿಂಗ್ಸ್ ತಂಡ ಟ್ವೀಟ್ ಮಾಡಿದೆ.

ಪಂಜಾಬ್ ಕಿಂಗ್ಸ್ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಮಯಾಂಕ್ ಅಗರ್ವಾಲ್ ನೇಮಕದ ಕುರಿತು ಪ್ರತಿಕ್ರಿಯಿಸಿದ್ದಾರೆ. ಮಯಾಂಕ್ (Mayank Agarwal)2018 ರಿಂದ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ ಮತ್ತು ಕಳೆದ ಎರಡು ವರ್ಷಗಳಿಂದ ನಾಯಕತ್ವವನ್ನು ಕಂಡಿದ್ದೇವೆ. ನಾವು ಇತ್ತೀಚೆಗೆ ಮುಕ್ತಾಯಗೊಂಡ ಹರಾಜಿನಲ್ಲಿ ಹೊಸ ತಂಡವನ್ನು ಆಯ್ಕೆ ಮಾಡಿದ್ದೇವೆ. ಅತ್ಯಾಕರ್ಷಕ ಯುವ ಪ್ರತಿಭೆ ಮತ್ತು ಅತ್ಯುತ್ತಮ ಅನುಭವಿ ಆಟಗಾರರನ್ನು ಹೊಂದಿದೆ. ಮಯಾಂಕ್ ಅವರ ನೇತೃತ್ವದಲ್ಲಿಯೇ ತಂಡವನ್ನು ಇನ್ನಷ್ಟು ಭವಿಷ್ಯದಲ್ಲಿ ಬಲಿಷ್ಠವಾಗಿಸುತ್ತೇವೆ. ನಾಯಕನಿಗೆ ಅಗತ್ಯವಿರುವ ಎಲ್ಲಾ ಗುಣಗಳು ಅವರಲ್ಲಿದೆ. ನಾಯಕನಾಗಿ ಅವರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಮತ್ತು ಅವರು ಮುನ್ನಡೆಸುತ್ತಾರೆ ಎಂದು ನಂಬುತ್ತೇನೆ ಎಂದಿದ್ದಾರೆ.

2011 ರಲ್ಲಿ ಪಾದಾರ್ಪಣೆ ಮಾಡಿದ ನಂತರ 100 ಐಪಿಎಲ್ ಪಂದ್ಯಗಳನ್ನು ಆಡಿರುವ ಮಯಾಂಕ್ ಅಗರ್ವಾಲ್, ಅಧಿಕೃತವಾಗಿ ಮೊದಲ ಬಾರಿಗೆ ಫ್ರಾಂಚೈಸಿಯ ನಾಯಕನಾಗಿ ನೇಮಕಗೊಂಡಿದ್ದಾರೆ. ಭಾರತೀಯ ಅಂತರರಾಷ್ಟ್ರೀಯ ಆಟಗಾರ, “ನಾನು 2018 ರಿಂದ ಪಂಜಾಬ್ ಕಿಂಗ್ಸ್‌ನಲ್ಲಿದ್ದೇನೆ ಮತ್ತು ಈ ಅದ್ಭುತ ಘಟಕವನ್ನು ಪ್ರತಿನಿಧಿಸಲು ನಾನು ತುಂಬಾ ಹೆಮ್ಮೆಪಡುತ್ತೇನೆ. ತಂಡವನ್ನು ಮುನ್ನಡೆಸುವ ಅವಕಾಶವನ್ನು ನೀಡಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ನಾನು ಈ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ಅತ್ಯಂತ ಪ್ರಾಮಾಣಿಕತೆಯಿಂದ, ಆದರೆ ಅದೇ ಸಮಯದಲ್ಲಿ, ಈ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ನಾವು ಹೊಂದಿರುವ ಪ್ರತಿಭೆಯಿಂದ ನನ್ನ ಕೆಲಸ ಸುಲಭವಾಗುತ್ತದೆ. ತಂಡದಲ್ಲಿ ಸಾಕಷ್ಟು ಅನುಭವಿ ಆಟಗಾರರಿದ್ದಾರೆ. ಅವರ ತಂಡವನ್ನು ಮುನ್ನಡೆಸುವ ಈ ಹೊಸ ಪಾತ್ರವನ್ನು ನನಗೆ ವಹಿಸಿದ್ದಕ್ಕಾಗಿ ನಾನು ತಂಡದ ಮ್ಯಾನೇಜ್‌ಮೆಂಟ್‌ಗೆ ಧನ್ಯವಾದ ಹೇಳುತ್ತೇನೆ. ನಾನು ಹೊಸ ಸೀಸನ್ ಮತ್ತು ಅದರೊಂದಿಗೆ ಹೊಸ ಸವಾಲುಗಳನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ ನಾಯಕ ಮಯಾಂಕ್ ಅಗರ್ವಾಲ್.
Mayank Agarwal in IPL
— Just Butter (@JustButter07) February 28, 2022
(2011-18)
Innings – 59
Runs – 934
Average – 16.7
Strike Rate – 123.9
(2019-21)
Innings – 36
Runs – 1196
Average – 34.2
Strike Rate – 146pic.twitter.com/gibDdkOMLL
ಮಯಾಂಕ್ ಅಗರ್ವಾಲ್ ( Mayank Agarwal ) ಹಾಗೂ ಅರ್ಶದೀಪ್ ಸಿಂಗ್ ಅವರನ್ನು ಮಾತ್ರವೇ ಪಂಜಾಬ್ ತಂಡವನ್ನು ಉಳಿಸಿಕೊಂಡಿತ್ತು. ನಂತರದಲ್ಲಿ ಶಿಖರ್ ಧವನ್, ಜಾನಿ ಬೈರ್ ಸ್ಟೋವ್, ಕಗಿಸೋ ರಬಾಡಾ, ಲಿವಿಂಗ್ ಸ್ಟೋನ್, ಶಾರೂಖ್ ಖಾನ್, ಹರ್ ಪ್ರಿತ್ ಬ್ರಾರ್, ರಾಹುಲ್ ಚಾಹರ್ ಅವರನ್ನು ತಂಡಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.
🚨 Attention #SherSquad 🚨
— Punjab Kings (@PunjabKingsIPL) February 28, 2022
Our 🆕© ➜ Mayank Agarwal
Send in your wishes for the new #CaptainPunjab 🎉#SaddaPunjab #PunjabKings #TATAIPL2022 @mayankcricket pic.twitter.com/hkxwzRyOVA
ಮಯಾಂಕ್ ಅಗರ್ವಾಲ್ (Mayank Agarwal) ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ :
ಮಯಾಂಕ್ ಅಗರ್ವಾಲ್ (ನಾಯಕ ), ಶಿಖರ್ ಧವನ್, ಕಗಿಸೊ ರಬಾಡ, ಜಾನಿ ಬೈರ್‌ಸ್ಟೋವ್, ಅರ್ಶ್ದೀಪ್ ಸಿಂಗ್ , ರಾಹುಲ್ ಚಾಹರ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಪ್ರಭ್‌ಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ, ಇಶಾನ್ ಪೊರೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಓಡಿಯನ್ ಸ್ಮಿತ್ , ಸಂದೀಪ್ ಶರ್ಮಾ, ರಾಜ್ ಅಂಗದ್ ಬಾವಾ, ರಿಷಿ ಧವನ್, ಪ್ರೇರಕ್ ಮಂಕಡ್, ವೈಭವ್ ಅರೋರಾ, ರಿಟಿಕ್ ಚಟರ್ಜಿ, ಬಲ್ತೇಜ್ ಧಂಡಾ, ಅನ್ಶ್ ಪಟೇಲ್, ನಾಥನ್ ಎಲ್ಲಿಸ್, ಅಥರ್ವ ಟೈಡೆ, ಭಾನುಕಾ ರಾಜಪಕ್ಸೆ, ಬೆನ್ನಿ ಹೋವೆಲ್.
ಇದನ್ನೂ ಓದಿ : ಕೆಎಲ್ ರಾಹುಲ್ ನಿರ್ಗಮನ : ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ನಾಯಕ
ಇದನ್ನೂ ಓದಿ : CSK : IPL 2022 ಮುನ್ನ ಚೆನ್ನೈಗೆ ಬಿಗ್ ಶಾಕ್; ಇಬ್ಬರು ಪ್ರಮುಖ ಆಟಗಾರರಿಗೆ ಗಾಯ
Mayank Agarwal new captain for Punjab Kings in IPL 2022